
ಏಷ್ಯಾಕಪ್ 2025 ರ (Asia Cup 2025) ಸೂಪರ್ 4 ಸುತ್ತು ಮುಗಿಯುವ ಹಂತಕ್ಕೆ ಬಂದಿದೆ. ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಪಂದ್ಯದೊಂದಿಗೆ ಸೂಪರ್ 4 ಹಂತಕ್ಕೆ ತೆರೆ ಬೀಳಲಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಮೊದಲ ಮುಖಾಮುಖಿ ಇದಾಗಿದೆ . ಟೀಂ ಇಂಡಿಯಾ ಈಗಾಗಲೇ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಏತನ್ಮಧ್ಯೆ, ಶ್ರೀಲಂಕಾ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಕೊನೆಗೊಳಿಸಲು ಮೈದಾನಕ್ಕೆ ಇಳಿಯಲಿದೆ. ಏಕೆಂದರೆ ಸೂಪರ್ 4 ಸುತ್ತಿನಲ್ಲಿ ಆಡಿದ ಮೊದಲೆರಡು ಪಂದ್ಯಗಳಲ್ಲಿ ಶ್ರೀಲಂಕಾ ಸೋಲನುಭವಿಸಿದ್ದು ಫೈನಲ್ಗೇರಲು ಅರ್ಹತೆ ಕಳೆದುಕೊಂಡಿದೆ. ವಾಸ್ತವವಾಗಿ ಟಿ20 ಏಷ್ಯಾಕಪ್‌ನಲ್ಲಿ ಹಾಲಿ ಚಾಂಪಿಯನ್ ಆಗಿರುವ ಶ್ರೀಲಂಕಾ ಪ್ರಶಸ್ತಿ ಗೆಲ್ಲುವ ಪ್ರಮುಖ ತಂಡಗಳಲ್ಲಿ ಒಂದಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನ ಚಾಂಪಿಯನ್ ಪಟ್ಟವನ್ನು ಕಳೆದುಕೊಳ್ಳುವಂತೆ ಮಾಡಿತು.
ಭಾರತ ಮತ್ತು ಶ್ರೀಲಂಕಾ ನಡುವಿನ ಸೂಪರ್ 4 ಪಂದ್ಯ ಸೆಪ್ಟೆಂಬರ್ 26 ರಂದು ನಡೆಯಲಿದೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸೂಪರ್ 4 ಹಂತದ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಪಂದ್ಯದ ಟಾಸ್ ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ನಡೆಯಲಿದೆ. ಪಂದ್ಯವು 30 ನಿಮಿಷಗಳ ನಂತರ, ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ಭಾರತದಲ್ಲಿ, ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಟೆನ್ 1, ಸೋನಿ ಸ್ಪೋರ್ಟ್ಸ್ ಟೆನ್ 1 ಎಚ್‌ಡಿ , ಸೋನಿ ಸ್ಪೋರ್ಟ್ಸ್ ಟೆನ್ 5 ಮತ್ತು ಸೋನಿ ಸ್ಪೋರ್ಟ್ಸ್ ಟೆನ್ 5 ಎಚ್‌ಡಿ ಟಿವಿ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಪಂದ್ಯವನ್ನು ಸೋನಿ ಲಿವ್ ಅಪ್ಲಿಕೇಶನ್‌ನಲ್ಲಿಯೂ ನೇರ ಪ್ರಸಾರ ಮಾಡಲಾಗುತ್ತದೆ .
Asia Cup 2025: ಬಾಂಗ್ಲಾವನ್ನು ಮಣಿಸಿ ಶ್ರೀಲಂಕಾದ ದಾಖಲೆ ಮುರಿದ ಟೀಂ ಇಂಡಿಯಾ
ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ , ಕುಸಲ್ ಮೆಂಡಿಸ್ , ಕುಸಲ್ ಪೆರೇರಾ , ನುವಾನಿಡು ಫೆರ್ನಾಂಡೋ , ಕಮಿಂದು ಮೆಂಡಿಸ್ , ಕಮಿಲ್ ಮಿಶ್ರಾ , ದಸುನ್ ಶನಕ , ವನಿಂದು ಹಸರಂಗ , ದುನಿತ್ ವೆಲ್ಲಲಾಗೆ , ಚಾಮಿಕ ಕರುಣಾರತ್ನೆ , ಮಹೇಶ ತೀಕ್ಷಣ, ದುಷ್ಮಂತ ಚಮೀರ, ಬಿನೂರ ಫೆರ್ನಾಂಡೋ, ನುವಾನ್ ತುಷಾರ, ಮಥೀಶ ಪತಿರಣ, ಜನಿತ್ ಲಿಯಾನಗೆ.
ಟೀಮ್ ಇಂಡಿಯಾ : ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ ( ಉಪನಾಯಕ ) , ಸಂಜು ಸ್ಯಾಮ್ಸನ್ , ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:50 pm, Thu, 25 September 25