- Kannada News Photo gallery IPL 2022 Anchors Sanjana Ganesan to Tanya Purohit here you see top most beautiful lady anchors for 15th IPL
IPL 2022: ಈ ಬಾರಿ ಆಟಗಾರರ ಜೊತೆ ಐಪಿಎಲ್ನಲ್ಲಿ ಮಿಂಚಲು ಸಜ್ಜಾದ ಲೇಡಿ ಆ್ಯಂಕರ್ಸ್ ಇವರೇ ನೋಡಿ
IPL 2022 Anchors: ಭಾರತದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಾಯಾಂತಿ ಲ್ಯಾಂಗರ್ ಐಪಿಎಲ್ ಆ್ಯಂಕರ್ಗಳಲ್ಲಿ ಪರಿಚಿತ ಮುಖ. ಸೋಷಿಯಲ್ ಮೀಡಿಯಾದಲ್ಲಿ ಮಾಯಾಂತಿ ಫಾಲೋವರ್ಸ್ ಸಂಖ್ಯೆ ಕಡಿಮೆಯೇನಿಲ್ಲ.
Updated on:Mar 22, 2022 | 9:24 AM



ನಶ್ ಪ್ರೀತ್ ಕೌರ್ – ಬ್ಯೂಟಿಫುಲ್ ಆ್ಯಂಕರ್ ನಶ್ ಪ್ರೀತ್ ಕೌರ್ ಕೂಡ ಐಪಿಎಲ್ನ ಅನೇಕ ಪಂದ್ಯಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಭಾರತೀಯ ಮಹಿಳಾ ಕ್ರೀಡಾ ನಿರೂಪಕಿಯರಾಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ನಶ್ ಪ್ರೀತ್ ಕೌರ್ ಹುಟ್ಟಿ ಬೆಳೆದದ್ದು ಮೆಲ್ಬೋರ್ನ್ ನಲ್ಲಿ. ನಶ್ಪ್ರೀತ್ ಕೌರ್ 2014 ರಲ್ಲಿ ಮಾಡೆಲಿಂಗ್ ಮಾಡಿ ಸಿನಿಮಾ ಲೋಕಕ್ಕೂ ಕಾಲಿಟ್ಟಿದ್ದರು.

ಮಾಯಾಂತಿ ಲ್ಯಾಂಗರ್ - ಭಾರತದ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರ ಪತ್ನಿ ಮಾಯಾಂತಿ ಲ್ಯಾಂಗರ್ ಐಪಿಎಲ್ ಆ್ಯಂಕರ್ಗಳಲ್ಲಿ ಪರಿಚಿತ ಮುಖ. ಸೋಷಿಯಲ್ ಮೀಡಿಯಾದಲ್ಲಿ ಮಾಯಾಂತಿ ಫಾಲೋವರ್ಸ್ ಸಂಖ್ಯೆ ಕಡಿಮೆಯೇನಿಲ್ಲ. ಮುಂಬರುವ ಐಪಿಎಲ್ನಲ್ಲಿ ಮಾಯಾಂತಿ ಅವರು ಮೈದಾನದಲ್ಲಿ ಇರುವುದಿಲ್ಲ ಬದಲಾಗಿ ಸ್ಟುಡಿಯೋದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನೆರೋಲಿ ಮೆಡೋಸ್ - ನೆರೋಲಿ ಮೆಡೋಸ್ ಆಸ್ಟ್ರೇಲಿಯಾದ ಪತ್ರಕರ್ತೆ ಮತ್ತು ಕ್ರಿಕೆಟ್ ನಿರೂಪಕಿ. ಇವರುಕೂಡ ಐಪಿಎಲ್ ನ ಬಹುಬೇಡಿಕೆಯ ಆ್ಯಂಕರ್ ಆಗಿದ್ದಾರೆ.
Published On - 8:58 am, Tue, 22 March 22
