- Kannada News Photo gallery Cricket photos 'He captained India in Asia Cup, they won without Kohli': Sourav Ganguly
Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
Team India: ವಿಶ್ವಕಪ್ಗೂ ಮುನ್ನ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯದಂತೆ ಮಂಡಳಿಯು ಕೊಹ್ಲಿಗೆ ಮನವಿ ಮಾಡಿತ್ತು. ಏಕೆಂದರೆ ಏಕದಿನ ಮತ್ತು ಟಿ 20 ತಂಡಗಳಿಗೆ ವಿಭಿನ್ನ ನಾಯಕರನ್ನು ಹೊಂದಲು ಸಾಧ್ಯವಾಗುವುದಿಲ್ಲ ಎಂದು ಆಯ್ಕೆದಾರರು ಸ್ಪಷ್ಟಪಡಿಸಿದ್ದರು.
Updated on: Dec 13, 2021 | 4:27 PM

ಟೀಮ್ ಇಂಡಿಯಾ ಸೀಮಿತ ಓವರ್‌ಗಳ ನಾಯಕನಾಗಿ ರೋಹಿತ್ ಶರ್ಮಾ ಅವರು ನೇಮಕಗೊಂಡಿದ್ದಾರೆ. ಇದಾಗ್ಯೂ ವಿರಾಟ್ ಕೊಹ್ಲಿ ನಾಯಕತ್ವ ಹಾಗೂ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಚರ್ಚೆಗಳು ಮಾತ್ರ ನಿಲ್ಲುತ್ತಿಲ್ಲ. ಇತ್ತ ಬಿಸಿಸಿಐ ಕೂಡ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಅಷ್ಟೇ ಅಲ್ಲದೆ ನಾಯಕನ ಬದಲಾವಣೆ ಬಗ್ಗೆ ಖುದ್ದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಗಂಗೂಲಿ, ವಿಶ್ವಕಪ್ಗೂ ಮುನ್ನ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯದಂತೆ ಮಂಡಳಿಯು ಕೊಹ್ಲಿಗೆ ಮನವಿ ಮಾಡಿತ್ತು. ಏಕೆಂದರೆ ಏಕದಿನ ಮತ್ತು ಟಿ 20 ತಂಡಗಳಿಗೆ ವಿಭಿನ್ನ ನಾಯಕರನ್ನು ಹೊಂದಲು ಸಾಧ್ಯವಾಗುವುದಿಲ್ಲ ಎಂದು ಆಯ್ಕೆದಾರರು ಸ್ಪಷ್ಟಪಡಿಸಿದ್ದರು. ಇದಾಗ್ಯೂ ಕೊಹ್ಲಿ ರಾಜೀನಾಮೆ ನೀಡಿದ್ದರು. ಅದರಂತೆ ಇದೀಗ ಸೀಮಿತ ಓವರ್‌ಗಳ ನಾಯಕನಾಗಿ ರೋಹಿತ್ ಶರ್ಮಾ ಅವರಿಗೆ ಮಣೆ ಹಾಕಲಾಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.

ಇನ್ನು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡುವ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿರುವ ಗಂಗೂಲಿ, ರೋಹಿತ್ ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ನಾಯಕನಾಗಿ ಅತ್ಯುತ್ತಮ ಅರ್ಹತೆಗಳನ್ನು ಹೊಂದಿದ್ದಾರೆ. ಈ ಹಿಂದೆ ಕೂಡ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಮುಂಬರುವ ಸರಣಿಗಳಲ್ಲಿ ಟೀಮ್ ಅನ್ನು ಯಶಸ್ವಿಯಾಗಿ ಮುನ್ನಡೆಸುವ ಭರವಸೆ ಹೊಂದಿದ್ದೇವೆ. ಹೀಗಾಗಿ ವಿರಾಟ್ ಕೊಹ್ಲಿ ಸ್ಥಾನಕ್ಕೆ ಅವರೇ ಸೂಕ್ತ ಆಯ್ಕೆ. ಏಕೆಂದರೆ....

ಏಕೆಂದರೆ ಐಪಿಎಲ್ (ಮುಂಬೈ ಇಂಡಿಯನ್ಸ್) ನಲ್ಲಿ ಅವರ ನಾಯಕತ್ವದ ದಾಖಲೆಯು ಅದ್ಭುತವಾಗಿದೆ. ಐದು ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಅವರು ಒಂದೆರಡು ವರ್ಷಗಳ ಹಿಂದೆ ಏಷ್ಯಾ ಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆಗ ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಇರಲಿಲ್ಲ. ಕೊಹ್ಲಿಯ ಅನುಪಸ್ಥಿತಿಯ ಹೊರತಾಗಿಯೂ ಅಂದು ಭಾರತ ಗೆದ್ದಿದೆ. ಅಂದರೆ ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ದೊಡ್ಡ ಟೂರ್ನಿಗಳಲ್ಲಿ ಯಶಸ್ಸು ಕಂಡಿದೆ. ಹೀಗಾಗಿ ಮುಂಬರುವ ದಿನಗಳಲ್ಲೂ ಹಿಟ್ಮ್ಯಾನ್ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂಬ ಭರವಸೆಯಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆಯಲಿರುವ ಏಕದಿನ ಸರಣಿಯ ಮೂಲಕ ರೋಹಿತ್ ಶರ್ಮಾ ಸೀಮಿತ ಓವರ್ಗಳಲ್ಲಿ ಪೂರ್ಣ ಪ್ರಯಾಣದ ನಾಯಕರಾಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳಿದ್ದು, ಮೂರು ಪಂದ್ಯಗಳ ಏಕದಿನ ಸರಣಿ ವೇಳಾಪಟ್ಟಿ ಹೀಗಿದೆ: ಮೊದಲ ಏಕದಿನ ಪಂದ್ಯ- ಜನವರಿ 19 (ಪಾರ್ಲ್, ಸಮಯ - 2.00 PM), 2ನೇ ಏಕದಿನ ಪಂದ್ಯ- ಜನವರಿ 21, (ಪಾರ್ಲ್, ಸಮಯ - 2.00 PM), 3ನೇ ಏಕದಿನ ಪಂದ್ಯ- 23 ಜನವರಿ (ಕೇಪ್ ಟೌನ್, ಸಮಯ - 2.00 ಗಂಟೆಗೆ).



















