
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಭಾರತ ಮಹಿಳಾ ತಂಡದ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಂಗ್ಲರ ಪಡೆಗೆ ಸೋಫಿಯಾ ಡಂಕ್ಲಿ ಹಾಗೂ ವ್ಯಾಟ್ ಹಾಡ್ಜ್ ಭರ್ಜರಿ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್ಗೆ 137 ರನ್ ಪೇರಿಸಿದ ಬಳಿಕ ಸೋಫಿಯಾ ಡಂಕ್ಲಿ (75) ಔಟಾದರು. ಇದರ ಬೆನ್ನಲ್ಲೇ ವ್ಯಾಟ್ ಹಾಡ್ಜ್ (66) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಇಂಗ್ಲೆಂಡ್ ತಂಡವನ್ನು 20 ಓವರ್‌ಗಳಲ್ಲಿ 171 ರನ್ ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
172 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಕಡೆಯಿಂದ ಸ್ಫೋಟಕ ಆರಂಭ ಪಡೆಯಿತು. ಕೇವಲ 25 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 47 ರನ್ ಬಾರಿಸಿ ಶಫಾಲಿ ಔಟಾದರು. ಆ ಬಳಿಕ ಬಂದ ಜೆಮಿಮಾ ರೊಡ್ರಿಗಸ್ 20 ರನ್ ಗಳ ಕೊಡುಗೆ ನೀಡಿದರು.
ಈ ಮೂಲಕ ಟೀಮ್ ಇಂಡಿಯಾ 13 ಓವರ್‌ಗಳಲ್ಲಿ 123 ರನ್ ಕಲೆಹಾಕಿತ್ತು. ಆದರೆ ಈ ಹಂತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ಸ್ಮೃತಿ ಮಂಧಾನ (56) ಔಟಾದರು. ಇದಾಗ್ಯೂ ಕೊನೆಯ ಓವರ್‌ನಲ್ಲಿ ಟೀಮ್ ಇಂಡಿಯಾ ಗೆ ಕೇವಲ 12 ರನ್ ಗಳು ಮಾತ್ರ ಬೇಕಿದ್ದವು.
ಆದರೆ ಅಂತಿಮ ಓವರ್‌ನಲ್ಲಿ ಬಿರುಸಿನ ಹೊಡೆತ ಬಾರಿಸುವಲ್ಲಿ ಹರ್ಮನ್ ಪ್ರೀತ್ ಕೌರ್ ಹಾಗೂ ಅಮನ್ಜೊತ್ ಕೌರ್ ವಿಫಲರಾದರು. ಪರಿಣಾಮ ಟೀಮ್ ಇಂಡಿಯಾ 5 ರನ್ ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಇಂಗ್ಲೆಂಡ್ ಪ್ಲೇಯಿಂಗ್ 11: ಸೋಫಿಯಾ ಡಂಕ್ಲಿ , ಡೇನಿಯಲ್ ವ್ಯಾಟ್-ಹಾಡ್ಜ್ , ಆಲಿಸ್ ಕ್ಯಾಪ್ಸೆ , ಟ್ಯಾಮಿ ಬ್ಯೂಮಾಂಟ್ (ನಾಯಕಿ) , ಆಮಿ ಜೋನ್ಸ್ (ವಿಕೆಟ್ ಕೀಪರ್) , ಪೈಜ್ ಸ್ಕೋಲ್ಫೀಲ್ಡ್ , ಸೋಫಿ ಎಕ್ಲೆಸ್ಟೋನ್ , ಇಸ್ಸಿ ವಾಂಗ್ , ಷಾರ್ಲೆಟ್ ಡೀನ್ , ಲಾರೆನ್ ಫೈಲರ್ , ಲಾರೆನ್ ಬೆಲ್.
ಇದನ್ನೂ ಓದಿ: IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ
ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಅಮನ್ಜೋತ್ ಕೌರ್ , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ರಾಧಾ ಯಾದವ್ , ಅರುಂಧತಿ ರೆಡ್ಡಿ , ಸ್ನೇಹ ರಾಣಾ , ಶ್ರೀ ಚರಣಿ.