ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿರುವ ಭಾರತ ಮಹಿಳಾ ತಂಡ ಅದೇ ರೀತಿಯಲ್ಲಿ ಏಕದಿನ ಸರಣಿಯನ್ನು ಆರಂಭಿಸಿದೆ. ವಡೋದರದ ಹೊಸ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 211 ರನ್‌ಗಳಿಂದ ಏಕಪಕ್ಷೀಯವಾಗಿ ಸೋಲಿಸಿತು. ಉಪನಾಯಕಿ ಸ್ಮೃತಿ ಮಂಧಾನ ಅವರ 91 ರನ್‌ಗಳ ಆಧಾರದ ಮೇಲೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 314 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ ತಂಡ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುತ್ತಿದ್ದ ಯುವ ಬ್ಯಾಟರ್ ಪ್ರತೀಕಾ ರಾವಲ್ ಹಾಗೂ ಮಂಧಾನ ಜೋಡಿ ಮೊದಲ ವಿಕೆಟ್‌ಗೆ 110 ರನ್‌ಗಳ ಅತ್ಯುತ್ತಮ ಜೊತೆಯಾಟ ನೀಡಿತು. ಆಸ್ಟ್ರೇಲಿಯ ಪ್ರವಾಸದ ಕೊನೆಯ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಮಂಧಾನ, ಇದೀಗ ವೆಸ್ಟ್ ಇಂಡೀಸ್ ವಿರುದ್ಧವೂ ತಮ್ಮ ಅಮೋಘ ಬ್ಯಾಟಿಂಗ್ ಮುಂದುವರೆಸಿ ಅರ್ಧಶತಕದ ಇನ್ನಿಂಗ್ಸ್ ಆಡಿದರು.
ಆದರೆ, ಮಂಧಾನ ಶತಕ ಪೂರೈಸಲು ಸಾಧ್ಯವಾಗದೆ 91 ರನ್ ಗಳಿಸಿ ಔಟಾದರು. ಸ್ಮೃತಿ ವಿಕೆಟ್ ಪತನದ ಬಳಿಕ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ ಮತ್ತು ಜೆಮಿಮಾ ರೋಡ್ರಿಗಸ್ ಮಧ್ಯಮ ಕ್ರಮಾಂಕದಲ್ಲಿ ಕಡಿಮೆ ಆದರೆ ವೇಗದ ಇನ್ನಿಂಗ್ಸ್‌ಗಳನ್ನು ಆಡಿದರು. ಈ ನಾಲ್ವರ ಸ್ಫೋಟಕ ಬ್ಯಾಟಿಂಗ್ ಆಧಾರದ ಮೇಲೆ ಟೀಂ ಇಂಡಿಯಾಗೆ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಇದಕ್ಕೆ ಉತ್ತರವಾಗಿ, ವೆಸ್ಟ್ ಇಂಡೀಸ್ ತಂಡಕ್ಕೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿತು. ಸ್ಫೋಟಕ ಆರಂಭಿಕ ಆಟಗಅರ್ತಿ ಕಿಯಾನ್ನಾ ಜೋಸೆಫ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ರನೌಟ್ ಆದರು. ಇದರ ನಂತರ, ರೇಣುಕಾ ಸಿಂಗ್ ಮತ್ತು ಟೈಟಾಸ್ ಸಾಧು ಅವರ ಸ್ವಿಂಗ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡು. ಮೂರು ಮತ್ತು ಐದನೇ ಓವರ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಎರಡು ದೊಡ್ಡ ಹೊಡೆತಗಳನ್ನು ನೀಡುವ ಮೂಲಕ ರೇಣುಕಾ ತಂಡದ ಸೋಲನ್ನು ನಿರ್ಧರಿಸಿದರು. ರೇಣುಕಾ, ಮೊದಲು ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ಅವರ ವಿಕೆಟ್ ಪಡೆದರೆ, ನಂತರ ಸ್ಫೋಟಕ ಬ್ಯಾಟ್ಸ್‌ಮನ್ ಡಿಯಾಂಡ್ರಾ ಡಾಟಿನ್ ಅವರನ್ನು ಬೌಲ್ಡ್ ಮಾಡಿದರು. ಇತ್ತ ಟೈಟಾಸ್ ಕೂಡ ರಶಾದಾ ವಿಲಿಯಮ್ಸ್ ಅವರನ್ನು ಬೌಲ್ಡ್ ಮಾಡಿದರು.
ಹೀಗಾಗಿ ವೆಸ್ಟ್ ಇಂಡೀಸ್ ಕೇವಲ 11 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಆ ಬಳಿಕವೂ ವಿಕೆಟ್‌ಗಳ ಬೇಟೆ ಮುಂದುವರೆಸಿದ ರೇಣುಕಾ ಮತ್ತೆ ವಿಂಡೀಸ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೇಲುಬು ಮುರಿದರು. ಹೀಗಾಗಿ ವಿಂಡೀಸ್ ತಂಡದ ಪ್ರಮುಖ 8 ವಿಕೆಟ್ಗಳು ಕೇವಲ 66 ರನ್‌ಗಳಿಗೆ ಪತನಗೊಂಡವು. ಇದೇ ವೇಳೆ ರೇಣುಕಾ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಅಂತಿಮವಾಗಿ ಪ್ರಿಯಾ ಮಿಶ್ರಾ ಮತ್ತು ದೀಪ್ತಿ ಶರ್ಮಾ ತಂಡವನ್ನು 103 ರನ್‌ಗಳಿಗೆ ಕಟ್ಟಿಹಾಕುವ ಮೂಲಕ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ