IND vs IRE: ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್​ಗೆ ಹಾರಿದ ಭಾರತ; ಪ್ರವಾಸದ ಸಂಪೂರ್ಣ ವೇಳಾಪಟ್ಟಿ, ತಂಡಗಳು ಹೀಗಿವೆ

| Updated By: ಪೃಥ್ವಿಶಂಕರ

Updated on: Jun 23, 2022 | 2:27 PM

IND vs IRE: ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಲಿದ್ದು, ಇದು ಅವರಿಗೆ ವಿಶೇಷ ಸಂದರ್ಭವಾಗಿದೆ. ವಾಸ್ತವವಾಗಿ, 6 ತಿಂಗಳ ಹಿಂದೆ, ಹಾರ್ದಿಕ್ ಪಾಂಡ್ಯ ನಿರಂತರವಾಗಿ ಗಾಯಗಳೊಂದಿಗೆ ಹೋರಾಡುತ್ತಿದ್ದರಿಂದ ಅವರ ಭವಿಷ್ಯವು ಕತ್ತಲೆಯಲ್ಲಿತ್ತು.

IND vs IRE: ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್​ಗೆ ಹಾರಿದ ಭಾರತ; ಪ್ರವಾಸದ ಸಂಪೂರ್ಣ ವೇಳಾಪಟ್ಟಿ, ತಂಡಗಳು ಹೀಗಿವೆ
IND vs IRE
Follow us on

ರೋಹಿತ್ ಶರ್ಮಾ (Rohit Sharma) ನಾಯಕತ್ವದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ (Test against Englan) ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಟೆಸ್ಟ್‌ಗೆ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ತಂಡ ಐರ್ಲೆಂಡ್‌ಗೆ ತೆರಳಿದೆ. ಜೂನ್ 26 ರಿಂದ ಐರ್ಲೆಂಡ್ ವಿರುದ್ಧ ಭಾರತ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ, ಇದರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಂತರ ಟೀಂ ಇಂಡಿಯಾದ ಆಟಗಾರರಿಗೆ 3 ದಿನಗಳ ರಜೆ ಸಿಕ್ಕಿದ್ದು, ಆ ಬಳಿಕ ಎಲ್ಲಾ ಆಟಗಾರರು ಇದೀಗ ಮುಂಬೈನಿಂದ ಐರ್ಲೆಂಡ್​ಗೆ ಹಾರಿದ್ದಾರೆ. ಯುಜ್ವೇಂದ್ರ ಚಹಾಲ್ ಐರ್ಲೆಂಡ್‌ಗೆ ತೆರಳುವ ಮೊದಲು ಟ್ವಿಟರ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಚಹಲ್ ಜೊತೆಗಿನ ಫೋಟೋದಲ್ಲಿ ರಿತುರಾಜ್ ಗಾಯಕ್ವಾಡ್ (Rituraj Gaikwad) ಕೂಡ ಇದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾದ ಕೋಚ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರೂ ಆಗಿರುವ ವಿವಿಎಸ್ ಲಕ್ಷ್ಮಣ್ ಆಗಿರುತ್ತಾರೆ.

ಹಾರ್ದಿಕ್ ಪಾಂಡ್ಯಗೆ ವಿಶೇಷ ಸಂದರ್ಭ

ಇದನ್ನೂ ಓದಿ
IND vs ENG: ಆಂಗ್ಲರನ್ನು ಮಣಿಸಲು ಭಾರತ ಸಿದ್ಧ; ಜೂನ್ 23 ರಿಂದ ಅಭ್ಯಾಸ ಪಂದ್ಯ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಕ್ ಯುವ ಬೌಲರ್ ಶೋಯೆಬ್; ಸ್ಥಿತಿ ಚಿಂತಾಜನಕ

ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕರಾಗಲಿದ್ದು, ಇದು ಅವರಿಗೆ ವಿಶೇಷ ಸಂದರ್ಭವಾಗಿದೆ. ವಾಸ್ತವವಾಗಿ, 6 ತಿಂಗಳ ಹಿಂದೆ, ಹಾರ್ದಿಕ್ ಪಾಂಡ್ಯ ನಿರಂತರವಾಗಿ ಗಾಯಗಳೊಂದಿಗೆ ಹೋರಾಡುತ್ತಿದ್ದರಿಂದ ಅವರ ಭವಿಷ್ಯವು ಕತ್ತಲೆಯಲ್ಲಿತ್ತು. ಆದರೆ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದ ತಕ್ಷಣ ಎಲ್ಲವೂ ಬದಲಾಯಿತು. ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿತು. ಇದಾದ ಬಳಿಕ ಟೀಂ ಇಂಡಿಯಾಗೆ ವಾಪಸಾದ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿ ಇದೀಗ ಟೀಂ ಇಂಡಿಯಾದ ಜವಾಬ್ದಾರಿ ಹೊತ್ತಿದ್ದಾರೆ.

ಇದನ್ನೂ ಓದಿ:IND vs SA: ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದಲ್ಲಿದ್ದ ಸಮಸ್ಯೆಗಳಿಗೆ ಸಿಕ್ಕ ಪರಿಹಾರಗಳಿವು

ಉಮ್ರಾನ್ ಮಲಿಕ್‌ಗೆ ಅವಕಾಶ ಸಿಗಬಹುದು

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅವಕಾಶ ಪಡೆಯದ ವೇಗದ ಬೌಲರ್‌ಗಳಾದ ಉಮ್ರಾನ್ ಮಲಿಕ್ ಮತ್ತು ಅರ್ಷ್‌ದೀಪ್ ಸಿಂಗ್ ಐರ್ಲೆಂಡ್ ವಿರುದ್ಧ ಅವಕಾಶ ಪಡೆಯಬಹುದು. ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಹಿನ್ನಡೆಯಲ್ಲಿತ್ತು. ನಂತರ ಭಾರತ ಮೂರು ಮತ್ತು ನಾಲ್ಕನೇ ಪಂದ್ಯಗಳನ್ನು ಗೆದ್ದು ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು. ಸರಣಿಯ ಐದನೇ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು.

ಆಯ್ಕೆ ಸಮಿತಿಯ ಹದ್ದಿನ ಕಣ್ಣು

ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬಲಿಷ್ಠ ತಂಡವನ್ನು ಕಳುಹಿಸಿಲ್ಲ. ಅನೇಕ ಹಿರಿಯ ಆಟಗಾರರು ಇಂಗ್ಲೆಂಡ್‌ನಲ್ಲಿ ಆಡಲಿದ್ದಾರೆ. ಭಾರತ ದ್ವಿತೀಯ ತಂಡವನ್ನು ಕಳುಹಿಸಿದ್ದರೂ, ಟೀಂ ಇಂಡಿಯಾ ಐರ್ಲೆಂಡ್‌ಗಿಂತ ಮೇಲುಗೈ ಸಾಧಿಸಿದೆ. ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನುಭವ ಹೊಂದಿರುವ ಆಟಗಾರರನ್ನು ಹೊಂದಿದೆ. ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಆತಿಥ್ಯ ವಹಿಸಲಿದೆ. ಆದ್ದರಿಂದ ಈ ಸರಣಿಯಲ್ಲಿ ಆಟಗಾರರ ಪ್ರದರ್ಶನದ ಬಗ್ಗೆ ಆಯ್ಕೆ ಸಮಿತಿ ಹೆಚ್ಚು ಗಮನ ಹರಿಸಲಿದೆ.

ಐರ್ಲೆಂಡ್ ಟಿ20 ಸರಣಿಗೆ ಟೀಂ ಇಂಡಿಯಾ ತಂಡ

ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ಹರ್ಷಲ್ ಪಟೇಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ಅವೇಶ್ ಖಾನ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ರಿತುರಾಜ್ ಗಾಯಕ್ವಾಡ್, ಯುಜ್ವೇಂದ್ರ ಚಾಹಲ್ ಮತ್ತು ರವಿ ಭಿಷ್ಣೋ ಚಾಹಲ್ .

ಐರ್ಲೆಂಡ್ ತಂಡ: ಆಂಡ್ರ್ಯೂ ಬಾಲ್ಬಿರ್ನೆ, ಹ್ಯಾರಿ ಟೆಕ್ಟರ್, ಜಾರ್ಜ್ ಡಾಕ್ರೆಲ್, ಗರೆಥ್ ಡೆಲಾನಿ, ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕೆಂಪ್ಫರ್, ಸ್ಟೀಫನ್ ಡೌನಿ, ಲೋರ್ಕನ್ ಟಕರ್, ಮಾರ್ಕ್ ಅಡೇರ್, ಕಾನರ್ ಆಲ್ಫರ್ಟ್, ಜೋಶುವಾ ಲಿಟಲ್, ಆಂಡಿ ಮೆಕ್‌ಬ್ರೈಲ್, ಬೆಕಿ ಮೆಕಾರ್ಥಿ ಮತ್ತು ಕ್ರೇಗ್ ಯೂಂಗ್.

IND vs IRE ವೇಳಾಪಟ್ಟಿ

– ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಜೂನ್ 26 ರಂದು ಬೆಲ್‌ಫಾಸ್ಟ್‌ನಲ್ಲಿ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಪಂದ್ಯ ಆರಂಭವಾಗಲಿದೆ.

ಎರಡನೇ T20 ಜೂನ್ 28 ರಂದು ಬೆಲ್‌ಫಾಸ್ಟ್‌ನಲ್ಲಿಯೇ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಪಂದ್ಯ ಆರಂಭವಾಗಲಿದೆ.

Published On - 2:27 pm, Thu, 23 June 22