AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಮೊದಲ ಏಕದಿನಕ್ಕೆ ಇದೆಯೇ ಮಳೆಯ ಕಾಟ?: ಪಿಚ್ ರಿಪೋರ್ಟ್, ಪಂದ್ಯ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಮಾಹಿತಿ

India vs West Indies 1st ODI: ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಕಾಟ ಇದೆಯೇ?, ಇಲ್ಲಿನ ಪಿಚ್ ರಿಪೋರ್ಟ್ ಹೇಗಿದೆ?, ಪಂದ್ಯ ಎಷ್ಟು ಗಂಟೆಗೆ ಆರಂಭ? ಎಂಬ ಬಗೆಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

IND vs WI: ಮೊದಲ ಏಕದಿನಕ್ಕೆ ಇದೆಯೇ ಮಳೆಯ ಕಾಟ?: ಪಿಚ್ ರಿಪೋರ್ಟ್, ಪಂದ್ಯ ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಮಾಹಿತಿ
India vs West Indies Narendra Modi Stadium
TV9 Web
| Updated By: Vinay Bhat|

Updated on: Feb 06, 2022 | 10:44 AM

Share

ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವಣ ಬಹುನಿರೀಕ್ಷಿತ ಮೊದಲ ಏಕದಿನ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು (Narendra Modi Stadium) ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ರೋಹಿತ್-ಪೊಲಾರ್ಡ್ ನಡುವಣ ಕಾದಾಟಕ್ಕೆ ಅಭಿಮಾನಿಗಳು ಕಾದುಕುಳಿತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಹೀನಾಯ ಸೋಲಿನಿಂದ ಪಾಠ ಕಲಿತು ಇದೀಗ ಹೊಸ ಯೋಜನೆ, ಹೊಸ ಸವಾಲುಗಳೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದ ತನ್ನ ಸಾವಿರದ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ರೋಹಿತ್‌ ಶರ್ಮ (Rohit Sharma) ಇದೇ ಮೊದಲ ಸಲ ಪೂರ್ಣ ಪ್ರಮಾಣದ ನಾಯಕನಾಗಿ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದು ನೂತನ ಯುಗವೊಂದಕ್ಕೆ ಮುನ್ನುಡಿಯಾದೀತೇ ಎಂಬುದೊಂದು ನಿರೀಕ್ಷೆ. ಹೀಗೆ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಮೊದಲ ಏಕದಿನ ಪಂದ್ಯಕ್ಕೆ ಮಳೆಯ ಕಾಟ ಇದೆಯೇ?, ಇಲ್ಲಿನ ಪಿಚ್ ರಿಪೋರ್ಟ್ ಹೇಗಿದೆ?, ಪಂದ್ಯ ಎಷ್ಟು ಗಂಟೆಗೆ ಆರಂಭ? ಎಂಬ ಬಗೆಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಳೆಯ ಕಾಟ ಇದೆಯೇ?:

ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯಕ್ಕೆ ಯಾವುದೇ ಮಳೆಯ ತೊಂದರೆಯಿಲ್ಲ. ವಾತಾವರಣ ಬಿಸಿಲಿನಿಂದ ಕೂಡಿರಲಿದೆಯಂತೆ. ತಾಪಮಾನ 22 ಡಿಗ್ರಯಿಂದ 31 ಡಿಗ್ರಿ ವರೆಗೆ ಇರುವ ಕಾರಣ ಮಳೆಯ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಪಿಚ್ ಹೇಗಿದೆ?:

ನರೇಂದ್ರ ಮೋದಿ ಕ್ರೀಡಾಂಗಣ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಇಲ್ಲಿನ ಪಿಚ್ ಅನ್ನು ಆರು ಕೆಂಪು ಮಣ್ಣಿನಿಂದ ಮಾಡಲ್ಪಟ್ಟಿದ್ದರೆ, ಐದು ಪಿಚ್​ಗಳನ್ನು ಕಪ್ಪು ಮಣ್ಣಿನಿಂದ ಮಾಡಲಾಗಿದೆ. ಮುಖ್ಯ ಮತ್ತು ಅಭ್ಯಾಸ ಪಿಚ್‌ಗಳಿಗಾಗಿ ಎರಡೂ ಬಣ್ಣದ ಜೇಡಿಮಣ್ಣನ್ನು ಬಳಸಿದ ಮೊದಲ ಕ್ರೀಡಾಂಗಣ ಇದಾಗಿದೆ. ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ಸಾಧ್ಯತೆ ಇದೆ. ಸ್ವಿಂಗ್ ಬೌಲರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳುವ ನಿರೀಕ್ಷೆ ಇದೆ. ಕಳೆದ ವರ್ಷ ಇದೇ ವೇಳೆ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯಲ್ಲಿ ರನ್‌ಮಳೆಯೇ ಹರಿದಿತ್ತು. ಬ್ಯಾಟರ್‌ಗಳಿಗೆ ಪಿಚ್ ಹೆಚ್ಚು ಸಹಕಾರಿಯಾಗುವ ಸಾಧ್ಯತೆಗಳಿವೆ. ಪಂದ್ಯಕ್ಕೆ ಇಬ್ಬನಿ ಸಮಸ್ಯೆ ಕಾಡಲಿದ್ದು, ಎರಡನೇ ಸರದಿ ಬ್ಯಾಟಿಂಗ್ ಮಾಡಿದ ತಂಡಕ್ಕೆ ಹೆಚ್ಚು ಉಪಯೋಗವಾಗಬಹುದು.

ಪಂದ್ಯ ಎಷ್ಟು ಗಂಟೆಗೆ?, ಯಾವುದರಲ್ಲಿ ನೇರಪ್ರಸಾರ?:

ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದೆ. 1 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್​​ನಲ್ಲಿ ನೇರಪ್ರಸಾರ ಕಾಣಲಿದೆ. ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಲೈವ್​ಸ್ಟ್ರೀಮ್ ವೀಕ್ಷಿಸಬಹುದು.

ದಾಖಲೆಯ ಹೊಸ್ತಿಲಲ್ಲಿ 4 ಆಟಗಾರು:

  • ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್‌ ಇನ್ನೊಂದು ವಿಕೆಟ್‌ ಕಿತ್ತರೆ ಏಕದಿನದಲ್ಲಿ 100 ವಿಕೆಟ್‌ ಪೂರ್ತಿಗೊಳಿಸಲಿದ್ದಾರೆ.
  • ನಾಯಕ ರೋಹಿತ್‌ ಶರ್ಮ- ಉಪ ನಾಯಕ ವಿರಾಟ್‌ ಕೊಹ್ಲಿ ಈವರೆಗೆ 4,906 ರನ್ನುಗಳ ಜೊತೆಯಾಟ ನಿಭಾಯಿಸಿದ್ದಾರೆ. ಇನ್ನು 94 ರನ್‌ ಪೇರಿಸಿದರೆ 5 ಸಾವಿರ ರನ್‌ ಪೂರ್ತಿಗೊಳಿಸಲಿದ್ದಾರೆ.
  • ವಿರಾಟ್‌ ಕೊಹ್ಲಿ ಅವರು ಇನ್ನು 6 ರನ್‌ ಮಾಡಿದರೆ ತವರಿನ ಏಕದಿನ ಪಂದ್ಯಗಳಲ್ಲಿ 5 ಸಾವಿರ ರನ್‌ ಪೂರ್ತಿಗೊಳಿಸಲಿದ್ದಾರೆ.
  • ವೆಸ್ಟ್ ಇಂಡೀಸ್ ತಂಡ ಬ್ಯಾಟರ್ ಶಾಯ್ ಹೋಪ್ ಏಕದಿನದಲ್ಲಿ 300 ಬೌಂಡರಿ ಪೂರ್ತಿಗೊಳಿಸಲು ಇನ್ನು ಕೇವಲ 2 ಬೌಂಡರಿಗಳ ಅಗತ್ಯವಿದೆ.

1000ನೇ ಏಕದಿನ ಪಂದ್ಯ:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ಐತಿಹಾಸಿಕ ಪಂದ್ಯ ನಡೆಯಲಿದ್ದು, 1000ನೇ ಏಕದಿನ ಪಂದ್ಯ ಆಡುವ ಮೂಲಕ ಇತಿಹಾಸ ನಿರ್ಮಿಸಲಿದೆ. ಈ ಹೆಗ್ಗಳಿಕೆಗೆ ಪಾತ್ರವಾದ ವಿಶ್ವದ ಮೊದಲ ತಂಡ ಭಾರತವಾಗಲಿದೆ. ಭಾರತ ಇಲ್ಲಿಯವರೆಗೆ 999 ಏಕದಿನ ಪಂದ್ಯಗಳನ್ನ ಆಡಿದೆ ಮತ್ತು 518 ಪಂದ್ಯಗಳನ್ನ ಗೆದ್ದಿದೆ. ಇನ್ನು 431 ಪಂದ್ಯಗಳಲ್ಲಿ ಸೋಲಾನುಭವಿಸಿದೆ. ಇದರಲ್ಲಿ ಒಂಬತ್ತು ಪಂದ್ಯಗಳು ಟೈನಲ್ಲಿ ಕೊನೆಗೊಂಡಿದ್ರೆ, 41 ಪಂದ್ಯಗಳು ಯಾವುದೇ ಫಲಿತಾಂಶವನ್ನ ನೀಡಿಲ್ಲ. 1974ರಲ್ಲಿ ಲೀಡ್ಸ್‌ನಲ್ಲಿ ಅಜಿತ್ ವಾಡೇಕರ್ ನಾಯಕತ್ವದ ತಂಡವು ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡಿತ್ತು.

India Playing XI: ಮೊದಲ ಏಕದಿನ ಪಂದ್ಯದಲ್ಲಿ ಯಾರಿಗೆಲ್ಲ ಅವಕಾಶ?: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

Ind vs WI: ಇಂದು ಭಾರತ- ವೆಸ್ಟ್ ಇಂಡೀಸ್ ಮೊದಲ ಏಕದಿನ: ರೋಹಿತ್-ಕೊಹ್ಲಿ ಮೇಲೆ ಎಲ್ಲರ ಕಣ್ಣು

ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಬೊಮ್ಮಾಯಿ ಹೇಳಿದ್ದಿಷ್ಟು