ಭಾರತ ಮತ್ತು ಜಿಂಬಾಬ್ವೆ ನಡುವಿನ 5 ಪಂದ್ಯಗಳ ಟಿ20 ಸರಣಿಯ ಐದನೇ ಅಂದರೆ ಸರಣಿಯ ಕೊನೆಯ ಪಂದ್ಯ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಆತಿಥೇಯ ತಂಡದ ನಾಯಕ ಸಿಕಂದರ್ ರಾಝಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದು ಸರಣಿಯ ಕೊನೆಯ ಪಂದ್ಯವಾಗಿರುವುದರಿಂದ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸರಣಿಯಲ್ಲಿ ಅವಕಾಶ ಸಿಗದ ಆಟಗಾರರು ಈ ಕೊನೆಯ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇತ್ತ ಆತಿಥೇಯ ಜಿಂಬಾಬ್ವೆ ತಂಡದಲ್ಲೂ ಬದಲಾವಣೆಗಳಾಗಿವೆ.
ಎರಡೂ ತಂಡಗಳು ಸರಣಿಯ ಕೊನೆಯ ಪಂದ್ಯಕ್ಕಾಗಿ ಆಡುವ ಹನ್ನೊಂದರಲ್ಲಿ ಬದಲಾವಣೆ ಮಾಡಿಕೊಂಡಿವೆ. ಕ್ಯಾಪ್ಟನ್ ಸಿಕಂದರ್ ರಝಾ ತೆಂಡೈ ಚಟಾರಾ ಬದಲಿಗೆ ಬ್ರಾಂಡನ್ ಮಾವುತಾ ಅವರನ್ನುತಂಡಕ್ಕೆ ಆಯ್ಕೆ ಮಾಡಿದ್ದಾರೆ. ಇತ್ತ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಮಾಡಲಾಗಿದೆ. ರುತುರಾಜ್ ಗಾಯಕ್ವಾಡ್ ಮತ್ತು ಖಲೀಲ್ ಅಹ್ಮದ್ ಅವರನ್ನು ಈ ಪಂದ್ಯದಿಂದ ಹೊರಗಿಡಲಾಗಿದೆ. ಅವರ ಸ್ಥಾನದಲ್ಲಿ ರಿಯಾನ್ ಪರಾಗ್ ಮತ್ತು ಮುಖೇಶ್ ಕುಮಾರ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಲಾಗಿದೆ.
🚨 Toss Update 🚨
Zimbabwe elect to field in the 5th and final T20I.
Follow The Match ▶️ https://t.co/TZH0TNJcBQ#TeamIndia | #ZIMvIND pic.twitter.com/zKc5XsarxI
— BCCI (@BCCI) July 14, 2024
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ, ಮುಖೇಶ್ ಕುಮಾರ್.
A look at #TeamIndia's Playing XI for today 👌👌
2⃣ changes in the side as Riyan Parag and Mukesh Kumar are named in the eleven.
Follow The Match ▶️ https://t.co/TZH0TNJcBQ#ZIMvIND pic.twitter.com/9vTpa7i28v
— BCCI (@BCCI) July 14, 2024
ಜಿಂಬಾಬ್ವೆ ತಂಡ: ವೆಸ್ಲಿ ಮಾಧವೆರೆ, ತಡಿವಾನಾಶೆ ಮರುಮಣಿ, ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ಸಿಕಂದರ್ ರಾಝಾ (ನಾಯಕ), ಜೊನಾಥನ್ ಕ್ಯಾಂಪ್‌ಬೆಲ್, ಫರಾಜ್ ಅಕ್ರಂ, ಕ್ಲೈವ್ ಮದಂಡೆ (ವಿಕೆಟ್ ಕೀಪರ್), ಬ್ರಾಂಡನ್ ಮಾವುತಾ, ರಿಚರ್ಡ್ ನಾಗರವಾ, ಬ್ಲೆಸ್ಸಿಂಗ್ ಮುಜರಬಾನಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:14 pm, Sun, 14 July 24