AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ; ಭಾರತ ಗೆದ್ದರಷ್ಟೇ ಸೆಮಿಫೈನಲ್ ಟಿಕೆಟ್

Women's T20 World Cup 2026: 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್‌ನಲ್ಲಿ ಜೀವಂತವಾಗಿದೆ. ಈ ನಿರ್ಣಾಯಕ ಗೆಲುವು ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎರಡನೇ ಸ್ಥಾನಕ್ಕೆ ಏರಿಸಿದೆ. ಇದರ ಪರಿಣಾಮವಾಗಿ, ಭಾರತ ತಂಡವು ಇಂದು ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಮಾತ್ರ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಸೋತರೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಅಪಾಯವಿದೆ.

ಬಾಂಗ್ಲಾದೇಶ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ; ಭಾರತ ಗೆದ್ದರಷ್ಟೇ ಸೆಮಿಫೈನಲ್ ಟಿಕೆಟ್
Ind Vs Sa
ಪೃಥ್ವಿಶಂಕರ
|

Updated on:Jun 28, 2026 | 7:12 PM

Share

2026 ರ ಮಹಿಳಾ ಟಿ20 ವಿಶ್ವಕಪ್​ನ (Women’s T20 World Cup 2026) 29ನೇ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಸೆಮಿಫೈನಲ್ ದೃಷ್ಟಿಯಿಂದ ಈ ಪದ್ಯ ದಕ್ಷಿಣ ಆಫ್ರಿಕಾ ತಂಡಕ್ಕೆ ನಿರ್ಣಾಯಕವಾಗಿತ್ತು. ಅದರಂತೆ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 4 ವಿಕೆಟ್​ಗಳಿಂದ ಸೋಲಿಸಿದ ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್​ನಲ್ಲಿ ಜೀವಂತವಾಗಿ ಉಳಿದಿದೆ. ಹಾಗೆಯೇ ಈ ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೂ ಏರಿದೆ. ದಕ್ಷಿಣ ಆಪ್ರಿಕಾದ ಗೆಲುವಿನಿಂದಾಗಿ ಭಾರತ ತಂಡ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಂದು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಮಾತ್ರ ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರಬೀಳಲಿದೆ.

117 ರನ್​ ಕಲೆಹಾಕಿದ ಬಾಂಗ್ಲಾದೇಶ

ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಓವರ್ ಮೊದಲ ಎಸೆತದಲ್ಲೇ ವಿಕೆಟ್ ಪತನವಾಯಿತು. ಎರಡನೇ ವಿಕೆಟ್ ಕೂಡ ಕೇವಲ 14 ರನ್​ಗಳಿಗೆ ಉರುಳಿತು. ಇದಾದ ಬಳಿಕ ಜೊತೆಯಾದ ಸೋಭ್ನಾ ಮೊಸ್ತಾರಿ (42 ರನ್) ಮತ್ತು ನಿಗರ್ ಸುಲ್ತಾನ 32 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು 50 ರನ್​ಗಳ ಗಡಿ ದಾಟಿಸಿದರು. ಕೊನೆಯಲ್ಲಿ ಶರ್ಮಿನ್ ಅಖ್ತರ್ 22 ರನ್​ಗಳ ಕಾಣಿಕೆ ನೀಡಿದರು. ಈ ಮೂವರ ಆಟದಿಂದಾಗಿ ಬಾಂಗ್ಲಾದೇಶ 117 ರನ್ ಕಲೆಹಾಕಿತು. ಇತ್ತ ದಕ್ಷಿಣ ಆಫ್ರಿಕಾ ಪರ ನಾನ್ಕುಲುಲೆಕೊ ಮ್ಲಾಬಾ ಎರಡು ವಿಕೆಟ್ ಪಡೆದರೆ, ಮರಿಜಾನ್ನೆ ಕಾಪ್, ಶಬ್ನಿಮ್ ಇಸ್ಮಾಯಿಲ್ ಮತ್ತು ನಾಡಿನ್ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.

ವಿಶ್ವಕಪ್​ನಿಂದ ಹೊರಬಿದ್ದ ನ್ಯೂಜಿಲೆಂಡ್; ನಿವೃತ್ತಿ ಘೋಷಿಸಿದ ಮೂವರು ಲೆಜೆಂಡರಿ ಪ್ಲೇಯರ್ಸ್​

ಕೊನೆಯ ಓವರ್​ನಲ್ಲಿ ಗೆದ್ದ ಆಫ್ರಿಕಾ

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೂ ಕಳಪೆ ಆರಂಭ ಸಿಕ್ಕಿತು. ಬಾಂಗ್ಲಾದೇಶದ ಇನ್ನಿಂಗ್ಸ್​ನಂತೆಯೇ ದಕ್ಷಿಣ ಆಫ್ರಿಕಾ ಕೂಡ ಮೊದಲ ಓವರ್ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್​ಗೆ ಜೊತೆಯಾದ ಟಾಜ್ಮಿನ್ ಬ್ರಿಟ್ಸ್ ಹಾಗೂ ಅನ್ನೆರಿ ಡೆರ್ಕ್ಸೆನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಬ್ರಿಟ್ಸ್ 20 ರನ್ ಬಾರಿಸಿ ಔಟಾದರೆ, ಡೆರ್ಕ್ಸೆನ್ 45 ರನ್​ಗಳ ಕಾಣಿಕೆ ನೀಡಿದರು. ಮರಿಜಾನ್ನೆ ಕಪ್ ಹಾಗೂ ಡಿ ಕ್ಲರ್ಕ್​ ಉಪಯುಕ್ತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್​ನ 2ನೇ ಎಸೆತದಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:39 pm, Sun, 28 June 26

Follow Us
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಪ್ರದೀಪ್ ಈಶ್ವರ್ ನಡವಳಿಕೆಗೆ ಕೈಮುಗಿದ ಕುಮಾರಸ್ವಾಮಿ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಮಗನ ಮೃತದೇಹದ ಎದುರು ಬಿಕ್ಕಿ ಬಿಕ್ಕಿ ಅತ್ತ ನಿರ್ಮಾಪಕ ಭಾಮಾ ಹರೀಶ್
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಉತ್ತರ ಕನ್ನಡದ ಹಲವೆಡೆ ವರುಣಾರ್ಭಟ! ಹೊಳೆಯಂತಾದ ರಸ್ತೆಗಳು
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
ಬೆಂಗಳೂರಲ್ಲಿ ಟನಲ್ ರೋಡ್‌ಗೆ ಶಂಕುಸ್ಥಾಪನೆ: ಟೋಲ್ ಫ್ರೀ ಎಂದ ಸಿಎಂ!
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
RSS ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಪ್ರಿಯಾಂಕ್ ಖರ್ಗೆ​​
ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಸಿಎಂ ನಿವಾಸದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಕಾಂಗ್ರೆಸ್​​ ಸೇರ್ತಾರ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ?
ಕಾಂಗ್ರೆಸ್​​ ಸೇರ್ತಾರ ಜೆಡಿಎಸ್​​ ಶಾಸಕ ಜಿ.ಟಿ. ದೇವೇಗೌಡ?