IND vs ENG: ಆಂಗ್ಲರನ್ನು ಮಣಿಸಲು ಭಾರತ ಸಿದ್ಧ; ಜೂನ್ 23 ರಿಂದ ಅಭ್ಯಾಸ ಪಂದ್ಯ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ
IND vs ENG: ಇಂಗ್ಲೆಂಡ್ ಕ್ರಿಕೆಟ್ ತಂಡ ಜುಲೈ 1ರಿಂದ ತವರಿನಲ್ಲಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದ್ದು, ಆಂಗ್ಲ ತಂಡಕ್ಕೆ ಆಘಾತವೊಂದು ಎದುರಾಗಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಈ ಏಕೈಕ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯ (India vs England) ಜುಲೈ 1 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ಆದರೆ ಅದಕ್ಕೂ ಮೊದಲು ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡಬೇಕಾಗಿದೆ. ಟೀಂ ಇಂಡಿಯಾ (Team India), ಕೌಂಟಿ ಲೀಸೆಸ್ಟರ್‌ಶೈರ್ (County Leicestershire) ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದೆ. ಜೂನ್ 23 ರಿಂದ ಪ್ರಾರಂಭವಾಗುವ ಈ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಸರಿಯಾದ ಸಂಯೋಜನೆಯನ್ನು ಮಾಡಲು ಈ ಅಭ್ಯಾಸ ಪಂದ್ಯ ಸಹಾಯ ಮಾಡಲಿದೆ.
ಟೆಸ್ಟ್ ಪಂದ್ಯಕ್ಕೂ ಮುನ್ನ 4 ದಿನಗಳ ಕಾಲ ಲೀಸೆಸ್ಟರ್ ಶೈರ್ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿರುವ ಭಾರತ ತಂಡ, ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ವಿಜಯದ ಧ್ವಜ ಹಾರಿಸಿತ್ತು. ಹೀಗಾಗಿ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಕೊನೆಯ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿತ್ತು. ಆದರೆ ಟೀಂ ಇಂಡಿಯಾದಲ್ಲಿನ ಕೊರೊನಾ ಪ್ರಕರಣಗಳಿಂದಾಗಿ ಪಂದ್ಯವನ್ನು ಮುಂದೂಡಬೇಕಾಯಿತು. ವಿರಾಟ್ ನಾಯಕತ್ವದಲ್ಲಿ ಆಡಿದ ಅದೇ ಸರಣಿಯ ಉಳಿದಿರುವ ಏಕೈಕ ಟೆಸ್ಟ್ ಈಗ ನಡೆಯುತ್ತಿದೆ. ಆದರೆ, ಈ ಮಧ್ಯೆ ವಿರಾಟ್ ಕೊಹ್ಲಿ ಕೈಯಿಂದ ಟೀಂ ಇಂಡಿಯಾ ನಾಯಕತ್ವವನ್ನು ರೋಹಿತ್ ಶರ್ಮಾಗೆ ಹಸ್ತಾಂತರಿಸುವ ದೊಡ್ಡ ಬದಲಾವಣೆಯಾಗಿದೆ.
ಇಂಗ್ಲೆಂಡ್ ಕ್ರಿಕೆಟ್ ತಂಡ ಜುಲೈ 1ರಿಂದ ತವರಿನಲ್ಲಿ ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದ್ದು, ಆಂಗ್ಲ ತಂಡಕ್ಕೆ ಆಘಾತವೊಂದು ಎದುರಾಗಿದೆ. ವರದಿಗಳ ಪ್ರಕಾರ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಈ ಏಕೈಕ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಸದ್ಯ ಟೀಂ ಇಂಡಿಯಾ ಇಂಗ್ಲೆಂಡ್ ತಲುಪಿದ್ದು, ಒಂದೇ ಒಂದು ಟೆಸ್ಟ್ ಪಂದ್ಯಕ್ಕಾಗಿ ಮೈದಾನದಲ್ಲಿ ಬೆವರು ಸುರಿಸುತ್ತಿದೆ. ಇದಕ್ಕಾಗಿ ಆಂಗ್ಲ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಆದರೆ ಬೆನ್ ಸ್ಟೋಕ್ಸ್ ಮಂಗಳವಾರ ತಂಡದೊಂದಿಗೆ ಅಭ್ಯಾಸ ನಡೆಸಲಿಲ್ಲ.
ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ಅಭ್ಯಾಸ ಪಂದ್ಯದ ಬಗ್ಗೆ ಹೆಚ್ಚಿನ ಮಾಹಿತಿ ಹೀಗಿದೆ.
ಭಾರತ ತಂಡದ ಅಭ್ಯಾಸ ಪಂದ್ಯ ಯಾವಾಗ ಆರಂಭವಾಗಲಿದೆ?
ಭಾರತ ತಂಡದ ಅಭ್ಯಾಸ ಪಂದ್ಯ 4 ದಿನಗಳ ಕಾಲ ನಡೆಯಲಿದೆ. ಜೂನ್ 23 ರಿಂದ ಜೂನ್ 26 ರವರೆಗೆ ನಡೆಯಲಿದೆ
ಭಾರತ ತಂಡದ ಅಭ್ಯಾಸ ಪಂದ್ಯವನ್ನು ಯಾವ ತಂಡದೊಂದಿಗೆ ಆಡಲಾಗುತ್ತದೆ?
ಭಾರತ ತಂಡದ ಅಭ್ಯಾಸ ಪಂದ್ಯ ಇಂಗ್ಲೆಂಡ್‌ನ ಕೌಂಟಿ ತಂಡ ಲೀಸೆಸ್ಟರ್‌ಶೈರ್ ವಿರುದ್ಧ ನಡೆಯಲಿದೆ
ಭಾರತ ತಂಡದ ಅಭ್ಯಾಸ ಪಂದ್ಯ ಯಾವಾಗ ಆರಂಭವಾಗಲಿದೆ?
ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ಅಭ್ಯಾಸ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ
ಭಾರತ ತಂಡದ ಅಭ್ಯಾಸ ಪಂದ್ಯ ನೇರ ಪ್ರಸಾರವಾಗಲಿದೆಯೇ?
ಭಾರತ ತಂಡದ ಅಭ್ಯಾಸ ಪಂದ್ಯ ನೇರ ಪ್ರಸಾರವಾಗುವುದಿಲ್ಲ.
ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ಅಭ್ಯಾಸ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ಅಭ್ಯಾಸ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು Foxes TV YouTube ಚಾನಲ್‌ನಲ್ಲಿ ವೀಕ್ಷಿಸಬಹುದು.
ಭಾರತ ಮತ್ತು ಲೀಸೆಸ್ಟರ್‌ಶೈರ್ ನಡುವಿನ ಎರಡನೇ ಅಭ್ಯಾಸ ಪಂದ್ಯ ಇದಾಗಿದೆ. 2014ರಲ್ಲಿ ಉಭಯ ತಂಡಗಳ ನಡುವೆ ಮೊದಲ ಅಭ್ಯಾಸ ಪಂದ್ಯ ನಡೆದಿತ್ತು.ಆ ಪಂದ್ಯ ಡ್ರಾ ಆಗಿತ್ತು. ಪ್ರಸ್ತುತ ತಂಡದ ಒಬ್ಬ ಆಟಗಾರ ವಿರಾಟ್ ಕೊಹ್ಲಿ ಮಾತ್ರ ಆ ಪಂದ್ಯದಲ್ಲಿ ಭಾಗಿಯಾಗಿದ್ದರು.