AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Bulls: ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್: ಬೆಂಗಳೂರು ಬುಲ್ಸ್ ಅಭಿಯಾನ ಶುರು

Pro kabaddi bengaluru bulls: ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ.

Bengaluru Bulls: ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್: ಬೆಂಗಳೂರು ಬುಲ್ಸ್  ಅಭಿಯಾನ ಶುರು
bengaluru bulls
TV9 Web
| Edited By: |

Updated on:Dec 19, 2021 | 10:58 PM

Share

ದೇಶೀಯ ಅಂಗಳದ ಮದಗಜಗಳ ಕಾಳಗದ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅದರಂತೆ ಡಿ.22 ರಿಂದ ಪ್ರೋ ಕಬಡ್ಡಿ ಲೀಗ್ ಸೀಸನ್ 8 ಆರಂಭವಾಗಲಿದೆ. ಕೊರೋನಾ ಕಾರಣದಿಂದ ಹಿಂದಿನ ಎರಡು ವರ್ಷಗಳ ಆವೃತ್ತಿ ನಡೆದಿರಲಿಲ್ಲ. ಸೀಸನ್ 6 ಚಾಂಪಿಯನ್ಸ್ ಮತ್ತು ಈ ವರ್ಷದ ಫೆವರೇಟ್ ತಂಡ ಬೆಂಗಳೂರು ಬುಲ್ಸ್ ಡಿಸೆಂಬರ್ 22 ರಿಂದ ತವರಿನಿಂದಲೇ ಅಭಿಯಾನ ಆರಂಭಿಸಲಿದೆ. ಕೊರೋನಾ ಸೋಂಕಿನ ಕಾರಣ ಪ್ರಪಂಚದಲ್ಲಿಯೇ ಕ್ರೀಡಾ ಚಟುವಟಿಕೆಗೆ ಬ್ರೇಕ್ ಬಿದ್ದಿತ್ತು. ಈಗ ಪರಿಸ್ಥಿತಿ ತಹಬದಿಗೆ ಬಂದಿರುವ ಕಾರಣ ಒಂದೊಂದೇ ಪಂದ್ಯಾವಳಿ ಆರಂಭವಾಗುತ್ತಿವೆ. ಕೊರೋನಾ ನಿಯಮಗಳನ್ನು ಪಾಲಿಸುತ್ತ ಕಟ್ಟುನಿಟ್ಟಾದ ಬಯೋ ಬಬಲ್ ವ್ಯವಸ್ಥೆಯಲ್ಲಿ ತಂಡಗಳು ಕಣಕ್ಕೆ ಇಳಿಯಲಿವೆ.

ಡಿಸೆಂಬರ್ 22 ರಂದು ರಾತ್ರಿ 7:30 ಗಂಟೆಗೆ ಯು ಮುಂಬಾ ತಂಡದೊಂದಿಗೆ ಬೆಂಗಳೂರು ಬುಲ್ಸ್ ಸೆಣೆಸಾಡಲಿದ್ದು ಪಂದ್ಯಾವಳಿಗೆ ಆರಂಭ ಸಿಗಲಿದೆ. ಎಲ್ಲ ಪಂದ್ಯಗಳು ಬೆಂಗಳೂರಿನ ವೈಟ್ ಫೀಲ್ಡ್ ಶೆರಾಟನ್ ಗ್ರ್ಯಾಂಡ್ ಹೋಟೆಲ್ ಮತ್ತು ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿವೆ. ಆಯೋಜಕರು ಪಂದ್ಯಾವಳಿಯ ಮೊದಲ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಬೆಂಗಳೂರು ಬುಲ್ಸ್ ತಂಡ ಡಿಸೆಂಬರ್ ನಲ್ಲಿ 4 ಮತ್ತು ಜನವರಿಯಲ್ಲಿ 7 ಪಂದ್ಯಗಳು ಸೇರಿ ಮೊದಲಾರ್ಧದಲ್ಲಿ ಬುಲ್ಸ್ 11 ಪಂದ್ಯಗಳನ್ನು ಆಡಲಿದೆ.

ಬೆಂಗಳೂರು ಬುಲ್ಸ್ ಶಕ್ತಿ:

ಪ್ರೋ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸದಾ ಫೇವರೇಟ್ ತಂಡ. ಜನವರಿ 2019 ರಲ್ಲಿ ನಡೆದ ಫೈನಲ್‌ನಲ್ಲಿ ಗುಜರಾತ್ ಫಾರ್ಚೂನ್ ಜೈಂಟ್ಸ್ ಅನ್ನು ಸೋಲಿಸುವ ಮೂಲಕ ಸೀಸನ್ 6 ರಲ್ಲಿ ಚಾಂಪಿಯನ್ ಆಗಿತ್ತು. ಎರಡನೇ ಸೀಸನ್ ನಲ್ಲಿ ರನ್ನರ್ ಅಪ್ ಆಗಿದ್ದರೆ ಸೀಸನ್ 1 ಮತ್ತು 7 ರಲ್ಲಿ, ಸೆಮಿಫೈನಲ್ ಪ್ರವೇಶ ಮಾಡಿತ್ತು.

ಈ ಬಾರಿ ಅದ್ಭುತ ತಂಡ:

ಕಳೆದ ಬಾರಿಗಿಂತ ಈ ಬಾರಿ ಬುಲ್ಸ್ ತಂಡ ಮತ್ತಷ್ಟು ಬಲಿಷ್ಠವಾಗಿದೆ. ಬುಲ್ಸ್ ಅನುಭವಿ ಆಟಗಾರರನ್ನು ಉಳಿಸಿಕೊಳ್ಳುವುದರೊಂದಿಗೆ ವಿದೇಶಿ ಆಟಗಾರರ ಸೇರ್ಪಡೆ ಮಾಡಿಕೊಂಡಿದೆ. ಅಬೋಲ್ಫಾಜ್ಲ್ ಮಗ್ಸೋಡ್ಲೌ ಮಹಾಲಿ (ಇರಾನ್), ಡಾಂಗ್ ಜಿಯೋನ್ ಲೀ (ದಕ್ಷಿಣ ಕೊರಿಯಾ), ಜಿಯಾವುರ್ ರೆಹಮಾನ್ (ಬಾಂಗ್ಲಾದೇಶ) ಆಟಗಾರರು ತಂಡ ಸೇರಿಕೊಂಡಿದ್ದಾರೆ. ರೆಕಾರ್ಡ್ ಬ್ರೇಕಿಂಗ್ ರೈಡರ್ ಪವನ್ ಕುಮಾರ್ ಶೆಹ್ರಾವತ್ ನಾಯಕನಾಗಿ ಬುಲ್ಸ್ ತಂಡ ಮುನ್ನಡೆಸಲಿದ್ದಾರೆ.

ಮೂರನೇ ಸೀಸನ್ ನಿಂದ ಪವನ್ ಬೆಂಗಳೂರು ಬುಲ್ಸ್ ತಂಡದ ಪರವಾಗಿ ಆಡುತ್ತಾ ಬಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿಯೂ ಪವನ್ ಹೆಸರು ಮಾಡಿದ್ದಾರೆ. ದಕ್ಷಿಣ ಏಷ್ಯಾದ ಕ್ರೀಡಾಕೂಟದಲ್ಲಿ ಭಾರತೀಯ ತಂಡದ ಭಾಗವಾಗಿ ಚಿನ್ನಕ್ಕೆ ಕೊರಳು ಒಡ್ಡಿದ್ದರು. ಪ್ರೋ ಕಬಡ್ಡಿಸೀಸನ್ 6 ಮತ್ತು 7 ರಲ್ಲಿ ಕ್ರಮವಾಗಿ “ಅತ್ಯಂತ ಮೌಲ್ಯಯುತ ಆಟಗಾರ” ಮತ್ತು “ಅತ್ಯುತ್ತಮ ರೈಡರ್” ಪುರಸ್ಕಾರಕ್ಕೆ ಪಾತ್ರವಾಗಿದ್ದರು. ಪ್ರೋ ಕಬಡ್ಡಿಯ ಅತ್ಯುತ್ತಮ ರೈಡರ್ ಗಳಲ್ಲಿ ಪವನ್ ಗೆ ಅಗ್ರಸ್ಥಾನವಿದೆ. ಇನ್ನು ಡಿಫೆಂಡರ್ ಮಹೇಂದರ್ ಸಿಂಗ್ ಬೆಂಗಳೂರು ಬುಲ್ಸ್ ಶಕ್ತಿ. ಕೋಚ್ ರಣಧೀರ್ ಸಿಂಗ್ ಸೆಹ್ರಾವತ್ ಅವರಿಂದ “ಬುಲ್ಡೋಜರ್” ಎಂದೇ ಕರೆಸಿಕೊಳ್ಳುತ್ತಾರೆ.

ಅರ್ಜುನ ಪ್ರಶಸ್ತಿ ವಿಜೇತ ರಣಧೀರ್ ಲೀಗ್ ಆರಂಭದಿಂದಲೂ ಬುಲ್ಸ್ ತರಬೇತುದಾರರಾಗಿದ್ದವರು. ಅನೇಕ ಯುವ ಆಟಗಾರರನ್ನು ತಮ್ಮ ಗರಡಿಯಲ್ಲಿ ಪಳಗಿಸಿ ಪರಿಚಯಿಸಿದ್ದಾರೆ. ಈ ಭಾರಿ ಬುಲ್ಸ್ ಗೆ ಅತ್ಯುತ್ತಮ ನಾಯಕ ಮತ್ತು ಅತ್ಯುತ್ತಮ ಕೋಚ್ ಸಂಯೋಜನೆ ಇದೆ. 2014 ರಲ್ಲಿ ಪ್ರಾರಂಭವಾದ ಪ್ರೊ ಕಬಡ್ಡಿ ಹೊಸ ಜನರನ್ನು ತನ್ನ ಕಡೆ ಸೆಳೆದುಕೊಂಡಿತು. ಕಬಡ್ಡಿ ಆಸ್ವಾದಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿತು.

ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದ ಬುಲ್ಸ್, ಪ್ರೊ ಕಬಡ್ಡಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದೆ. ಈಗ ಮತ್ತೊಮ್ಮೆ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಮತ್ತು ಆಟಗಾರರನ್ನು ಬರಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.

ಸುದೀಪ್ ಕೊಂಡಾಡಿದ ತಂಡ:

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ತಂಡವನ್ನು ಹುರಿದುಂಬಿಸಿದ್ದಾರೆ. ‘ನಮ್ಮ ಊರು, ನಮ್ಮ ಆಟ, ನಮ್ಮ ಹುಡುಗರು, ನಮ್ಮ ಬುಲ್ಸ್’ ಎನ್ನುತ್ತ ಎಲ್ಲರೂ ಬೆಂಬಲ ನೀಡಲು ಕೇಳಿಕೊಂಡಿದ್ದಾರೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಎಂಟ್ರಿ ಕೊಡುವ ಕಿಚ್ಚ, ಸಖತ್ ಡೈಲಾಗ್ ಹೊಡೆದು ಬೆಂಗಳೂರು ಬುಲ್ಸ್ ತಂಡಕ್ಕೆ ಬೆಂಬಲ ನೀಡಿದ್ದಾರೆ. ಸುದೀಪ್ ಟ್ವಿಟ್ಟರ್ ನಲ್ಲಿ ಪ್ರೋಮೋ ಹಂಚಿಕೊಂಡಿದ್ದಾರೆ. ಗುರಾಯ್ಸೋಕೆ ರೆಡಿಯಾಗಿದೆ ನಮ್ಮೂರ ಬುಲ್ಸ್.. ಸಪೋರ್ಟ್ ಮಾಡೋಕೆ ರೆಡಿಯಾಗಿ ಕಬಡ್ಡಿ ಫ್ಯಾನ್ಸ್.. ನಿಮ್ಮ ಜೊತೆ ಬೆಂಗಳೂರು ಬುಲ್ಸ್ ಟೀಮ್ ಗೆ ಬೆಂಬಲ ನೀಡೋಕೆ ನಾನೂ ಕೂಡ ಇರ್ತಿನಿ ಎಂದು ಸುದೀಪ್ ಹೇಳಿದ್ದಾರೆ.

ಬುಲ್ಸ್ ಟೈಟಲ್ ಪ್ರಾಯೋಜಕರಾಗಿ 1xnews ಜವಾಬ್ದಾರಿ ತೆಗೆದುಕೊಂಡಿದ್ದರೆ, ಹರ್ಬಲೈಫ್ ನ್ಯೂಟ್ರೇಶನ್ ಜವಾಬ್ದಾರಿ ಹೊತ್ತುಕೊಂಡಿದೆ . ನಿಪ್ಪಾನ್ ಪೇಂಟ್, ಬಿಗ್ ಎಫ್‌ಎಂ ಮತ್ತು ಪಿಕೆ ಕಾನ್ಷಿಯಸ್‌ನೆಸ್ ಕೂಡ ಬುಲ್ಸ್ ನೊಂದಿಗೆ ಬಾಂಧ್ಯವ್ಯ ಬೆಸೆದುಕೊಂಡಿವೆ. ಕೊರೋನಾ ಕಾರಣಕ್ಕೆ ಪಂದ್ಯಾವಳಿ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ ಇರುವಿದಿಲ್ಲ.

ಬೆಂಗಳೂರು ಬುಲ್ಸ್ ತಂಡ: ಪವನ್ ಕುಮಾರ್ ಸೆಹ್ರಾವತ್ (ನಾಯಕ), ಮಹೇಂದರ್ ಸಿಂಗ್ (ಉಪನಾಯಕ), ಅಬೋಲ್ಫಜಲ್ ಮಗ್ಸೋಡ್ಲೌ ಮಹಾಲಿ, ಡಾಂಗ್ ಜಿಯೋನ್ ಲೀ, ಜಿಯಾವುರ್ ರೆಹಮಾನ್, ಅಮಿತ್ ಶೆರಾನ್, ಸೌರಭ್ ನಂದಲ್, ಮೋಹಿತ್ ಸೆಹ್ರಾವತ್, ಚಂದ್ರನ್ ರಂಜಿತ್, ದೀಪಕ್ ನರ್ವಾಲ್ ಜಿಬಿ , ಮಯೂರ್ ಜಗನ್ನಾಥ್ ಕದಮ್, ವಿಕಾಸ್, ಭರತ್ ಹೂಡಾ, ಅಮನ್ ಅಂತಿಲ್, ನಸೀಬ್, ರೋಹಿತ್ ಕುಮಾರ್, ಅಂಕಿತ್, ರೋಹಿತ್ ಸಾಂಗ್ವಾನ್.

ಕೋಚ್: ರಣಧೀರ್ ಸಿಂಗ್ ಸೆಹ್ರಾವತ್.

ಬೆಂಗಳೂರು ಬುಲ್ಸ್ ತಂಡದ ಮೊದಲಾರ್ಧದ ವೇಳಾಪಟ್ಟಿ

1. ಯು ಮುಂಬಾ ಡಿ. 22 ಬುಧವಾರ ಸಂಜೆ 7:30 2. ತಮಿಳ್ ತಲೈವಾಸ್ ಡಿ. 24 ಶುಕ್ರವಾರ ರಾತ್ರಿ 8:30 3. ಬಂಗಾಲ್ ವಾರಿಯರ್ಸ್ ಡಿ. 26 ಭಾನುವಾರ ರಾತ್ರಿ 8:30 4. ಹರ್ಯಾಣ ಸ್ಟೀಲರ್ಸ್ ಡಿ. 30 ಗುರುವಾರ ರಾತ್ರಿ 8:30 5. ತೆಲುಗು ಟೈಟಾನ್ಸ್ ಜ. 1 ಶನಿವಾರ ರಾತ್ರಿ 8:30 6. ಪುಣೇರಿ ಪಲ್ಟಾನ್ ಜ. 2 ಭಾನುವಾರ ರಾತ್ರಿ 8:30 7 ಜೈಪುರ್ ಪಿಂಕ್ ಪ್ಯಾಂಥರ್ಸ್ ಜ. 6 ಗುರುವಾರ ರಾತ್ರಿ 8:30 8. ಯುಪಿ ಯೋದ್ಧಾ ಜ. 9 ಭಾನುವಾರ ರಾತ್ರಿ 8:30 9. ದಬಾಂಗ್ ಡೆಲ್ಲಿ ಜ. 12 ಬುಧವಾರ ರಾತ್ರಿ 8:30 10. ಗುಜರಾತ್ ಜೈಂಟ್ಸ್ ಜ. 14 ಶುಕ್ರವಾರ ರಾತ್ರಿ 8:30 11. ಪಾಟ್ನಾ ಪೈರೇಟ್ಸ್ ಜ. 16 ಭಾನುವಾರ ರಾತ್ರಿ 8:30

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!

ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್​ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!

Published On - 10:57 pm, Sun, 19 December 21

2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್