India vs Sri Lanka: ಟಾಸ್ ಗೆದ್ದು ಸಂಭ್ರಮಿಸಿದ ಶಿಖರ್ ಧವನ್: ವಿಡಿಯೋ ವೈರಲ್

| Updated By: ಝಾಹಿರ್ ಯೂಸುಫ್

Updated on: Jul 23, 2021 | 7:00 PM

Shikhar Dhawan Toss Win Celebration: ಈ ಪಂದ್ಯದ ಮೂಲಕ ಐವರು ಆಟಗಾರರು ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿರುವುದು ಮತ್ತೊಂದು ವಿಶೇಷ. ಶ್ರೀಲಂಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಅವಕಾಶ ಪಡೆದರು.

India vs Sri Lanka: ಟಾಸ್ ಗೆದ್ದು ಸಂಭ್ರಮಿಸಿದ ಶಿಖರ್ ಧವನ್: ವಿಡಿಯೋ ವೈರಲ್
Shikhar Dhawan
Follow us on

ಭಾರತ-ಶ್ರೀಲಂಕಾ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಅದಕ್ಕೂ ಮುನ್ನ ಭಾರತ ಟಾಸ್ ಗೆದ್ದಿದೆ ಎಂದು ಘೋಷಿಸುತ್ತಿದ್ದಂತೆ ನಾಯಕ ಶಿಖರ್ ಧವನ್ ತಮ್ಮ ಟ್ರೇಡ್ ಮಾರ್ಕ್ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದರು. ಹೀಗೆ ಸಂಭ್ರಮಿಸಲು ಕಾರಣ ಕೂಡ ಇದೆ. ಹೌದು, ಮೊದಲ ಎರಡು ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನಾಯಕ ದಾಸುನ್ ಶನಕಾ ಟಾಸ್ ಗೆದ್ದಿದ್ದರು. ಇದರ ಬೆನ್ನಲ್ಲೇ ಶಿಖರ್ ಧವನ್ ಅವರನ್ನು ಟ್ರೋಲ್ ಮಾಡಲಾಗಿತ್ತು. ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಅತೀ ಕಡಿಮೆ ಟಾಸ್ ಗೆದ್ದಿದ್ದಾರೆ ಎಂದೇ ಹೇಳಬಹುದು. ಟಾಸ್ ವಿಷಯದಲ್ಲಿ ನತದೃಷ್ಟ ಎಂದೇ ಬಿಂಬಿತವಾಗಿರುವ ಕೊಹ್ಲಿಯ ದಾಖಲೆಯನ್ನು ಶಿಖರ್ ಮುರಿಯಲಿದ್ದಾರೆ ಎಂಬಿತ್ಯಾದಿಯಾಗಿ ಟ್ರೋಲ್ ಮಾಡಲಾಗಿತ್ತು.

ಆದರೆ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವುದುದನ್ನು ಘೋಷಿಸುತ್ತಿದ್ದಂತೆಯೇ ಶಿಖರ್ ಧವನ್ ಅವರ ಪ್ರತಿಕ್ರಿಯೆ ಎಲ್ಲರಲ್ಲಿಯೂ ನಗು ಮೂಡಿಸಿತ್ತು. ಟಾಸ್ ವಿನ್ ಎನ್ನುತ್ತಿದ್ದಂತೆ ಧವನ್ ಟ್ರೇಡ್ ಮಾರ್ಕ್​ ಸ್ಟ್ರೈಲ್​ ಕಬಡ್ಡಿ ಶೈಲಿಯಲ್ಲಿ ತೊಡೆತಟ್ಟಿ ಕೈಮೇಲೆತ್ತಿ ಸಂಭ್ರಮಿಸಿದರು. ಧವನ್ ಅವರ ಈ ಸಂಭ್ರಮ ನೋಡಿ ಕಾಮೆಂಟೇಟರ್‌ಗಳು ಕೂಡ ನಗೆಗಡಲಲ್ಲಿ ತೇಲಿದರು.

ಸಾಮಾನ್ಯವಾಗಿ ಶಿಖರ್ ಧವನ್ ಕ್ಯಾಚ್ ಹಿಡಿದಾಗ ಕಾಣುವ ತೊಡೆತಟ್ಟಿ ಸಂಭ್ರಮಿಸುತ್ತಾರೆ. ಇದೀಗ ಅದೇ ಮಾದರಿಯಲ್ಲಿ ಟಾಸ್ ಗೆದ್ದ ಖುಷಿಯಲ್ಲಿ ಸಂಭ್ರಮಿಸಿದ ಧವನ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ಚೊಚ್ಚಲ ಬಾರಿ ಟಾಸ್ ಗೆದ್ದ ಧವನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಆರಂಭಿಕರಾಗಿ ಕಣಕ್ಕಿಳಿದ ಅವರು 3 ಬೌಂಡರಿಗಳೊಂದಿಗೆ 13 ರನ್​ಗಳಿಸಲಷ್ಟೇ ಶಕ್ತರಾದರು.

ಇನ್ನು ಈ ಪಂದ್ಯದ ಮೂಲಕ ಐವರು ಆಟಗಾರರು ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿರುವುದು ಮತ್ತೊಂದು ವಿಶೇಷ. ಶ್ರೀಲಂಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಪದಾರ್ಪಣೆ ಮಾಡಿದರೆ, 3ನೇ ಏಕದಿನದಲ್ಲಿ ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ಚೇತನ್ ಸಕರಿಯಾ, ರಾಹುಲ್ ಚಹರ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಟೀಮ್ ಇಂಡಿಯಾ ಪರ ಅವಕಾಶ ಪಡೆದರು. ಇದರೊಂದಿಗೆ ಭಾರತಕ್ಕಾಗಿ ಏಕದಿನ ಕ್ರಿಕೆಟ್ ಆಡಿದ ಆಟಗಾರರ ಸಂಖ್ಯೆ 241 ತಲುಪಿದೆ.

 

ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!

ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!

 

(India vs Sri Lanka Shikhar Dhawan Breaks into Celebration After Winning Toss video viral)