Sixty Ball League: ಕ್ರಿಕೆಟ್ ಜಗತ್ತಿಗೆ ಸಿಕ್ಸ್ಟಿ ಬಾಲ್ ಲೀಗ್‌ ಎಂಟ್ರಿ! ಹೊಸ ಅವತಾರದಲ್ಲಿ ಕ್ರಿಸ್ ಗೇಲ್

Sixty Ball League: ಸಿಕ್ಸ್ಟಿ ಬಾಲ್ ಲೀಗ್ ನಿಯಮಗಳೇನು, ಈ ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಈ ಹೊಸ ಲೀಗ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಸ್ ಗೇಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.

Sixty Ball League: ಕ್ರಿಕೆಟ್ ಜಗತ್ತಿಗೆ ಸಿಕ್ಸ್ಟಿ ಬಾಲ್ ಲೀಗ್‌ ಎಂಟ್ರಿ! ಹೊಸ ಅವತಾರದಲ್ಲಿ ಕ್ರಿಸ್ ಗೇಲ್
Sixty Ball League
Follow us
| Updated By: ಪೃಥ್ವಿಶಂಕರ

Updated on:Jun 22, 2022 | 6:25 PM

ಪ್ರಸ್ತುತ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಸ್ವರೂಪವೆಂದರೆ T20. ಆದರೆ ಚಿಕ್ಕ ಸ್ವರೂಪದ ವಿಷಯದಲ್ಲಿ ಕ್ರಿಕೆಟ್ ಟಿ20ಗೆ ಸೀಮಿತವಾಗಿಲ್ಲ. ಟಿ10 ಲೀಗ್ ಕೂಡ ಇದೆ. ಅದೂ ಕೂಡ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಆದರೆ, ಟಿ20 ಕ್ರಿಕೆಟ್ ಮಧ್ಯೆ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡಲು ಹೊಸ ಕ್ರಿಕೆಟ್ ಲೀಗ್ ಬರುತ್ತಿದೆ.ಹೌದು ಕೇವಲ 60 ಎಸೆತಗಳ ಕ್ರಿಕೆಟ್ ಲೀಗ್ (Sixty Ball League) ಒಂದು ಆರಂಭವಾಗುತ್ತಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಸಂಘಟಕರು ಈ ಹೊಸ 60 ಬಾಲ್ ಲೀಗ್ ಅನ್ನು ಒಟ್ಟಿಗೆ ಪ್ರಾರಂಭಿಸಲಿದ್ದಾರೆ. ಸಿಕ್ಸ್ಟಿ ಬಾಲ್ ಲೀಗ್ ಎಂದು ಈ ಲೀಗ್​ಗೆ ಹೆಸರಿಡಲಾಗಿದೆ. ಕೆರಿಬಿಯನ್ ಲೆಜೆಂಡ್ ಕ್ರಿಸ್ ಗೇಲ್ (Chris Gayle) ಬ್ರಾಂಡ್ ಅಂಬಾಸಿಡರ್ (brand ambassador) ಆಗಿ ಲೀಗ್‌ಗೆ ಸೇರ್ಪಡೆಗೊಂಡಿದ್ದಾರೆ.

ಈ 60 ಬಾಲ್ ಲೀಗ್ ಕುರಿತು ದೊಡ್ಡ ಘೋಷಣೆ ಇಂದು ಬುಧವಾರ ಮಾಡಲಾಗುವುದು. ಸಿಕ್ಸ್ಟಿ ಬಾಲ್ ಲೀಗ್‌ನ ಪ್ರೋಮೋವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಕೆರಿಬಿಯನ್ ಸ್ಟಾರ್ ಕ್ರಿಕೆಟಿಗ ಕ್ರಿಸ್ ಗೇಲ್ ಈ ಲೀಗ್ ಬಗ್ಗೆ ಅಪ್ ಡೇಟ್ ನೀಡಿದ್ದಾರೆ. ಈ ಹೊಸ ಲೀಗ್ ಕ್ರಿಕೆಟ್ ಅಭಿಮಾನಿಗಳನ್ನು ಎಷ್ಟು ರಂಜಿಸಬಲ್ಲದು ಎಂಬುದನ್ನು ಕಾಲವೇ ಹೇಳಬೇಕು. ಆದಾಗ್ಯೂ, 60 ಎಸೆತಗಳ ಲೀಗ್ ಅನ್ನು ನೋಡಲು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ವಿಭಿನ್ನ ಉತ್ಸಾಹದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ
Image
MS Dhoni: ಸಿನಿಮಾ ನಿರ್ಮಾಣಕ್ಕಿಳಿದ ಧೋನಿ! ದಳಪತಿ ವಿಜಯ್ ಜೊತೆ ಸಿನಿಮಾ ಮಾಡಲಿದ್ದಾರೆ ಕ್ಯಾಪ್ಟನ್ ಕೂಲ್
Image
ಆರ್​ಸಿಬಿ ತಂಡದ ಮಾಜಿ ಓಪನರ್ ಕ್ರಿಸ್ ಗೇಲ್ ಭೇಟಿಯಾದ ವಿಜಯ್ ಮಲ್ಯ; ನೆಟ್ಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?

ಇದನ್ನೂ ಓದಿ: ಆರ್​ಸಿಬಿ ತಂಡದ ಮಾಜಿ ಓಪನರ್ ಕ್ರಿಸ್ ಗೇಲ್ ಭೇಟಿಯಾದ ವಿಜಯ್ ಮಲ್ಯ; ನೆಟ್ಟಿಗರ ರಿಯಾಕ್ಷನ್ ಹೇಗಿದೆ ಗೊತ್ತಾ?

ಕೆರಿಬಿಯನ್ ದಂತಕಥೆ ಕ್ರಿಸ್ ಗೇಲ್ ಆಡುತ್ತಾರಾ?

ಸಿಕ್ಸ್ಟಿ ಬಾಲ್ ಲೀಗ್ ನಿಯಮಗಳೇನು, ಈ ಟೂರ್ನಿ ಯಾವಾಗ ಆರಂಭವಾಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ. ಈ ಹೊಸ ಲೀಗ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಸ್ ಗೇಲ್ ಅವರನ್ನು ಸೇರಿಸುವುದರೊಂದಿಗೆ, ಕ್ರಿಕೆಟ್ ವೆಸ್ಟ್ ಇಂಡೀಸ್ ಮತ್ತು ಸಿಪಿಎಲ್ ಸಂಘಟಕರು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸಲು ಮುಂದಾಗಲಿದ್ದಾರೆ. ಆದರೆ, ಗೇಲ್ ಈ ಲೀಗ್​ನಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆದಾಗ್ಯೂ, ಗೇಲ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯನ್ನು ಈ 60 ಎಸೆತಗಳ ಲೀಗ್‌ನಲ್ಲಿ ಫೋರ್-ಸಿಕ್ಸರ್​ಗಳ ಅಬ್ಬರದೊಂದಿಗೆ ಕಾಣಬಹುದು ಎಂದು ಊಹಿಸಲು ಪ್ರಾರಂಭಿಸಿದ್ದಾರೆ.

Published On - 6:25 pm, Wed, 22 June 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ