India vs Sri Lanka 3rd T20I: ಟೀಮ್ ಇಂಡಿಯಾದ ನಾಟಕೀಯ ಕುಸಿತ: ಲಂಕಾಗೆ ಸುಲಭ ಸವಾಲು

ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ

India vs Sri Lanka 3rd T20I: ಟೀಮ್ ಇಂಡಿಯಾದ ನಾಟಕೀಯ ಕುಸಿತ: ಲಂಕಾಗೆ ಸುಲಭ ಸವಾಲು
India vs Sri Lanka T20
Edited By:

Updated on: Jul 29, 2021 | 9:52 PM

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂ ನಡೆಯುತ್ತಿರುವ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಶ್ರೀಲಂಕಾಗೆ ಗೆಲ್ಲಲು 82 ರನ್​ಗಳ ಸುಲಭ ಗುರಿ ನೀಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ಶಿಖರ್ ಧವನ್ ಶೂನ್ಯಕ್ಕೆ ಔಟಾಗುವ ಮೂಲಕ ಮೊದಲಿಗರಾಗಿ ಹೊರ ನಡೆದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 9 ರನ್ ಬಾರಿಸಿ ರಮೇಶ್ ಮೆಂಡಿಸ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ (0) ಹಾಗೂ ರುತುರಾಜ್ ಗಾಯಕ್ವಾಡ್ (14) ಅವರನ್ನು ಎಲ್​ಬಿ ಬಲೆಗೆ ಬೀಳಿಸಿ ಹಸರಂಗ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.

ಇನ್ನು ಶನಕಾ ಎಸೆದ ಓವರ್​ನಲ್ಲಿ ನಿತೀಶ್ ರಾಣಾ (6) ಕ್ಯಾಚ್ ನೀಡಿ ಹೊರನಡೆದರು. ನಾಟಕೀಯ ಕುಸಿತಕ್ಕೊಳಗಾದ ಟೀಮ್ ಇಂಡಿಯಾ 36 ರನ್​ಗಳಿಸುವಷ್ಟರಲ್ಲಿ ಪ್ರ,ಮುಖ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ಒಂದಷ್ಟು ಪ್ರತಿರೋಧ ತೋರಿದರು. ಅದರಂತೆ ತಂಡದ ಮೊತ್ತ 50 ರ ಗಡಿದಾಟಿತು.

ಈ ವೇಳೆ 16 ರನ್​ಗಳಿಸಿದ್ದ ಭುವಿ ಕೂಡ ಹಸರಂಗ ಎಸೆತದಲ್ಲಿ ಔಟ್ ಆದರು. ಇದಾಗ್ಯೂ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ ಕುಲ್ದೀಪ್ ಯಾದವ್ 23 ರನ್ ಕಲೆಹಾಕುವ ಮೂಲಕ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 81 ಕ್ಕೆ ತಂದು ನಿಲ್ಲಿಸಿದರು. ಲಂಕಾ ಪರ ಹಸರಂಗ 4 ವಿಕೆಟ್ ಉರುಳಿಸಿ ಮಿಂಚಿದರೆ, ದುಸನ್ ಶನಕಾ 2 ವಿಕೆಟ್ ಕಬಳಿಸಿದರು.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ (Team India Playing 11) ಹೀಗಿದೆ:
ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಸಂದೀಪ್ ವಾರಿಯರ್, ಚೇತನ್ ಸಕರಿಯಾ, ರಾಹುಲ್ ಚಹರ್

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

Published On - 9:52 pm, Thu, 29 July 21