AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND W vs NED W: ಟಿ20 ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

Women's T20 World Cup 2026: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 209 ರನ್ ಗಳಿಸಿ ಇತಿಹಾಸ ಸೃಷ್ಟಿಸಿತು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರ ಅರ್ಧಶತಕಗಳ ನೆರವಿನಿಂದ ಭಾರತ, ಟಿ20 ವಿಶ್ವಕಪ್‌ನಲ್ಲಿ ತನ್ನ ಗರಿಷ್ಠ ಸ್ಕೋರ್ ದಾಖಲಿಸಿತು. ಈ ಜೋಡಿ ಭಾರತದ ಪರ ಎರಡನೇ ಅತಿ ದೊಡ್ಡ ಆರಂಭಿಕ ಜೊತೆಯಾಟವನ್ನು ಸಹ ನಿರ್ಮಿಸಿತು, ಹೊಸ ದಾಖಲೆಗಳನ್ನು ಬರೆಯಿತು.

IND W vs NED W: ಟಿ20 ವಿಶ್ವಕಪ್‌ನಲ್ಲಿ ದಾಖಲೆಯ ಮೊತ್ತ ಕಲೆಹಾಕಿದ ಟೀಂ ಇಂಡಿಯಾ
Smriti, Shafali
ಪೃಥ್ವಿಶಂಕರ
|

Updated on: Jun 17, 2026 | 9:04 PM

Share

ಭಾರತ ಮಹಿಳಾ ಕ್ರಿಕೆಟ್ ತಂಡವು 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (2026 Women’s T20 World Cup) ಇತಿಹಾಸ ಸೃಷ್ಟಿಸಿದೆ. ಲೀಡ್ಸ್‌ನಲ್ಲಿ ನಡೆದ ನೆದರ್ಲ್ಯಾಂಡ್ಸ್ (India vs Netherlands) ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದು 209 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಎರಡನೇ ಅತ್ಯಧಿಕ ಆರಂಭಿಕ ಜೊತೆಯಾಟವನ್ನು ದಾಖಲಿಸಿದರು. ಇವರಿಬ್ಬರ ಆಟದಿಂದಾಗಿ ಭಾರತ ತಂಡ 200 ರನ್​ಗಳ ಗಡಿ ದಾಟುವ ಮೂಲಕ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ನಿರ್ಮಿಸಿತು.

ಅತ್ಯಧಿಕ ರನ್ ಪೇರಿಸಿದ ಭಾರತ

2018 ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ 8 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿದ್ದು, ಇದುವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಇದೀಗ ಭಾರತ ತಂಡ 209 ರನ್ ಪೇರಿಸುವ ಮೂಲಕ ತನ್ನ ಹಳೆಯ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು ಟೀಂ ಇಂಡಿಯಾ 2024 ರ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ವಿರುದ್ಧ 172 ರನ್ ಕಲೆಹಾಕಿತ್ತು. ಇನ್ನು ಟಿ20 ವಿಶ್ವಕಪ್‌ನಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಪಟ್ಟಿಯಲ್ಲಿ ಇದೀಗ ಭಾರತ ತಂಡ ಮೂರನೇ ಸ್ಥಾನಕ್ಕೇರಿದೆ.

  • ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್‌ ತಂಡ, ಶ್ರೀಲಂಕಾ ವಿರುದ್ಧ ಇದೇ ಆವೃತ್ತಿಯಲ್ಲಿ 219 ರನ್ ಕಲೆಹಾಕಿತ್ತು.
  • ಎರಡನೇ ಸ್ಥಾನದಲ್ಲೂ ಇಂಗ್ಲೆಂಡ್‌ ತಂಡವೇ ಇದ್ದು, 2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ 213 ರನ್ ಬಾರಿಸಿತ್ತು.
  • ಇದೀಗ ಟೀಂ ಇಂಡಿಯಾ, ನೆದರ್ಲ್ಯಾಂಡ್ಸ್ ವಿರುದ್ಧ 209 ರನ್ ಪೇರಿಸುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

Women’s T20 World Cup 2026: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಸ್ಮೃತಿ- ಶಫಾಲಿ ಜೋಡಿ

ದಾಖಲೆಯ ಜೊತೆಯಾಟ

ಇನ್ನು ಇದೇ ಪಂದ್ಯದಲ್ಲಿ ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಅತ್ಯಧಿಕ ಆರಂಭಿಕ ಜೊತೆಯಾಟವಾಡಿದ ಜೋಡಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. 2014 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮಿಥಾಲಿ ರಾಜ್ ಮತ್ತು ಪೂನಮ್ ರಾವತ್ ನಿರ್ಮಿಸಿದ್ದ 117 ರನ್‌ಗಳ ದಾಖಲೆ ಈಗಲೂ ಅಗ್ರಸ್ಥಾನದಲ್ಲಿದೆ. ಈಗ ಸ್ಮೃತಿ ಮತ್ತು ಶೆಫಾಲಿ 115 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು