ದಿಗ್ಗಜರ ಸಮಾಗಮ: ಐಪಿಎಲ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾದ ಧೋನಿ-ಯುವಿ ಭೇಟಿ
MS Dhoni-Yuvraj Singh: ಧೋನಿ ಮತ್ತು ಯುವರಾಜ್ ಭಾರತದ ಅತ್ಯುತ್ತಮ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ಇಬ್ಬರು ದಿಗ್ಗಜರು ಒಟ್ಟಾಗಿ ಟೀಮ್ ಇಂಡಿಯಾಗೆ ಅನೇಕ ಸ್ಮರಣೀಯ ವಿಜಯಗಳನ್ನು ನೀಡಿದ್ದಾರೆ.
Updated on: Dec 07, 2021 | 2:38 PM

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ (Yuvraj Singh) ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಹೀಗೆ ವೈರಲ್ ಆಗಲು ಒಂದು ಕಾರಣ ಐಪಿಎಲ್ ಎಂದರೆ ತಪ್ಪಾಗಲಾರದು. ಏಕೆಂದರೆ ಇತ್ತೀಚೆಗೆ ಯುವರಾಜ್ ಸಿಂಗ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಹಿಂತಿರುಗುವುದಾಗಿ ಘೋಷಿಸಿದ್ದರು. ಇದೀಗ ವರ್ಷಗಳ ಬಳಿಕ ಧೋನಿ-ಯುವಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಯುವರಾಜ್ ಸಿಂಗ್ ಐಪಿಎಲ್ಗೆ ಕಂಬ್ಯಾಕ್ ಮಾಡಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನೆಂದರೆ ಯುವರಾಜ್ ಸಿಂಗ್.

ಧೋನಿ ಮತ್ತು ಯುವರಾಜ್ ಭಾರತದ ಅತ್ಯುತ್ತಮ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಈ ಇಬ್ಬರು ದಿಗ್ಗಜರು ಒಟ್ಟಾಗಿ ಟೀಮ್ ಇಂಡಿಯಾಗೆ ಅನೇಕ ಸ್ಮರಣೀಯ ವಿಜಯಗಳನ್ನು ನೀಡಿದ್ದಾರೆ. ಇದೀಗ ಇಬ್ಬರು ಮತ್ತೆ ಲೀಗ್ನಲ್ಲಿ ಜೊತೆಯಾಗಲಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಮೊದಲ ಟಿ20 ವಿಶ್ವಕಪ್ (2007) ಮತ್ತು ಏಕದಿನ ವಿಶ್ವಕಪ್ (2011) ಟೀಮ್ ಇಂಡಿಯಾ ಗೆದ್ದಾಗ ಇಡೀ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಯುವರಾಜ್ ಸಿಂಗ್ ಎಂಬುದು ವಿಶೇಷ.

ಇದೀಗ ಇದೇ ಜೋಡಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಐಪಿಎಲ್ ಮೆಗಾ ಹರಾಜಿಗೆ ತಿಂಗಳುಗಳು ಮಾತ್ರ ಉಳಿದಿರುವಾಗ, ಹೀಗಾಗಿಯೇ ಇಬ್ಬರ ಭೇಟಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಧೋನಿ-ಯುವರಾಜ್ ಸಿಂಗ್ ಜಾಹೀರಾತಿನಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೂಡ ಇದೆ. ಹಾಗಾಗಿ ಇಬ್ಬರ ದಿಗ್ಗಜರ ಭೇಟಿ ಉದ್ದೇಶವೇನು ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.



















