ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಎರಡನೇ ಟೆಸ್ಟ್ನಲ್ಲಿ ಭಾರತ ದಾಖಲೆಯ ಮೊತ್ತದ ಗೆಲುವು ಸಾಧಿಸಿ ಟೆಸ್ಟ್ ಸರಣಿ (Test Series) ವಶಪಡಿಸಿಕೊಂಡಿತು. ಸ್ಪಿನ್ನರ್ಗಳಿಗೇ ಹೆಚ್ಚು ನೆರವಾಗುವ ಮುಂಬೈನ ವಾಂಖೆಡೆ ಪಿಚ್ (Wankhede Pitch) ವೇಗಿಗಳಿಗೂ ಸಹಾಯವಾಗುವಂತೆ ವರ್ತಿಸಿದ್ದು ಅಚ್ಚರಿ ಮೂಡಿಸಿತು. ಇದರ ಪ್ರಯೋಗವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡ ಟೀಮ್ ಇಂಡಿಯಾ (Team India) ಕಿವೀಸ್ ಮೇಲೆ ಸವಾರಿ ಮಾಡಿತು. ಪಂದ್ಯ ಆರಂಭಕ್ಕೂ ಮುನ್ನ ಮತ್ತು ಅದರ ಹಿಂದಿನ ದಿನ ಸತತ ಮಳೆ ಸುರಿದರೂ ವಾಂಖೆಡೆ ಪಿಚ್ ಪಂದ್ಯಕ್ಕೆ ಸಂಪೂರ್ಣ ಸಜ್ಜಾಗಿ ಕಠಿಣವಾಗಿತ್ತು ನಿರ್ಮಿಸಲಾಗಿತ್ತು. ಇದನ್ನು ಸಿದ್ಧಪಡಿಸಿ ಗ್ರೌಂಡ್ಸ್ಮೆನ್ ಸಾಕಷ್ಟು ಶ್ರಮವಹಿಸಿದ್ದರು. ಇದನ್ನ ಮರೆಯದ ವಿರಾಟ್ ಕೊಹ್ಲಿ ಪಡೆ (Virat Kohli) ಪಂದ್ಯ ಮುಗಿದ ಬಳಿಕ ವಾಂಖೆಡೆ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್ಮೆನ್ಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.
ಐತಿಹಾಸಿಕ ಗೆಲುವು ಕಾಣಲು ಕಾರಣವಾದ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಭಾರತಕ್ಕೆ ಹೇಗೆ ಬೇಕೋ ಹಾಗೆ ವರ್ತಿಸಿತು. ಇದರಿಂದ ಖುಷಿಯಾದ ಟೀಮ್ ಇಂಡಿಯಾ ಅಲ್ಲಿನ ಗ್ರೌಂಡ್ಸ್ಮೆನ್ಗೆ 35,000 ರೂಪಾಯಿ ನೀಡಿದ್ದಾರೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಮೊದಲ ಟೆಸ್ಟ್ನ ಕಾನ್ಪುರ ಪಿಚ್ ಸಿದ್ಧಪಡಿಸಿದ ಗ್ರೌಂಡ್ಸ್ಮೆನ್ಗೆ ಹಣ ನೀಡಿದ್ದರು. ಈ ಬಗ್ಗೆ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಪ್ರಕಟಿಸಿತ್ತು. “ನಾವು ಅಧಿಕೃತವಾಗಿ ಪ್ರಕಟಿಸಲು ಬಯಸುತ್ತೇವೆ. ರಾಹುಲ್ ದ್ರಾವಿಡ್ ಅವರು ನಮ್ಮ ಗ್ರೌಂಡ್ಸ್ಮೆನ್ಗೆ ವೈಯಕ್ತಿಕವಾಗಿ 35 ಸಾವಿರ ರೂ ಕೊಟ್ಟಿದ್ದಾರೆ” ಎಂದು ಕ್ರಿಕೆಟ್ ಸಂಸ್ಥೆ ಹೇಳಿತ್ತು. ಸದ್ಯ ಭಾರತೀಯ ಕ್ರಿಕೆಟ್ ಕೂಡ ವಾಂಖೆಡೆ ಗ್ರೌಂಡ್ಸ್ಮೆನ್ಗೆ ಹಣ ನೀಡಿದ್ದಾರೆ.
ಸೋಮವಾರ ಬೆಳಗ್ಗೆ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ 5 ವಿಕೆಟ್ ಕಳೆದುಕೊಂಡು 140 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 400 ರನ್ ಅಗತ್ಯವಿತ್ತು. ಆದರೆ, ಜಯಂತ್ ಯಾದವ್ ಸ್ಪಿನ್ ಮೋಡಿಗೆ ನಲುಗಿದ ಕಿವೀಸ್ 56.3 ಓವರ್‌ಗಳಿಗೆ 167 ರನ್‌ಗಳಿಗೆ ಸರ್ವ ಪತನ ಕಂಡಿತು. ಆ ಮೂಲಕ ಹೆಚ್ಚು ಕಡಿಮೆ ಎರಡು ದಿನ ಬಾಕಿ ಇರುವಾಗಲೇ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಭಾರತದ ಪರ ಅತ್ಯುತ್ತಮ ಬೌಲ್ ಮಾಡಿದ ಆರ್ ಅಶ್ವಿನ್ ಹಾಗೂ ಜಯಂತ್ ಯಾದವ್ ತಲಾ 4 ವಿಕೆಟ್‌ಗಳನ್ನು ಪಡೆದುಕೊಂಡರು.
ಇದರ ಜೊತೆಗೆ ವಿರಾಟ್ ಕೊಹ್ಲಿ ಎಲ್ಲಾ ಸ್ವರೂಪದಲ್ಲಿಯೂ 50 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿತು. ಆ ಮೂಲಕ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇನ್ನಷ್ಟು ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಡಿಸೆಂಬರ್ 26 ರಿಂದ ಭಾರತ ತಂಡ ಮೊದಲನೇ ಟೆಸ್ಟ್ ಪಂದ್ಯವಾಡಲಿದೆ.
Ravichandran Ashwin: ಅಶ್ವಿನ್ ಮಾಡಿದ ಒಂದು ಟ್ವೀಟ್ಗೆ ಬ್ಲೂ ಟಿಕ್ ಆಯ್ತು ಈ ನ್ಯೂಜಿಲೆಂಡ್ ಕ್ರಿಕೆಟಿಗನ ಅಕೌಂಟ್
(Indian cricket team donated a sum of INR 35000 to Wankhede Stadium groundstaff after Virat Kohli Team Won vs New Zealand)