India vs Bangladesh Women: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್: ಬಾಂಗ್ಲಾಕ್ಕೆ 230 ರನ್​ಗಳ ಟಾರ್ಗೆಟ್

ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಶುರುಮಾಡಿರುವ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 74 ರನ್​ಗಳ ಜೊತೆಯಾಟ ಆಡಿದರು.

India vs Bangladesh Women: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಕಳಪೆ ಬ್ಯಾಟಿಂಗ್: ಬಾಂಗ್ಲಾಕ್ಕೆ 230 ರನ್​ಗಳ ಟಾರ್ಗೆಟ್
India vs Bangladesh Women
Follow us
TV9 Web
| Updated By: Vinay Bhat

Updated on: Mar 22, 2022 | 9:57 AM

ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್​ನ (Womens World Cup 2022) 22ನೇ ಪಂದ್ಯದಲ್ಲಿಂದು ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ತಂಡ ಮುಖಾಮುಖಿ ಆಗುತ್ತಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮಹಿಳಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿ ಸಾಧಾರಣ ರನ್ ಕಲೆಹಾಕಿದೆಯಷ್ಟೆ. ಬಾಂಗ್ಲಾಕ್ಕೆ ಗೆಲ್ಲಲು 230 ರನ್​ಗಳ ಟಾರ್ಗೆಟ್ ಅನ್ನಷ್ಟೆ ನೀಡಿದೆ. ಈ ಬಾರಿ ಕೂಡ ಮಿಥಾಲಿ ಪಡೆ ಮತ್ತೆ ಬ್ಯಾಟಿಂಗ್​ನಲ್ಲಿ ಎಡವಿತು. ಮಧ್ಯಮ ಕ್ರಮಾಂಕ ಮತ್ತೊಮ್ಮೆ ಸಂಪೂರ್ಣ ವೈಫಲ್ಯ ಕಂಡಿತು. ಭಾರತೀಯ ವನಿತೆಯರು ಆಡಿದ 5 ಪಂದ್ಯಗಳಲ್ಲಿ2 ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋತಿದ್ದು, 4 ಅಂಕಗಳೊಂದಿಗೆ +0.456 ರನ್ ರೇಟ್ ಹೊಂದಿ ಅಂಕ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ರಾಜ್ (Mithali Raj) ಬಳಗ ಭರ್ಜರಿ ಗೆಲುವು ಸಾಧಿಸಲೇ ಬೇಕಾದ ಒತ್ತಡದಲ್ಲಿದೆ. ಇಲ್ಲವಾದರೆ ಸೆಮಿಫೈನಲ್ ಹಂತಕ್ಕೇರುವ ಕನಸು ನುಚ್ಚುನೂರಾಗಲಿದೆ.

ಹ್ಯಾಮಿಲ್ಟನ್‌ನ ಸೆಡ್ಡಾನ್ ಪಾರ್ಕ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಶುರುಮಾಡಿರುವ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಸ್ಮೃತಿ ಮಂದಾನ ಹಾಗೂ ಶಫಾಲಿ ವರ್ಮಾ 74 ರನ್​ಗಳ ಜೊತೆಯಾಟ ಆಡಿದರು. ಬಿರುಸಿನ ಆಟದ ಮೊರೆ ಹೋದ ಶಫಾಲಿ 42 ಎಸೆತಗಳಲ್ಲಿ 6 ಫೋರ್, 1 ಸಿಕ್ಸರ್​ನೊಂದಿಗೆ 42 ರನ್ ಗಳಿಸಿದರೆ, ಇದರ ಬೆನ್ನಲ್ಲೇ 30 ರನ್​ಗಳಿಸಿದ್ದ ಸ್ಮೃತಿ ಮಂದಾನ ಔಟಾದರು. ಇದೇ ಹೊತ್ತಿಗೆ ಬಂದ ಬೆನ್ನಲ್ಲೇ ಮೊದಲ ಎಸೆತದಲ್ಲಿ ನಾಯಕಿ ಮಿಥಾಲಿ ರಾಜ್ ಔಟಾಗಿದ್ದು ತಂಡಕ್ಕೆ ಹೊಡೆತ ಬಿದ್ದಿತು. 73 ರನ್​ಗೆ ಒಂದೂ ವಿಕೆಟ್ ಕಳೆದುಕೊಳ್ಳದ ಭಾರತ 74 ರನ್ ಆಗುವ ಹೊತ್ತಿಗೆ 3 ಪ್ರಮುಖ ವಿಕೆಟ್ ಕೈಚೆಲ್ಲಿತು.

ನಂತರ ಜೊತೆಯಾದ ಯಸ್ತಿಕಾ ಭಾಟಿಯಾ ಹಾಗೂ ಹರ್ಮನ್​ಪ್ರೀತ್ ಕೌರ್ ಕೂಡ ದೊಡ್ಡ ಜೊತೆಯಾಟ ಆಡಲು ಸಾಧ್ಯವಾಗಿಲ್ಲ. ಹರ್ಮನ್ 33 ಎಸೆತಗಳಲ್ಲಿ 14 ರನ್​ಗೆ ಔಟಾದರು. ರಿಚ್ಚಾ ಘೋಷ್ ಜೊತೆಗೂಡಿ ಯಸ್ತಿಕಾ 54 ರನ್​ಗಳ ಜೊತೆಯಾಟ ಆಡಿದ್ದು ತಂಡದ ಮೊತ್ತ 150ರ ಗಡಿ ದಾಟಿತು. ರಿಚ್ಚಾ 36 ಎಸೆತಗಳಲ್ಲಿ 26 ರನ್​ಗೆ ನಿರ್ಗಮಿಸಿದರೆ, ಯಸ್ತಿಕಾ 80 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಇನ್ನಿಂಗ್ಸ್ ಮುಗಿಸಿದರು.

ಕೊನೇ ಹಂತದಲ್ಲಿ ತಂಡಕ್ಕೆ ಪೂಜಾ ವಸ್ತ್ರಾಕರ್ ಹಾಗೂ ಸ್ನೇಹ್ ರಾಣ ಆಸರೆಯಾದರು. ತಂಡದ ಮೊತ್ತವನ್ನು 200ರ ಗಡಿದಾಟಿಸಲು ಇವರು ಪ್ರಮುಖ ಪಾತ್ರವಹಿಸಿದರು. ಸ್ನೇಹ್ 23 ಎಸೆತಗಳಲ್ಲಿ 27 ರನ್​ಗೆ ಕೊನೇಯ ಓವರ್​ನಲ್ಲಿ ಔಟಾದರೆ ಪೂಜಾ 33 ಎಸೆತಗಳಲ್ಲಿ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಭಾರತ ಅಂತಿಮವಾಗಿ 50 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತು. ಬಾಂಗ್ಲಾ ಪರರಿತು ಮೋನಿ 3 ಹಾಗೂ ನಹಿದಾ ಅಖ್ತರ್ 2 ವಿಕೆಟ್ ಕಿತ್ತು ಮಿಂಚಿದರು.

ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೆಗ್ನಾ ಸಿಂಗ್ ಅವರನ್ನು ಕೈಬಿಟ್ಟು ಪೂನಮ್ ಯಾದವ್​ಗೆ ಅವಕಾಶ ನೀಡಲಾಗಿದೆ.

ಭಾರತ ಪ್ಲೇಯಿಂಗ್ XI: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ, ಮಿಥಾಲಿ ರಾಜ್ (ನಾಯಕಿ), ಹರ್ಮನ್‌ಪ್ರೀತ್ ಕೌರ್, ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ್ ರಾಣಾ, ಪೂಜಾ ವಸ್ತ್ರಾಕರ್, ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್, ಪೂನಮ್ ಯಾದವ್.

ಬಾಂಗ್ಲಾದೇಶ ಪ್ಲೇಯಿಂಗ್ XI: ಶರ್ಮಿನ್ ಅಖ್ತರ್, ಮುರ್ಶಿದಾ ಖಾತುನ್, ಫರ್ಗಾನಾ ಹೊಕ್, ರುಮಾನಾ ಅಹ್ಮದ್, ನಿಗರ್ ಸುಲ್ತಾನಾ (ನಾಯಕಿ/ ವಿಕೆಟ್ ಕೀಪರ್), ಸಲ್ಮಾ ಖಾತುನ್, ರಿತು ಮೋನಿ, ಲತಾ ಮೊಂಡಲ್, ಫಾಹಿಮಾ ಖಾತುನ್, ನಹಿದಾ ಅಖ್ತರ್, ಜಹಾನಾರಾ ಆಲಂ.

Virat Kohli: ಎದುರಾಳಿಗರಲ್ಲಿ ಭಯ ಶುರು: ಹೊಸದಾಗಿ ಆರ್​ಸಿಬಿ ತಂಡ ಸೇರಿಕೊಂಡಿದ್ದು ಯಾರು ನೋಡಿ

IPL 2022: ಈ ಬಾರಿ ಆಟಗಾರರ ಜೊತೆ ಐಪಿಎಲ್​ನಲ್ಲಿ ಮಿಂಚಲು ಸಜ್ಜಾದ ಲೇಡಿ ಆ್ಯಂಕರ್ಸ್ ಇವರೇ ನೋಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್