IND vs ZIM 1st T20 Highlights: ಟೀಂ ಇಂಡಿಯಾವನ್ನು ಮಣಿಸಿದ ಜಿಂಬಾಬ್ವೆ

|

Updated on: Jul 06, 2024 | 9:25 PM

India vs Zimbabwe 1st T20I Highlights in Kannada: ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 20ನೇ ಓವರ್​ನ 5ನೇ ಎಸೆತದಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 102 ರನ್​ಗಳಿಸಲಷ್ಟೇ ಶಕ್ತವಾಯಿತು.

IND vs ZIM 1st T20 Highlights: ಟೀಂ ಇಂಡಿಯಾವನ್ನು ಮಣಿಸಿದ ಜಿಂಬಾಬ್ವೆ
ಭಾರತ- ಜಿಂಬಾಬ್ವೆ

ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿ ರೋಚಕ ಪಂದ್ಯದೊಂದಿಗೆ ಆರಂಭವಾಗಿದೆ. ಉಭಯ ತಂಡಗಳ ನಡುವಿನ ಸರಣಿಯ ಮೊದಲ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ರನ್‌ಗಾಗಿ ಪರದಾಡಿದರಾದರೂ ಆತಿಥೇಯ ಜಿಂಬಾಬ್ವೆ, ಟೀಂ ಇಂಡಿಯಾ 13 ರನ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 115 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 20ನೇ ಓವರ್​ನ 5ನೇ ಎಸೆತದಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 102 ರನ್​ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 06 Jul 2024 08:07 PM (IST)

    IND vs ZIM Live Score: ಭಾರತಕ್ಕೆ ಸೋಲು

    ಜಿಂಬಾಬ್ವೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಯುವ ತಾರೆಗಳಿಂದ ಕೂಡಿದ ಟೀಂ ಇಂಡಿಯಾ ಜಿಂಬಾಬ್ವೆ ನೀಡಿದ್ದ 116 ರನ್​ಗಳ ಗುರಿಯನ್ನೂ ಸಾಧಿಸಲು ಸಾಧ್ಯವಾಗದೆ 19.5 ಓವರ್ ಗಳಲ್ಲಿ ಕೇವಲ 102 ರನ್ ಗಳಿಗೆ ಆಲೌಟ್ ಆಯಿತು.

  • 06 Jul 2024 07:52 PM (IST)

    IND vs ZIM Live Score: 9ನೇ ವಿಕೆಟ್

    ಭಾರತ 9ನೇ ವಿಕೆಟ್ ಕಳೆದುಕೊಂಡಿದೆ. ನಾಯಕ ಸಿಕಂದರ್ ರಜಾ ಅವರು ಮುಖೇಶ್ ಕುಮಾರ್ ಅವರನ್ನು ಬೌಲ್ಡ್ ಮಾಡುವ ಮೂಲಕ ಟೀಂ ಇಂಡಿಯಾವನ್ನು ಸೋಲಿನ ಹತ್ತಿರಕ್ಕೆ ತಳ್ಳಿದ್ದಾರೆ.

  • 06 Jul 2024 07:46 PM (IST)

    IND vs ZIM Live Score: ಎಂಟನೇ ವಿಕೆಟ್ ಪತನ

    ಕೆಲವು ಬಿಗ್ ಶಾಟ್​ಗಳನ್ನು ಬಾರಿಸುವ ಮೂಲಕ ಟೀಂ ಇಂಡಿಯಾಕ್ಕೆ ಭರವಸೆ ತುಂಬಿದ್ದ ಅವೇಶ್ ಖಾನ್ (16) ಕೂಡ ಔಟಾಗಿದ್ದು, ಇದರೊಂದಿಗೆ ಟೀಂ ಇಂಡಿಯಾದ 8 ವಿಕೆಟ್ ಪತನವಾಗಿದೆ.

  • 06 Jul 2024 07:33 PM (IST)

    IND vs ZIM Live Score: ಏಳನೇ ವಿಕೆಟ್ ಪತನ

    ಟೀಂ ಇಂಡಿಯಾ ಹೀನಾಯ ಸೋಲಿನ ಅಂಚಿಗೆ ತಲುಪಿದೆ. 13ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಅವರನ್ನು ಎಲ್‌ಬಿಡಬ್ಲ್ಯು ಔಟ್ ಮಾಡುವ ಮೂಲಕ ಸಿಕಂದರ್ ರಜಾ ಭಾರತಕ್ಕೆ ಏಳನೇ ಹೊಡೆತ ನೀಡಿದರು.

  • 06 Jul 2024 07:25 PM (IST)

    IND vs ZIM Live Score: ನಾಯಕ ಗಿಲ್ ಔಟ್

    ಕೊನೆಯ ಭರವಸೆಯಾಗಿದ್ದ ನಾಯಕ ಶುಭಮನ್ ಗಿಲ್ (31) ಕೂಡ ಔಟಾಗಿರುವುದರಿಂದ ಟೀಂ ಇಂಡಿಯಾ ದೊಡ್ಡ ಹೊಡೆತ ಅನುಭವಿಸಿದೆ. ಜಿಂಬಾಬ್ವೆ ನಾಯಕ ಸಿಕಂದರ್ ರಝಾ, ಗಿಲ್ ಅವರನ್ನು ಬೌಲ್ಡ್ ಮಾಡಿದರು.

  • 06 Jul 2024 07:24 PM (IST)

    IND vs ZIM Live Score: ಐದನೇ ವಿಕೆಟ್ ಪತನ

    ಭಾರತ ಕೂಡ 50 ರನ್ ಆಗುವ ಮೊದಲೇ 5ನೇ ವಿಕೆಟ್ ಕಳೆದುಕೊಂಡಿದೆ. ಸರಳ ಕ್ಯಾಚ್ ನೀಡಿದ ಧ್ರುವ್ ಜುರೆಲ್ ಅವರ ಇನ್ನಿಂಗ್ಸ್ ಅನ್ನು ಲ್ಯೂಕ್ ಜೊಂಗ್ವೆ ಕೊನೆಗೊಳಿಸಿದರು. ಜುರೆಲ್ ಅವರ ಚೊಚ್ಚಲ ಪಂದ್ಯವೂ ಉತ್ತಮವಾಗಿರಲಿಲ್ಲ.

  • 06 Jul 2024 07:15 PM (IST)

    IND vs ZIM Live Score: ಪವರ್‌ಪ್ಲೇ ಅಂತ್ಯ

    ಪವರ್‌ಪ್ಲೇಯೊಳಗೆ ಟೀಂ ಇಂಡಿಯಾದ ಸ್ಥಿತಿ ಇಷ್ಟು ಹದಗೆಡುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಪವರ್‌ಪ್ಲೇಯಲ್ಲಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಕೇವಲ 28 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಶುಭಮನ್ ಗಿಲ್ ಕೂಡ ಡಿಆರ್‌ಎಸ್ ನೆರವಿನಿಂದ ಎಲ್‌ಬಿಡಬ್ಲ್ಯೂ ಆಗದಂತೆ ಪಾರಾದರು.

  • 06 Jul 2024 06:58 PM (IST)

    IND vs ZIM Live Score: 22 ರನ್‌ಗಳಿಗೆ 4 ವಿಕೆಟ್‌

    ಟೀಂ ಇಂಡಿಯಾ ಸ್ಥಿತಿ ಹದಗೆಟ್ಟಿದ್ದು, ಕೇವಲ 22 ರನ್‌ಗಳಿಗೆ 4 ವಿಕೆಟ್‌ಗಳು ಬಿದ್ದಿವೆ. ಚಟಾರಾ ಅವರ ಓವರ್‌ನ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಕೂಡ ಖಾತೆ ತೆರೆಯದೆ ಔಟಾದರು. ಚಟಾರಾ ಒಂದೇ ಓವರ್‌ನಲ್ಲಿ 2 ವಿಕೆಟ್ ಪಡೆದರು.

  • 06 Jul 2024 06:58 PM (IST)

    IND vs ZIM Live Score: ರಿಯಾನ್ ಪರಾಗ್ ಔಟ್

    ಚೊಚ್ಚಲ ಪಂದ್ಯವನ್ನಾಡುತ್ತಿದ್ದ ರಿಯಾನ್ ಪರಾಗ್ ಕೂಡ ಕೇವಲ 3 ಎಸೆತಗಳಲ್ಲಿ 2 ರನ್ ಬಾರಿಸಿ ಪೆವಿಲಿಯನ್​ಗೆ ಮರಳಿದರು. ತೆಂಡೈ ಚಟಾರಾ ಈ ವಿಕೆಟ್ ಪಡೆದರು.

  • 06 Jul 2024 06:47 PM (IST)

    IND vs ZIM Live Score: ಎರಡನೇ ವಿಕೆಟ್ ಪತನ

    ರುತುರಾಜ್ ಗಾಯಕ್ವಾಡ್ ನಾಲ್ಕನೇ ಓವರ್​ನಲ್ಲಿ ಔಟಾದರು. ಗಾಯಕ್ವಾಡ್ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

  • 06 Jul 2024 06:38 PM (IST)

    IND vs ZIM Live Score: ಖಾತೆ ತೆರೆದ ಗಿಲ್

    ಮೊದಲ ಓವರ್‌ನಲ್ಲಿ ವಿಕೆಟ್ ಮೇಡನ್ ಆದ ನಂತರ, ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಎರಡನೇ ಓವರ್‌ನಲ್ಲಿ ಫೋರ್‌ನೊಂದಿಗೆ ತಮ್ಮ ಮತ್ತು ತಂಡದ ಖಾತೆಯನ್ನು ತೆರೆದರು.

  • 06 Jul 2024 06:37 PM (IST)

    IND vs ZIM Live Score: ಶೂನ್ಯಕ್ಕೆ ಅಭಿಷೇಕ್ ಔಟ್

    ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲಿಯೇ ಔಟಾದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದ ಅಭಿಷೇಕ್ 4 ಎಸೆತಗಳಲ್ಲಿ ಖಾತೆ ತೆರೆಯದೆ ಔಟಾದರು.

  • 06 Jul 2024 06:36 PM (IST)

    IND vs ZIM Live Score: ಭಾರತದ ಇನ್ನಿಂಗ್ಸ್ ಆರಂಭ

    ಟೀಂ ಇಂಡಿಯಾ ರನ್ ಚೇಸ್ ಆರಂಭಿಸಿದ್ದು, ಅದಕ್ಕಾಗಿ ಶುಭ್​ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಮೈದಾನಕ್ಕೆ ಇಳಿದಿದೆ.

  • 06 Jul 2024 06:36 PM (IST)

    IND vs ZIM Live Score: 116 ರನ್ ಟಾರ್ಗೆಟ್

    ಜಿಂಬಾಬ್ವೆ ಅಂತಿಮವಾಗಿ 20 ಓವರ್‌ಗಳಲ್ಲಿ ಆಲೌಟ್ ಆಗದೆ 115 ರನ್ ಗಳಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕ್ಲೈವ್ ಮದಾಂಡೆ ಕೊನೆಯ ಓವರ್​ನಲ್ಲಿ ಅವೇಶ್ ಖಾನ್ ಮೇಲೆ 3 ಬೌಂಡರಿ ಬಾರಿಸಿ ತಂಡವನ್ನು ಈ ಹಂತಕ್ಕೆ ಕೊಂಡೊಯ್ದರು. ಮದಂಡೆ 29 ರನ್ ಗಳಿಸಿ ಅಜೇಯರಾಗಿ ಮರಳಿದರು.

  • 06 Jul 2024 06:10 PM (IST)

    IND vs ZIM Live Score: 100 ರನ್ ಪೂರ್ಣ

    ಜಿಂಬಾಬ್ವೆ 100 ರನ್‌ಗಳ ಗಡಿ ದಾಟಿದೆ. 19ನೇ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದ ಜಿಂಬಾಬ್ವೆ 100 ರನ್ ಪೂರೈಸಿದ್ದು, ಇದು ನಡೆದ ತಕ್ಷಣ ಜಿಂಬಾಬ್ವೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

  • 06 Jul 2024 05:57 PM (IST)

    IND vs ZIM Live Score: ರವಿಗೆ 4 ವಿಕೆಟ್

    90 ರನ್ ಗಳಿಸುವಷ್ಟರಲ್ಲಿ ಜಿಂಬಾಬ್ವೆಯ ಒಂಬತ್ತನೇ ವಿಕೆಟ್ ಕೂಡ ಪತನವಾಯಿತು. ರವಿ ಬಿಷ್ಣೋಯ್ 16ನೇ ಓವರ್‌ನಲ್ಲಿ ಲ್ಯೂಕ್ ಮತ್ತು ಬ್ಲೆಸ್ಸಿಂಗ್ ಅವರನ್ನು ಔಟ್ ಮಾಡಿದರು.

  • 06 Jul 2024 05:55 PM (IST)

    IND vs ZIM Live Score: ಎಂಟನೇ ವಿಕೆಟ್ ಪತನ

    ರವಿ ಬಿಷ್ಣೋಯ್ ಜಿಂಬಾಬ್ವೆಯ ಬ್ಯಾಟ್ಸ್‌ಮನ್ ಲ್ಯೂಕ್ ಯೊಂಗ್ವೆ ಎಲ್‌ಬಿಡಬ್ಲ್ಯೂ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಮೂರನೇ ವಿಕೆಟ್ ಪಡೆದರು. ಇದು ಜಿಂಬಾಬ್ವೆಗೆ 8ನೇ ವಿಕೆಟ್ ಆಗಿತ್ತು.

  • 06 Jul 2024 05:49 PM (IST)

    IND vs ZIM Live Score: ಸುಂದರ್ ಡಬಲ್ ಬ್ಲಾಸ್ಟ್

    ಸುದೀರ್ಘ ಸಮಯದ ಬಳಿಕ ಟೀಂ ಇಂಡಿಯಾಕ್ಕೆ ಮರಳಿರುವ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಸತತ 2 ಎಸೆತಗಳಲ್ಲಿ 2 ವಿಕೆಟ್ ಪಡೆದರು. ಮೊದಲು ಅವರು ಡಿಯೋನ್ ಮೈಯರ್ಸ್ ಅವರ ಕ್ಯಾಚ್ ಪಡೆದರು. ನಂತರದ ಎಸೆತದಲ್ಲಿ ವೆಲ್ಲಿಂಗ್ಟನ್ ಮಸಕಡ್ಜಾ ಅವರನ್ನು ಎಲ್ಬಿಡಬ್ಲ್ಯೂ ಮಾಡಿದರು.

  • 06 Jul 2024 05:39 PM (IST)

    IND vs ZIM Live Score: ಕ್ಯಾಂಪ್ಬೆಲ್ ಔಟ್

    ಸಿಕಂದರ್ ರಾಝಾ ವಿಕೆಟ್ ಬಳಿಕ ಬಂದಿದ್ದ ಕ್ಯಾಂಪ್ಬೆಲ್ ಮೊದಲ ಎಸೆತದಲ್ಲೇ ರನೌಟ್​ಗೆ ಬಲಿಯಾಗಿದ್ದಾರೆ. ಕ್ಲೈವ್ ಮಡ್ನಾಡೆ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ.

  • 06 Jul 2024 05:36 PM (IST)

    IND vs ZIM Live Score: ನಾಲ್ಕನೇ ವಿಕೆಟ್ ಪತನ

    ನಾಯಕ ಸಿಕಂದರ್ ರಜಾ (17) ಔಟಾಗಿದ್ದರಿಂದ ಜಿಂಬಾಬ್ವೆಗೆ ದೊಡ್ಡ ಪೆಟ್ಟು ಬಿದ್ದಿದೆ. ಅವೇಶ್ ಖಾನ್ ಅವರ ಹಿಂದಿನ ಓವರ್‌ನಲ್ಲಿ ಸಿಕಂದರ್ ಅದ್ಭುತ ಸಿಕ್ಸರ್ ಬಾರಿಸಿದ್ದರು ಆದರೆ ಈ ಬಾರಿ ಅವೇಶ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ರವಿ ಬಿಷ್ಣೋಯ್ ಅತ್ಯುತ್ತಮ ಕ್ಯಾಚ್ ಪಡೆದರು.

  • 06 Jul 2024 05:26 PM (IST)

    IND vs ZIM Live Score: 10 ಓವರ್‌ ಪೂರ್ಣ

    10 ಓವರ್‌ಗಳ ನಂತರ ಜಿಂಬಾಬ್ವೆ ಸ್ಕೋರ್ 69/3. ಸದ್ಯ ನಾಯಕ ಸಿಕಂದರ್ ರಜಾ (17) ಮತ್ತು ಡಿಯೋನ್ ಮೇಯರ್ಸ್ (9) ಕ್ರೀಸ್‌ನಲ್ಲಿದ್ದಾರೆ.

  • 06 Jul 2024 05:14 PM (IST)

    IND vs ZIM Live Score: ರವಿಗೆ 2ನೇ ವಿಕೆಟ್

    ತಮ್ಮ ಖೋಟಾದ 2ನೇ ಓವರ್​ ದಾಳಿಗಿಳಿದ ರವಿ ಬಿಷ್ಣೋಯಿ ಎರಡನೇ ವಿಕೆಟ್ ಕಬಳಿಸಿದ್ದಾರೆ. ಆರಂಭಿಕ ವೆಸ್ಲಿ ಮಾಧೆವೆರೆ 21 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಜಿಂಬಾಬ್ವೆ 51/3

  • 06 Jul 2024 05:04 PM (IST)

    IND vs ZIM Live Score: ಬ್ರಿಯಾನ್ ಬೆನೆಟ್ ಔಟ್

    ಪವರ್ ಪ್ಲೇಯ ಕೊನೆಯ ಓವರ್​ನಲ್ಲಿ ರವಿ ಬಿಷ್ಣೋಯಿ ಜಿಂಬಾಬ್ವೆ ತಂಡದ 2ನೇ ವಿಕೆಟ್ ಉರುಳಿಸಿದರು. ಬ್ರಿಯಾನ್ ಬೆನೆಟ್ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

    ಜಿಂಬಾಬ್ವೆ 40/2

  • 06 Jul 2024 05:02 PM (IST)

    IND vs ZIM Live Score: ಇನ್ನಿಂಗ್ಸ್ ಚೇತರಿಸಿಕೊಂಡಿದೆ

    ಮೊದಲ ಹಿನ್ನಡೆಯ ನಂತರ ಬ್ರಿಯಾನ್ ಬೆನೆಟ್ ಮತ್ತು ವೆಸ್ಲಿ ಮಾಧವರೆ ಜಿಂಬಾಬ್ವೆ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಜಿಂಬಾಬ್ವೆ ನಾಲ್ಕು ಓವರ್‌ಗಳ ಅಂತ್ಯಕ್ಕೆ ಒಂದು ವಿಕೆಟ್‌ಗೆ 23 ರನ್ ಗಳಿಸಿದೆ.

  • 06 Jul 2024 04:39 PM (IST)

    IND vs ZIM Live Score: ಜಿಂಬಾಬ್ವೆ ಮೊದಲ ವಿಕೆಟ್ ಪತನ

    ಮುಖೇಶ್ ಕುಮಾರ್ ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲಿ ವಿಕೆಟ್ ಉರುಳಿಸಿದ್ದಾರೆ. ಆರಂಭಿಕ ಇನೋಸೆಂಟ್ ಕಯಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

    ಜಿಂಬಾಬ್ವೆ 6/1

  • 06 Jul 2024 04:38 PM (IST)

    IND vs ZIM Live Score: ಜಿಂಬಾಬ್ವೆ ಇನ್ನಿಂಗ್ಸ್ ಆರಂಭ

    ಭಾರತ ಟಾಸ್ ಗೆದ್ದು ಜಿಂಬಾಬ್ವೆಯನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಜಿಂಬಾಬ್ವೆ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕ ಬ್ಯಾಟಿಂಗ್‌ಗಾಗಿ ವೆಸ್ಲಿ ಮಧೆವೆರೆ ಮತ್ತು ಇನ್ನೋಸೆಂಟ್ ಕಿಯಾ ಕ್ರೀಸ್‌ನಲ್ಲಿದ್ದಾರೆ.

  • 06 Jul 2024 04:21 PM (IST)

    IND vs ZIM Live Score: ಜಿಂಬಾಬ್ವೆ ತಂಡ

    ತಡಿವಾನಾಶೆ ಮರುಮಣಿ, ಇನೋಸೆಂಟ್ ಕಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್‌ಬೆಲ್, ಕ್ಲೈವ್ ಮಡ್ನಾಡೆ (ವಿಕೆಟ್ ಕೀಪರ್), ವೆಸ್ಲಿ ಮಾಧೆವೆರೆ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಬಾನಿ, ತೆಂಡೈ ಚಟಾರಾ.

  • 06 Jul 2024 04:21 PM (IST)

    IND vs ZIM Live Score: ಭಾರತ ತಂಡ

    ಶುಭ್​ಮನ್ ಗಿಲ್ (ನಾಯಕ), ಅಭಿಷೇಕ್ ಶರ್ಮಾ, ರುತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.

  • 06 Jul 2024 04:04 PM (IST)

    IND vs ZIM Live Score: ಟಾಸ್ ಗೆದ್ದ ಭಾರತ

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Published On - 4:03 pm, Sat, 6 July 24

Follow us on