ಒಂದು ಪಂದ್ಯ, ಹಲವು ದಾಖಲೆ: ಹೊಸ ಇತಿಹಾಸ ನಿರ್ಮಿಸಿದ ಏಷ್ಯನ್ ಚಾಂಪಿಯನ್ಸ್​

| Updated By: ಝಾಹಿರ್ ಯೂಸುಫ್

Updated on: Sep 17, 2023 | 7:40 PM

Team India Records: ಏಕದಿನ ಕ್ರಿಕೆಟ್​ನ ಫೈನಲ್ ಪಂದ್ಯದಲ್ಲಿ ಅತೀ ದೊಡ್ಡ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸೀಸ್ ಪಡೆದ 2003 ರಲ್ಲಿ 226 ಎಸೆತಗಳು ಬಾಕಿಯಿರುವಂತೆ ಗೆಲುವು ದಾಖಲಿಸಿತ್ತು. ಇದೀಗ ಟೀಮ್ ಇಂಡಿಯಾ 263 ಎಸೆತಗಳನ್ನು ಉಳಿಸಿ ಅಮೋಘ ಗೆಲುವು ದಾಖಲಿಸಿದೆ.

ಒಂದು ಪಂದ್ಯ, ಹಲವು ದಾಖಲೆ: ಹೊಸ ಇತಿಹಾಸ ನಿರ್ಮಿಸಿದ ಏಷ್ಯನ್ ಚಾಂಪಿಯನ್ಸ್​
Team India
Follow us on

ಏಷ್ಯಾಕಪ್​ನ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ದಾಖಲಿಸುವ ಮೂಲಕ ಟೀಮ್ ಇಂಡಿಯಾ ಹಲವು ದಾಖಲೆ ಬರೆದಿದೆ. ಅದರಲ್ಲಿ ಬಹುತೇಕ ವಿಶ್ವ ದಾಖಲೆಗಳು ಎಂಬುದೇ ಇಲ್ಲಿ ವಿಶೇಷ. ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಟೀಮ್ ಇಂಡಿಯಾ ವೇಗಿಗಳು ಲಂಕಾ ನಾಯಕನ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದರು.

ಮೊದಲ ಓವರ್​ನಲ್ಲೇ ಪ್ರಥಮ ವಿಕೆಟ್ ಪಡೆದು ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಮಿಯಾ ಮ್ಯಾಜಿಕ್ ಶುರುವಾಯಿತು. 4ನೇ ಓವರ್​ನಲ್ಲಿ ಒಟ್ಟು 4 ವಿಕೆಟ್ ಕಬಳಿಸಿ ಸಿರಾಜ್ ಲಂಕಾ ತಂಡಕ್ಕೆ ಬಿಗ್ ಶಾಕ್ ನೀಡಿದರು.

ಅಲ್ಲದೆ ಕೇವಲ 7 ಓವರ್​ಗಳಲ್ಲಿ ಸಿರಾಜ್ 21 ರನ್ ನೀಡಿ 6 ವಿಕೆಟ್ ಪಡೆದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 2.2 ಓವರ್​ಗಳಲ್ಲಿ 3 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ತಂಡವು 15.2 ಓವರ್​ಗಳಲ್ಲಿ 50 ರನ್​ಗಳಿಸಿ ಸರ್ವಪತನ ಕಂಡಿತು.

ಕೇವಲ 51 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ ಕಣಕ್ಕಿಳಿದರು. ನಿರೀಕ್ಷೆಯಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಕೇವಲ 6.1 ಓವರ್​ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಇದರೊಂದಿಗೆ ಹಲವು ದಾಖಲೆಗಳು ಟೀಮ್ ಇಂಡಿಯಾ ಪಾಲಾಯಿತು. ಆ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ…

ಫೈನಲ್‌ನಲ್ಲಿ ಅತಿ ದೊಡ್ಡ ಗೆಲುವು (ಬಾಕಿ ಎಸೆತಗಳ ಲೆಕ್ಕದಲ್ಲಿ):

ಏಕದಿನ ಕ್ರಿಕೆಟ್​ನ ಫೈನಲ್ ಪಂದ್ಯದಲ್ಲಿ ಅತೀ ದೊಡ್ಡ ಗೆಲುವು ದಾಖಲಿಸಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿತ್ತು. ಆಸೀಸ್ ಪಡೆದ 2003 ರಲ್ಲಿ 226 ಎಸೆತಗಳು ಬಾಕಿಯಿರುವಂತೆ ಗೆಲುವು ದಾಖಲಿಸಿತ್ತು. ಇದೀಗ ಟೀಮ್ ಇಂಡಿಯಾ 263 ಎಸೆತಗಳನ್ನು ಉಳಿಸಿ ಅಮೋಘ ಗೆಲುವು ದಾಖಲಿಸಿದೆ.

  • 263 ಎಸೆತಗಳು ಬಾಕಿ : ಭಾರ vs ಶ್ರೀಲಂಕಾ (ಕೊಲಂಬೊ, 2023)
  • 226 ಎಸೆತಗಳು ಬಾಕಿ: ಆಸ್ಟ್ರೇಲಿಯಾ vs ಇಂಗ್ಲೆಂಡ್ (ಸಿಡ್ನಿ, 2003)
  • 179 ಎಸೆತಗಳು ಬಾಕಿ: ಆಸ್ಟ್ರೇಲಿಯಾ vs ಪಾಕಿಸ್ತಾನ್ (ಲಾರ್ಡ್ಸ್ 1999)

ಅತೀ ಕಡಿಮೆ ಬೌಲ್​ ಮಾಡಿದ ಪಂದ್ಯ:

ಈ ಪಂದ್ಯಗಳಲ್ಲಿ ಟೀಮ್ ಇಂಡಿಯಾ 15.2 ಓವರ್​ಗಳನ್ನು ಎಸೆದರೆ, ಶ್ರೀಲಂಕಾ ಕೇವಲ 6.1 ಓವರ್​ ಬೌಲ್ ಮಾಡಿದೆ. ಅಂದರೆ ಕೇವಲ 129 ಎಸೆತಗಳಲ್ಲಿ ಪಂದ್ಯ ಮುಗಿದಿದೆ. ಇದು ಏಕದಿಕ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಕಡಿಮೆ ಎಸೆತಗಳ ಮೂರನೇ ಏಕದಿನ ಪಂದ್ಯವಾಗಿದೆ.

  • 104 ಎಸೆತಗಳು- ನೇಪಾಳ vs ಯುಎಸ್​ಎ (ಕೀರ್ತಿಪುರ್, 2020)
  • 120 ಎಸೆತಗಳು- ಶ್ರೀಲಂಕಾ vs ಝಿಂಬಾಬ್ವೆ (ಕೊಲಂಬೊ, 2001)
  • 129 ಎಸೆತಗಳು- ಭಾರತ vs ಶ್ರೀಲಂಕಾ (ಕೊಲಂಬೊ, 2023)
  • 140 ಎಸೆತಗಳು- ಶ್ರೀಲಂಕಾ vs ಕೆನಡಾ (ಪಾರ್ಲ್, 2003)

ಟೀಮ್ ಇಂಡಿಯಾದ ಅತೀ ದೊಡ್ಡ ಗೆಲುವು:

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ಟೀಮ್ ಇಂಡಿಯಾ ಅತೀ ದೊಡ್ಡ ಗೆಲುವಾಗಿದೆ. ಏಕೆಂದರೆ ಭಾರತ ತಂಡವು ಈ ಪಂದ್ಯದಲ್ಲಿ 263 ಎಸೆತಗಳನ್ನು ಉಳಿಸಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿದೆ.

  • 263 ಎಸೆತಗಳು: ಭಾರತ vs ಶ್ರೀಲಂಕಾ (ಕೊಲಂಬೊ, 2023)
  • 231 ಎಸೆತಗಳು: ಭಾರತ vs ಕೀನ್ಯಾ (ಬ್ಲೋಮ್‌ಫಾಂಟೈನ್, 2001)
  • 211 ಎಸೆತಗಳು: ಭಾರತ vs ವೆಸ್ಟ್ ಇಂಡೀಸ್ (ತಿರುವನಂತಪುರ, 2018)
  • 188 ಎಸೆತಗಳು: ಭಾರತ vs ಇಂಗ್ಲೆಂಡ್ (ದಿ ಓವಲ್, 2022)

ಇದನ್ನೂ ಓದಿ: 16 ಎಸೆತಗಳಲ್ಲಿ 5 ವಿಕೆಟ್: ವಿಶ್ವ ದಾಖಲೆ ಬರೆದ ಮೊಹಮ್ಮದ್ ಸಿರಾಜ್

ಫೈನಲ್​ನಲ್ಲಿ 10 ವಿಕೆಟ್​ಗಳ ಭರ್ಜರಿ ಜಯ:

ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 2ನೇ ಬಾರಿ ಫೈನಲ್ ಪಂದ್ಯದಲ್ಲಿ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ 1998 ರಲ್ಲಿ ಝಿಂಬಾಬ್ವೆ ವಿರುದ್ಧ ಅಮೋಘ ಗೆಲುವು ದಾಖಲಿಸಿತ್ತು.

  • 197/0- ಭಾರತ vs ಝಿಂಬಾಬ್ವೆ (ಶಾರ್ಜಾ, 1998)
  • 118/0- ಆಸ್ಟ್ರೇಲಿಯಾ vs ಇಂಗ್ಲೆಂಡ್ (ಸಿಡ್ನಿ, 2003)
  • 51/0 ಭಾರತ vs ಶ್ರೀಲಂಕಾ (ಕೊಲಂಬೊ, 2023)