India vs South Africa: ಆಫ್ರಿಕಾ ಪಿಚ್​ನಲ್ಲಿ ಮುಂದುವರೆದ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಇಲ್ಲಿವೆ ಫೋಟೋ

Team India Practice : ಟ್ರೈನಿಂಗ್ ಸೆಷನ್​ನಲ್ಲಿ ಆರ್ ಅಶ್ವಿನ್ ಬೌಲಿಂಗ್ ಅಭ್ಯಾಸ ನಡೆಸಿದರೆ, ನೆಟ್ ಸೆಷನ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಪ್ರಾಕ್ಟೀಸ್ ಬೆವರಿಳಿಸಿದರು. ಕ್ಲಾಸಿಕ್ ಬ್ಯಾಟರ್ ಆಗಿರುವ ಪೂಜಾರಗೆ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಒಂದು ರೀತಿ ಆ್ಯಸಿಡ್ ಟೆಸ್ಟ್ ಆಗಿದೆ.

India vs South Africa: ಆಫ್ರಿಕಾ ಪಿಚ್​ನಲ್ಲಿ ಮುಂದುವರೆದ ಟೀಮ್ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ: ಇಲ್ಲಿವೆ ಫೋಟೋ
Virat Kohli Pujara and KL Rahul
Edited By:

Updated on: Dec 20, 2021 | 7:26 AM

ದಕ್ಷಿಣ ಆಫ್ರಿಕಾ (India vs South Africa) ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆಫ್ರಿಕಾ ನೆಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಗೆಲ್ಲುವ ಪ್ಲಾನ್​ನಲ್ಲಿ ವಿರಾಟ್ ಕೊಹ್ಲಿ (Virat Kohli) ಪಡೆಯಿದ್ದು, ಎರಡನೇ ಅಬ್ಯಾಸ ಸೆಷನ್ ಮುಗಿಸಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಅಧಿಕೃತ ಟ್ವಿಟ್ಟರ್ (Twitter) ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ (IND vs SA 1st Test) ಡಿಸೆಂಬರ್ 26 ರಿಂದ 30ರವರೆಗೆ ಸೆಂಚುರಿಯನ್​ನಲ್ಲಿ (Centurion) ನಡೆಯಲಿದೆ. ಬಾಕ್ಸಿಂಗ್ ಡೇ (Boxing Day) ದಿನ ಆರಂಭವಾಗಲಿರುವ ಈ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ.

ಟ್ರೈನಿಂಗ್ ಸೆಷನ್​ನಲ್ಲಿ ಆರ್ ಅಶ್ವಿನ್ ಬೌಲಿಂಗ್ ಅಭ್ಯಾಸ ನಡೆಸಿದರೆ, ನೆಟ್ ಸೆಷನ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಪ್ರಾಕ್ಟೀಸ್ ಬೆವರಿಳಿಸಿದರು. ಕ್ಲಾಸಿಕ್ ಬ್ಯಾಟರ್ ಆಗಿರುವ ಪೂಜಾರಗೆ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಒಂದು ರೀತಿ ಆ್ಯಸಿಡ್ ಟೆಸ್ಟ್ ಆಗಿದೆ. ರೋಹಿತ್ ಶರ್ಮಾ ಬದಲು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕ್ ಪಾಂಚಾಲ್ ಕೂಡ ನೆಟ್ ಪ್ರಾಕ್ಟೀಸ್ ಮಾಡಿದರು. ಇನ್ನು ವೇಗದ ಬೌಲರ್ ಜಸ್ ಪ್ರೀತ್ ಬುಮ್ರಾ ಬೌಲಿಂಗ್ ಅಭ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಸೌತ್ ಆಫ್ರಿಕಾದ ಪಿಚ್ ಗಳು ಬುಮ್ರಾ ಅವರ ಬೌಲಿಂಗ್ ಶೈಲಿಗೆ ಹೇಳಿಮಾಡಿಸಿದಂತಿವೆ.

 

ಭಾರತ ತಂಡ ಈವರೆಗೂ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದರೂ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ಸು ಕಂಡಿಲ್ಲ. ಈ ಬಾರಿಯೂ ಗಾಯದ ಸಮಸ್ಯೆಯೊಂದಿಗೆ ಟೀಮ್ ಇಂಡಿಯಾ ಹರಿಣಗಳ ನಾಡಿಗೆ ಕಾಲಿಟ್ಟಿದೆ. ರೋಹಿತ್ ಶರ್ಮ ಅಲ್ಲದೆ, ಕಳೆದ ನ್ಯೂಜಿಲೆಂಡ್ ವಿರುದ್ಧ ತವರಿನ ಟೆಸ್ಟ್ ಸರಣಿಯಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿರುವ ಅಗ್ರ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಟೆಸ್ಟ್ ಸರಣಿಗೆ ಲಭ್ಯರಿಲ್ಲ. ಹೀಗಾಗಿ ಯುವ ಆಟಗಾರರ ಮೇಲೆ ಸಾಕಷ್ಟು ನಂಬಿಕೆ ಇಡಲಾಗಿದೆ.

 

ಮುಂಬಯಿಯಲ್ಲಿ 3 ದಿನಗಳ ಕಠಿನ ಕ್ವಾರಂಟೈನ್‌ಗೆ ಒಳಗಾದ ಬಳಿಕ ಭಾರತ ತಂಡ 10 ಗಂಟೆಗಳ ಸುದೀರ್ಘ‌ ಪ್ರಯಾಣ ನಡೆಸಿ ಜೊಹಾನ್ಸ್‌ಬರ್ಗ್‌ಗೆ ಬಂದಿಳಿದಿತ್ತು. ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್‌ ಕಾಟ ಇರುವುದರಿಂದ ಅತ್ಯುತ್ತಮ ಹಾಗೂ ಅತ್ಯಂತ ಕಠಿನವೆನಿಸಿದ ಜೈವಿಕ ಸುರಕ್ಷತೆಯನ್ನು ಹೊಂದಿರುವ ಪ್ರತ್ಯೇಕ ರೆಸಾರ್ಟ್‌ ಒಂದನ್ನು ಟೀಮ್‌ ಇಂಡಿಯಾಕ್ಕೆ ವ್ಯವಸ್ಥೆ ಮಾಡಲಾಗಿದೆ.

ಭಾರತದ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್.ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಿಯಾಂಕ್ ಪಾಂಚಾಲ್.

Bengaluru Bulls: ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್: ಬೆಂಗಳೂರು ಬುಲ್ಸ್ ಅಭಿಯಾನ ಶುರು

(indian cricket team led by Virat Kohli carried out their practice session ahead of the first Test against South Africa)