IND vs WI: ಸಿರಾಜ್ ಬದಲು ಯಾರಿಗೆ ಚಾನ್ಸ್? ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ

|

Updated on: Jul 27, 2023 | 12:01 PM

IND vs WI: ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಸಿರಾಜ್ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಪ್ರಶ್ನೆಯಾಗಿದೆ.

IND vs WI: ಸಿರಾಜ್ ಬದಲು ಯಾರಿಗೆ ಚಾನ್ಸ್? ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಇಲ್ಲಿದೆ
ಮೊಹಮ್ಮದ್ ಸಿರಾಜ್
Image Credit source: insidesport
Follow us on

ವೆಸ್ಟ್ ಇಂಡೀಸ್ ವಿರುದ್ಧದ (India vs West Indies) ಏಕದಿನ ಸರಣಿ ಆರಂಭಕ್ಕೂ ಮುನ್ನವೇ ಮಹತ್ವದ ನಿರ್ಧಾರ ಕೈಗೊಂಡಿರುವ ಆಯ್ಕೆ ಮಂಡಳಿ ವೇಗಿ ಬೌಲರ್ ಮೊಹಮ್ಮದ್ ಸಿರಾಜ್​ಗೆ (Mohammed Siraj) ವಿಶ್ರಾಂತಿ ನೀಡಲು ಮುಂದಾಗಿದೆ. ಕೆಲಸದ ಹೊರ ನಿರ್ವಹಣೆ ಕಾರಣದಡಿಯಲ್ಲಿ ಸಿರಾಜ್​ಗೆ ವಿಶ್ರಾಂತಿ ನೀಡಲಾಗಿದ್ದು, ಏಕದಿನ ಹಾಗೂ ಟಿ20 ತಂಡದ ಭಾಗವಾಗಿರದ ಆಟಗಾರರೊಂದಿಗೆ ಸಿರಾಜ್ ತವರಿಗೆ ಮರಳಲಿದ್ದಾರೆ. ಈ ಮೊದಲು ಸಿರಾಜ್​ರನ್ನು ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ಇದೀಗ ಏಷ್ಯಾಕಪ್ ಹಾಗೂ ವಿಶ್ವಕಪ್ (ODI World Cup) ಗಮನದಲ್ಲಿಟ್ಟುಕೊಂಡು, ಶಮಿಯಂತೆ ಸಿರಾಜ್​​ಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ.

ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿರುವ ಸಿರಾಜ್ ಇದೀಗ ನೇರವಾಗಿ ಭಾರತಕ್ಕೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಅಶ್ವಿನ್, ಅಜಿಂಕ್ಯ ರಹಾನೆ, ನವದೀಪ್ ಸೈನಿ ಮತ್ತು ಕೆಎಸ್ ಭರತ್ ಅವರ ಹೆಸರುಗಳನ್ನು ಒಳಗೊಂಡಂತೆ ಉಳಿದ ಟೆಸ್ಟ್ ತಂಡದ ಆಟಗಾರರೊಂದಿಗೆ ಸಿರಾಜ್​ ಭಾರತಕ್ಕೆ ಮರಳಲಿದ್ದಾರೆ. ಇದೀಗ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಸಿರಾಜ್ ಅನುಪಸ್ಥಿತಿಯಲ್ಲಿ ತಂಡದ ಬೌಲಿಂಗ್ ವಿಭಾಗವನ್ನು ಯಾರು ಮುನ್ನಡೆಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಹಾಗೆಯೇ ಸಿರಾಜ್ ಸ್ಥಾನಕ್ಕೆ ಆಯ್ಕೆ ಮಂಡಳಿ ಯಾರನ್ನು ಕರೆತರುತ್ತದೆ ಎಂಬುದು ಕೂಡ ಕುತೂಹಲ ಹೆಚ್ಚಿಸಿದೆ.

India vs West Indies first ODI: ಭಾರತದ ಅಜೇಯ ಓಟ ಮುಂದುವರೆಯುತ್ತಾ? ಪಂದ್ಯ ಆರಂಭ ಎಷ್ಟು ಗಂಟೆಗೆ? ಇಲ್ಲಿದೆ ವಿವರ

ಟಾಪ್ ಆರ್ಡರ್ ಫಿಕ್ಸ್

ಇನ್ನು ಇಂದು ಬಾರ್ಬಡೋಸ್‌ನಲ್ಲಿ ನಡೆಯಲಿರುವ ಸರಣಿಯ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ಹೇಗಿರಲಿದೆ ಎಂಬುದು ಭಾಗಶಃ ಖಚಿತವಾಗಿದೆ. ಆದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಯಾರು ಕಣಕ್ಕಿಳಿಯಲ್ಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಸ್ಪರ್ಧೆಯಲ್ಲಿದ್ದಾರೆ. ಆದರೆ ಈ ಇಬ್ಬರಲ್ಲಿ ಅನುಭವ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್​ನನ್ನು ಟೀಂ ಇಂಡಿಯಾ ಹುಡುಕಿದರೆ, ಸಂಜು ಸ್ಯಾಮ್ಸನ್​​ಗೆ ಅವಕಾಶ ಸಿಗುವುದು ಖಚಿತ. ಇನ್ನುಳಿದಂತೆ ನಾಯಕ ರೋಹಿತ್ ಶರ್ಮಾ ಜೊತೆಗೆ ಶುಭ್​ಮನ್ ಗಿಲ್ ಅವರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಕಣಕ್ಕಿಳಿದರೆ, ಅವರ ನಂತರ ಸಂಜು ಸ್ಯಾಮ್ಸನ್ ಆಡಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬರಲಿದ್ದು, 6ನೇ ಕ್ರಮಾಂಕದಲ್ಲಿ ಬೌಲಿಂಗ್ ಆಲ್​ರೌಂಡರ್​ಗಳ ಸರದಿ ಆರಂಭವಾಗಲಿದೆ. ತಂಡದ ಉಪನಾಯಕ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದು, 7ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಬ್ಯಾಟ್ ಮಾಡುವುದು ಖಚಿತವಾಗಿದೆ.

ಸಿರಾಜ್ ಸ್ಥಾನಕ್ಕೆ ಯಾರು?

ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಆಡುವ ಸಾಧ್ಯತೆಗಳು ಹೆಚ್ಚಿವೆ. ಇಂಜುರಿಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಶಾರ್ದೂಲ್ ಠಾಕೂರ್ ಏಕದಿನ ಪಂದ್ಯಕ್ಕೆ ಫಿಟ್ ಆಗಿದ್ದರೆ, ಅವರು ಸಿರಾಜ್ ಬದಲು ಭಾರತದ ಬೌಲಿಂಗ್ ಸಾರಥ್ಯವಹಿಸಿಕೊಳ್ಳಲಿದ್ದಾರೆ. ಒಂದು ವೇಳೆ ಶಾರ್ದೂಲ್ ಕೂಡ ಅಲಭ್ಯರಾದರೆ, ಅವರ ಸ್ಥಾನದಲ್ಲಿ ಅಕ್ಷರ್ ಪಟೇಲ್ ಆಡಬಹುದಾಗಿದೆ.

ಮೊಹಮ್ಮದ್ ಸಿರಾಜ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿ ಅನುಭವದ ಕೊರತೆ ಎದ್ದು ಕಾಣಲಿದೆ. ತಂಡದ ಮೂವರು ವೇಗಿಗಳಿದ್ದು, ಎಡಗೈ ವೇಗಿಯಾಗಿ ಜಯದೇವ್ ಉನದ್ಕಟ್ ಸ್ಥಾನ ಪಡೆಯಲ್ಲಿದ್ದಾರೆ. ಉಳಿದಂತೆ ಉಮ್ರಾನ್ ಮಲಿಕ್ ಹಾಗೂ ಮುಖೇಶ್ ಕುಮಾರ್ ಈ ಇಬ್ಬರಲ್ಲಿ ಒಬ್ಬರು ಅವಕಾಶ ಪಡೆಯುವ ಸಾಧ್ಯತೆಗಳಿವೆ

ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್/ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಯದೇವ್ ಉನದ್ಕಟ್, ಉಮ್ರಾನ್ ಮಲಿಕ್/ಮುಖೇಶ್ ಕುಮಾರ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ