ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನ (Womens World Cup 2022) 22ನೇ ಪಂದ್ಯದಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ತಂಡ ಮುಖಾಮುಖಿ ಆಗುತ್ತಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿ ಸಾಧಾರಣ ರನ್ ಕಲೆಹಾಕಿದೆಯಷ್ಟೆ. ಬಾಂಗ್ಲಾಕ್ಕೆ ಗೆಲ್ಲಲು 230 ರನ್ಗಳ ಟಾರ್ಗೆಟ್ ಅನ್ನಷ್ಟೆ ನೀಡಿದೆ. ಈ ಬಾರಿ ಕೂಡ ಮಿಥಾಲಿ ಪಡೆ ಮತ್ತೆ ಬ್ಯಾಟಿಂಗ್ನಲ್ಲಿ ಎಡವಿತು. ಮಧ್ಯಮ ಕ್ರಮಾಂಕ ಮತ್ತೊಮ್ಮೆ ಸಂಪೂರ್ಣ ವೈಫಲ್ಯ ಕಂಡಿತು. ಭಾರತೀಯ ವನಿತೆಯರು ಆಡಿದ 5 ಪಂದ್ಯಗಳಲ್ಲಿ2 ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋತಿದ್ದು, 4 ಅಂಕಗಳೊಂದಿಗೆ +0.456 ರನ್ ರೇಟ್ ಹೊಂದಿ ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ರಾಜ್ (Mithali Raj) ಬಳಗ ಭರ್ಜರಿ ಗೆಲುವು ಸಾಧಿಸಲೇ ಬೇಕಾದ ಒತ್ತಡದಲ್ಲಿದೆ. ಇಲ್ಲವಾದರೆ ಸೆಮಿಫೈನಲ್ ಹಂತಕ್ಕೇರುವ ಕನಸು ನುಚ್ಚುನೂರಾಗಲಿದೆ.
ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಶುರುಮಾಡಿರುವ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 74 ರನ್ಗಳ ಜೊತೆಯಾಟ ಆಡಿದರು. ಬಿರುಸಿನ ಆಟದ ಮೊರೆ ಹೋದ ಶಫಾಲಿ 42 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್ನೊಂದಿಗೆ 42 ರನ್ ಗಳಿಸಿದರೆ, ಇದರ ಬೆನ್ನಲ್ಲೇ 30 ರನ್ಗಳಿಸಿದ್ದ ಸ್ಮೃತಿ ಮಂದಾನ ಔಟಾದರು. ಇದೇ ಹೊತ್ತಿಗೆ ಬಂದ ಬೆನ್ನಲ್ಲೇ ಮೊದಲ ಎಸೆತದಲ್ಲಿ ನಾಯಕಿ ಮಿಥಾಲಿ ರಾಜ್ ಔಟಾಗಿದ್ದು ತಂಡಕ್ಕೆ ಹೊಡೆತ ಬಿದ್ದಿತು. 73 ರನ್ಗೆ ಒಂದೂ ವಿಕೆಟ್ ಕಳೆದುಕೊಳ್ಳದ ಭಾರತ 74 ರನ್ ಆಗುವ ಹೊತ್ತಿಗೆ 3 ಪ್ರಮುಖ ವಿಕೆಟ್ ಕೈಚೆಲ್ಲಿತು.
ನಂತರ ಜೊತೆಯಾದ ಯಸ್ತಿಕಾ ಭಾಟಿಯಾ ಹಾಗೂ ಹರ್ಮನ್‌ಪ್ರೀತ್ ಕೌರ್ ಕೂಡ ದೊಡ್ಡ ಜೊತೆಯಾಟ ಆಡಲು ಸಾಧ್ಯವಾಗಿಲ್ಲ. ಹರ್ಮನ್ 33 ಎಸೆತಗಳಲ್ಲಿ 14 ರನ್ಗೆ ಔಟಾದರು. ರಿಚ್ಚಾ ಘೋಷ್ ಜೊತೆಗೂಡಿ ಯಸ್ತಿಕಾ 54 ರನ್ಗಳ ಜೊತೆಯಾಟ ಆಡಿದ್ದು ತಂಡದ ಮೊತ್ತ 150ರ ಗಡಿ ದಾಟಿತು. ರಿಚ್ಚಾ 36 ಎಸೆತಗಳಲ್ಲಿ 26 ರನ್ಗೆ ನಿರ್ಗಮಿಸಿದರೆ, ಯಸ್ತಿಕಾ 80 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇನ್ನಿಂಗ್ಸ್ ಮುಗಿಸಿದರು.
ಕೊನೇ ಹಂತದಲ್ಲಿ ತಂಡಕ್ಕೆ ಪೂಜಾ ವಸ್ತ್ರಾಕರ್ ಹಾಗೂ ಸ್ನೇಹ್ ರಾಣ ಆಸರೆಯಾದರು. ತಂಡದ ಮೊತ್ತವನ್ನು 200ರ ಗಡಿದಾಟಿಸಲು ಇವರು ಪ್ರಮುಖ ಪಾತ್ರವಹಿಸಿದರು. ಸ್ನೇಹ್ 23 ಎಸೆತಗಳಲ್ಲಿ 27 ರನ್ಗೆ ಕೊನೇಯ ಓವರ್ನಲ್ಲಿ ಔಟಾದರೆ ಪೂಜಾ 33 ಎಸೆತಗಳಲ್ಲಿ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತ ಅಂತಿಮವಾಗಿ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಬಾಂಗ್ಲಾ ಪರರಿತು ಮೋನಿ 3 ಹಾಗೂ ನಹಿದಾ ಅಖ್ತರ್ 2 ವಿಕೆಟ್ ಕಿತ್ತು ಮಿಂಚಿದರು.
ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೆಗ್ನಾ ಸಿಂಗ್ ಅವರನ್ನು ಕೈಬಿಟ್ಟು ಪೂನಮ್ ಯಾದವ್ಗೆ ಅವಕಾಶ ನೀಡಲಾಗಿದೆ.
ಭಾರತ ಪ್ಲೇಯಿಂಗ್ XI: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್.
ಬಾಂಗ್ಲಾದೇಶ ಪ್ಲೇಯಿಂಗ್ XI: ಶರ್ಮಿನ್ ಅಖ್ತರ್, ಮುರ್ಶಿದಾ ಖಾತುನ್, ಫರ್ಗಾನಾ ಹೊಕ್, ರುಮಾನಾ ಅಹ್ಮದ್, ನಿಗರ್ ಸುಲ್ತಾನಾ (ನಾಯಕಿ/ ವಿಕೆಟ್ ಕೀಪರ್), ಸಲ್ಮಾ ಖಾತುನ್, ರಿತು ಮೋನಿ, ಲತಾ ಮೊಂಡಲ್, ಫಾಹಿಮಾ ಖಾತುನ್, ನಹಿದಾ ಅಖ್ತರ್, ಜಹಾನಾರಾ ಆಲಂ.
Virat Kohli: ಎದುರಾಳಿಗರಲ್ಲಿ ಭಯ ಶುರು: ಹೊಸದಾಗಿ ಆರ್ಸಿಬಿ ತಂಡ ಸೇರಿಕೊಂಡಿದ್ದು ಯಾರು ನೋಡಿ
IPL 2022: ಈ ಬಾರಿ ಆಟಗಾರರ ಜೊತೆ ಐಪಿಎಲ್ನಲ್ಲಿ ಮಿಂಚಲು ಸಜ್ಜಾದ ಲೇಡಿ ಆ್ಯಂಕರ್ಸ್ ಇವರೇ ನೋಡಿ