India vs Sri Lanka 3rd T20: ಚುಟುಕು ಕದನದಲ್ಲಿ ಮಂಡಿಯೂರಿದ ಭಾರತ: ಲಂಕಾಗೆ ಟಿ20 ಸರಣಿ

India vs Sri Lanka 3rd T20 Highlights: ಈ ಹಂತದಲ್ಲಿ ಜೊತೆಗೂಡಿದ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ಒಂದಷ್ಟು ಪ್ರತಿರೋಧ ತೋರಿದರು. ಅದರಂತೆ ತಂಡದ ಮೊತ್ತ 50 ರ ಗಡಿದಾಟಿತು.

India vs Sri Lanka 3rd T20: ಚುಟುಕು ಕದನದಲ್ಲಿ ಮಂಡಿಯೂರಿದ ಭಾರತ: ಲಂಕಾಗೆ ಟಿ20 ಸರಣಿ
india vs sri lanka
TV9kannada Web Team

| Edited By: Zahir PY

Jul 29, 2021 | 11:02 PM

ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು 7 ವಿಕೆಟ್​ಗಳಿಂದ ಮಣಿಸುವ ಮೂಲಕ ಶ್ರೀಲಂಕಾ (India vs Sri Lanka T20) ತಂಡ ಸರಣಿ ಗೆದ್ದುಕೊಂಡಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 38 ರನ್​ಗಳ ಜಯ ಸಾಧಿಸಿದರೆ, 2ನೇ ಪಂದ್ಯದಲ್ಲಿ ಲಂಕಾ 4 ವಿಕೆಟ್​ಗಳ ಗೆಲುವು ದಾಖಲಿಸಿತು. ಇದೀಗ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಮೂಲಕ ಏಕದಿನ ಸರಣಿ ಸೋಲಿನ ಸೇಡನ್ನು ಲಂಕಾ (Sri Lanka) ತಂಡ ತೀರಿಸಿಕೊಂಡಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾಗೆ ಉತ್ತಮ ಆರಂಭ ದೊರಕಿರಲಿಲ್ಲ. ನಾಯಕ ಶಿಖರ್ ಧವನ್ (Shikar Dhawan) ಶೂನ್ಯಕ್ಕೆ ಔಟಾಗುವ ಮೂಲಕ ಮೊದಲಿಗರಾಗಿ ಹೊರ ನಡೆದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ (Devdutt Padikkal) 9 ರನ್ ಬಾರಿಸಿ ರಮೇಶ್ ಮೆಂಡಿಸ್​ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸಂಜು ಸ್ಯಾಮ್ಸನ್ (0) ಹಾಗೂ ರುತುರಾಜ್ ಗಾಯಕ್ವಾಡ್ (14) ಅವರನ್ನು ಎಲ್​ಬಿ ಬಲೆಗೆ ಬೀಳಿಸಿ ಹಸರಂಗ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು.

ಇನ್ನು ಶನಕಾ ಎಸೆದ ಓವರ್​ನಲ್ಲಿ ನಿತೀಶ್ ರಾಣಾ (6) ಕ್ಯಾಚ್ ನೀಡಿ ಹೊರನಡೆದರು. ನಾಟಕೀಯ ಕುಸಿತಕ್ಕೊಳಗಾದ ಟೀಮ್ ಇಂಡಿಯಾ 36 ರನ್​ಗಳಿಸುವಷ್ಟರಲ್ಲಿ ಪ್ರ,ಮುಖ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ಒಂದಷ್ಟು ಪ್ರತಿರೋಧ ತೋರಿದರು. ಅದರಂತೆ ತಂಡದ ಮೊತ್ತ 50 ರ ಗಡಿದಾಟಿತು.

ಈ ವೇಳೆ 16 ರನ್​ಗಳಿಸಿದ್ದ ಭುವಿ ಕೂಡ ಹಸರಂಗ ಎಸೆತದಲ್ಲಿ ಔಟ್ ಆದರು. ಇದಾಗ್ಯೂ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ ಕುಲ್ದೀಪ್ ಯಾದವ್ 23 ರನ್ ಕಲೆಹಾಕುವ ಮೂಲಕ 20 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 81 ಕ್ಕೆ ತಂದು ನಿಲ್ಲಿಸಿದರು. ಲಂಕಾ ಪರ ಹಸರಂಗ 4 ವಿಕೆಟ್ ಉರುಳಿಸಿ ಮಿಂಚಿದರೆ, ದುಸನ್ ಶನಕಾ 2 ವಿಕೆಟ್ ಕಬಳಿಸಿದರು.

82 ರನ್​ಗಳ ಸುಲಭ ಗುರಿ ಪಡೆದ ಶ್ರೀಲಂಕಾ 5.4 ಓವರ್​ನಲ್ಲಿ 23 ರನ್​ ಕಲೆಹಾಕಿತು. ಈ ವೇಳೆ ರಾಹುಲ್ ಚಹರ್ ಎಸೆತದಲ್ಲಿ ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ (12) ಸುಲಭ ಕ್ಯಾಚ್ ನೀಡಿ ಹೊರ ನಡೆದರು. ಇನ್ನು 18 ರನ್ ಕಲೆಹಾಕಿದ ಮಿನೋದ್ ಭಾನುಕಾಗೂ ಚಹರ್ ಪೆವಿಲಿಯನ್ ಹಾದಿ ತೋರಿಸಿ ಟೀಮ್ ಇಂಡಿಯಾಗೆ 2ನೇ ಯಶಸ್ಸು ತಂದುಕೊಟ್ಟರು.

ಮೊದಲ 10 ಓವರ್​ಗಳಲ್ಲಿ ಶ್ರೀಲಂಕಾ 40 ರನ್ ಕಲೆಹಾಕುವ ಮೂಲಕ ಎಚ್ಚರಿಕೆಯ ಆಟವಾಡಿತು. ಈ ಹಂತದಲ್ಲಿ 12ನೇ ಓವರ್​ ಎಸೆದ ರಾಹುಲ್ ಚಹರ್ ಸಮರವಿಕ್ರಮ (6) ವಿಕೆಟ್ ಉರುಳಿಸಿದರು. ಆದರೆ ಅದಾಗಲೇ ಗೆಲುವಿನತ್ತ ಮುಖ ಮಾಡಿದ ಲಂಕಾ ತಂಡವು ಅಂತಿಮವಾಗಿ 3 ವಿಕೆಟ್ ನಷ್ಟದೊಂದಿಗೆ 14.3 ಓವರ್​ನಲ್ಲಿ ಗುರಿ ಮುಟ್ಟುವ ಮೂಲಕ ಸುಲಭ ಗೆಲುವು ತನ್ನದಾಗಿಸಿಕೊಂಡಿತು.

ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ (Team India Playing 11) ಹೀಗಿದೆ: ಶಿಖರ್ ಧವನ್ (ನಾಯಕ), ದೇವದತ್ ಪಡಿಕ್ಕಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಭುವನೇಶ್ವರ್ ಕುಮಾರ್, ಸಂದೀಪ್ ವಾರಿಯರ್, ಚೇತನ್ ಸಕರಿಯಾ, ರಾಹುಲ್ ಚಹರ್

ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್​..!

ಇದನ್ನೂ ಓದಿ: ಸೂರ್ಯಕುಮಾರ್ ಯಾದವ್​ಗೆ ಅವಕಾಶ ಕೈತಪ್ಪುವ ಆತಂಕ

(India vs Sri Lanka 3rd T20: Sri Lanka Won by 7 Wickets)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada