Virat Kohli: ಎದುರಾಳಿಗರಲ್ಲಿ ಭಯ ಶುರು: ಹೊಸದಾಗಿ ಆರ್​ಸಿಬಿ ತಂಡ ಸೇರಿಕೊಂಡಿದ್ದು ಯಾರು ನೋಡಿ

IPL 2022, RCB: ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಧಾರ ಸ್ತಂಭ ವಿರಾಟ್ ಕೊಹ್ಲಿ ಐಪಿಎಲ್ 2022ಕ್ಕಾಗಿ ಆರ್​ಸಿಬಿ ಪಾಳಯವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು ಕಿಂಗ್ ಕೊಹ್ಲಿಯ ಆಗಮನವಾಗಿದೆ ಎಂದಿದೆ.

Virat Kohli: ಎದುರಾಳಿಗರಲ್ಲಿ ಭಯ ಶುರು: ಹೊಸದಾಗಿ ಆರ್​ಸಿಬಿ ತಂಡ ಸೇರಿಕೊಂಡಿದ್ದು ಯಾರು ನೋಡಿ
RCB IPL 2022
Follow us
TV9 Web
| Updated By: Vinay Bhat

Updated on: Mar 22, 2022 | 8:53 AM

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಬೆರಳಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದೆ. ಇದೇ ಮಾರ್ಚ್ 26 ಶನಿವಾರದಂದು ಐಪಿಎಲ್ 2022ಕ್ಕೆ (IPL 2022) ಚಾಲನೆ ಸಿಗಲಿದೆ. ಹೊಸ ತಂಡ, ಹೊಸ ನಾಯಕ, ಹೊಸ ನಿಯಮ ಹೀಗೆ ಸಾಕಷ್ಟು ಬದಲಾವಣೆಗಳೊಂದಿಗೆ ಈ ಬಾರಿಯ ಮಿಲಿಯನ್ ಡಾಲರ್ ಟೂರ್ನಿ ನಡೆಯಲಿದೆ. ಕೆಲ ವಿದೇಶಿ ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಪ್ಲೇಯರ್ಸ್ ಈಗಾಗಲೇ ತಮ್ಮ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ. ಅಂತೆಯೆ ಚೊಚ್ಚಲ ಕಪ್​ನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಕೂಡ ಭರ್ಜರಿ ತಯಾರಿ ನಡೆಸುತ್ತಿದೆ. ನೂತನ ನಾಯಕ ಫಾಫ್ ಡುಪ್ಲೆಸಿಸ್ ಆಟಗಾರರ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದು ದೊಡ್ಡ ಗೇಮ್ ಪ್ಲಾನ್ ಅನ್ನೇ ರೂಪಿಸುತ್ತಿದ್ದಾರೆ. ಇದರ ನಡುವೆ ಆರ್​ಸಿಬಿ ತಂಡಕ್ಕೆ ಅಪಾಯಕಾರಿ ಆಟಗಾರನ ಎಂಟ್ರಿಯಾಗಿದೆ. ಹೌದು, ಆರ್​​ಸಿಬಿ ಪಾಳಯಕ್ಕೆ ಕಿಂಗ್ ಕೊಹ್ಲಿ(Virat Kohli) ಕಾಲಿಟ್ಟಿದ್ದಾರೆ.

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಆಧಾರ ಸ್ತಂಭ ವಿರಾಟ್ ಕೊಹ್ಲಿ ಆರ್​ಸಿಬಿ ಪಾಳಯವನ್ನು ಸೇರಿಕೊಂಡಿದ್ದಾರೆ. ಈ ಬಗ್ಗೆ ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು ಕಿಂಗ್ ಕೊಹ್ಲಿಯ ಆಗಮನವಾಗಿದೆ. ಇದುವೇ ಈಗ ದೊಡ್ಡ ಸುದ್ದಿ ಎಂದು ಬರೆದುಕೊಂಡಿದೆ. ಕೊಹ್ಲಿ ಬಹುಶಃ ಎರಡು ದಿನಗಳ ಕ್ವಾರಂಟೈನ್ ಅನುಭವಿಸಿ ಮುಂಬೈನಲ್ಲಿರುವ ಆರ್​ಸಿಬಿ ಕ್ಯಾಂಪ್ ಸೇರಿಕೊಳ್ಳಲಿದ್ದಾರೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದು ಇದೀಗ ಒಬ್ಬ ಬ್ಯಾಟರ್ ಆಗಿ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಯಾವರೀತಿ ಪ್ರದರ್ಶನ ತೋರುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಮೊದಲ ಸೀಸನ್​ನಿಂದಲೂ ಒಂದು ಪ್ರಶಸ್ತಿಗಾಗಿ ಹೋರಾಡುತ್ತಿರುವ ರಾಯಲ್ ಚಾಲೆಂಜರ್ಸ್ ಈ ಬಾರಿ ಆದರೂ ನೂತನ ನಾಯಕ, ನೂತನ ತಂಡದೊಂದಿಗೆ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಮಾರ್ಚ್ 27 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಆರ್​ಸಿಬಿ ತನ್ನ ಅಭಿಯಾನವನ್ನು ಶುರು ಮಾಡಲಿದೆ. ಆರ್​ಸಿಬಿ ಹರಾಜಿಗೂ ಮುನ್ನ ತನ್ನಲ್ಲೇ ಉಳಿಸಿಕೊಂಡಿದ್ದ ಸ್ಫೋಟಕ ಬ್ಯಾಟರ್ ಗ್ಲೇನ್ ಮ್ಯಾಕ್ಸ್​ವೆಲ್ ಆರಂಭದ ಕೆಲವು ಪಂದ್ಯಗಳಿಗೆ ಲಭ್ಯರಿಲ್ಲ ಎಂಬುದು ಅಭಿಮಾನಿಗಳಿಗೆ ಬೇಸರದ ಸಂಗತಿ.

ಕಳೆದ ವರ್ಷ ಯುಎಇನಲ್ಲಿ ನಡೆದ ಐಪಿಎಲ್​ನಲ್ಲಿ ಆರ್​ಸಿಬಿ ಪ್ಲೇ ಆಫ್​ ವರೆಗೂ ತಲುಪಿವಲ್ಲಿ ಯಶಸ್ವಿಯಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಎಡವಿದ ಪರಿಣಾಮ ಮುಂದಿನ ಹಂತಕ್ಕೆ ತೇರ್ಗಡೆಯಾಗಲಿಲ್ಲ. ಅದಾಗಲೇ ಕೊಹ್ಲಿ ನಾನು ಮುಂದಿನ ಆವೃತ್ತಿಯಿಂದ ಆರ್​ಸಿಬಿ ತಂಡದ ನಾಯಕನಾಗಿ ಇರುವುದಿಲ್ಲ ಎಂದು ಘೋಷಿಸಿದ್ದರು. ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಕೊಹ್ಲಿ, ಮ್ಯಾಕ್ಸ್​ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ರಿಟೇನ್ ಮಾಡಿಕೊಂಡಿತ್ತು.

ಆರ್​ಸಿಬಿ ಪರ ಓಪನರ್ ಯಾರು?:

ಹಿಂದಿನ ಸೀಸನ್​ಗಳಲ್ಲಿ ಆರ್​ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಓಪನರ್ ಆಗಿ ಕಣಕ್ಕಿಳಿಯುತ್ತಿದ್ದರು. ಈ ಬಾರಿ ಪಡಿಕ್ಕಲ್ ಇಲ್ಲ. ಕೊಹ್ಲಿ ಆರಂಭಿಕನಾಗಿ ಆಡಿದರೂ ದೊಡ್ಡ ಮಟ್ಟದ ಯಶಸ್ಸು ತಂಡಕ್ಕೆ ಸಿಗಲಿಲ್ಲ. ಹೀಗಾಗಿ ಡುಪ್ಲೆಸಿಸ್ ಓಪನರ್ ಆಗಿ ಆಡುವುದು ಖಚಿತ. ಆದರೆ, ಮತ್ತೊಬ್ಬ ಆರಂಭಿಕ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದಕ್ಕೆ ಅನೇಕ ಕ್ರಿಕೆಟ್ ಪಂಡಿತರು ಸಲಹೆ ನೀಡಿದ್ದಾರೆ. ಐಪಿಎಲ್ 2022 ರಲ್ಲಿ ಆರ್​ಸಿಬಿ ತಂಡದ ಪರ ಆರಂಭಿಕರಾಗಿ ಫಾಫ್ ಡುಪ್ಲೆಸಿಸ್ ಜೊತೆ ಯುವ ಕ್ರಿಕೆಟಿಗ ಅನೂಜ್ ರಾವತ್ ಕಣಕ್ಕಿಳಿಯಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಮ್ ಜಾಫರ್ ಹೇಳಿದ್ದಾರೆ. ಕೊಹ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬ್ಯಾಟ್ ಬೀಸಬೇಕು ಎಂದಿರುವ ಅವರು ಈ ಬಾರಿ ತಂಡಕ್ಕೆ ಎಬಿ ಡಿ ವಿಲಿಯರ್ಸ್ ಕೊಡುಗೆ ಇಲ್ಲದ ಕಾರಣ ಕೊಹ್ಲಿಯ ಅವಶ್ಯಕತೆ ಆರ್​ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿದೆ ಎಂಬುದು ಅವರ ಅಭಿಪ್ರಾಯ.

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್