T20 World Cup 2021: ಟಿ20 ವಿಶ್ವಕಪ್​ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಟೀಂ ಇಂಡಿಯಾ!

| Updated By: ಪೃಥ್ವಿಶಂಕರ

Updated on: Oct 13, 2021 | 2:31 PM

T20 World Cup 2021: ಈ ಜರ್ಸಿ ಕೂಡ ಒಂದೇ ಬಣ್ಣದ್ದಾಗಿದೆ ಆದರೆ ಅದರ ದಿಯಾನ್ ವಿಭಿನ್ನವಾಗಿದೆ. ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿಯನ್ನೂ ನೀಡಲಾಗಿದೆ. ಹಿಂದಿನ ಜರ್ಸಿಯಲ್ಲಿ, ಭುಜದ ಮೇಲೆ ತ್ರಿವರ್ಣ ಇತ್ತು, ಆದರೆ ಈ ಜರ್ಸಿಗೆ ಭುಜದ ಮೇಲೆ ಯಾವುದೇ ವಿನ್ಯಾಸವಿಲ್ಲ.

T20 World Cup 2021: ಟಿ20 ವಿಶ್ವಕಪ್​ಗಾಗಿ ಹೊಸ ಜೆರ್ಸಿ ಅನಾವರಣಗೊಳಿಸಿದ ಟೀಂ ಇಂಡಿಯಾ!
ಟೀಂ ಇಂಡಿಯಾ
Follow us on

ಇನ್ನು ಕೆಲವೇ ದಿನಗಳಲ್ಲಿ ಟಿ 20 ವಿಶ್ವಕಪ್ ಆರಂಭವಾಗಲಿದೆ. ಈ ವಿಶ್ವಕಪ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್ ನೆಲದಲ್ಲಿ ಆಡಲಾಗುತ್ತದೆ. ಈ ವಿಶ್ವಕಪ್‌ನಲ್ಲಿ, ಭಾರತೀಯ ಕ್ರಿಕೆಟ್ ತಂಡವು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲ್ಲಿದ್ದು ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಟಗಾರರು ತೊಡುವ ಹೊಸ ಜರ್ಸಿಯನ್ನು ಇಂದು ಅನಾವರಣಗೊಳಿಸಲಾಗಿದೆ.

ಟೀಮ್ ಇಂಡಿಯಾದ ಹೊಸ ಜರ್ಸಿಯನ್ನು ಈ ದಿನ ಅನಾವರಣಗೊಳಿಸಲಾಗುವುದು ಎಂದು ಬಿಸಿಸಿಐ ಕೆಲವು ದಿನಗಳ ಹಿಂದೆಯಷ್ಟೇ ಹೇಳಿತ್ತು. ಬಿಸಿಸಿಐ ಬಿಡುಗಡೆಗೊಳಿಸಿರುವ ಹೊಸ ಜೆರ್ಸಿಯು ಹಳೆಯ ಜರ್ಸಿಗಿಂತ ಸ್ವಲ್ಪ ಭಿನ್ನವಾಗಿದೆ. ಇದುವರೆಗೂ ಟೀಮ್ ಇಂಡಿಯಾ ಧರಿಸಿದ್ದ ಜೆರ್ಸಿ ಕಡು ನೀಲಿ ಬಣ್ಣದ್ದಾಗಿತ್ತು. ಈ ಜರ್ಸಿ ಕೂಡ ಒಂದೇ ಬಣ್ಣದ್ದಾಗಿದೆ ಆದರೆ ಅದರ ದಿಯಾನ್ ವಿಭಿನ್ನವಾಗಿದೆ. ಜೆರ್ಸಿಯ ಮಧ್ಯದಲ್ಲಿ ತಿಳಿ ನೀಲಿ ಪಟ್ಟಿಯನ್ನೂ ನೀಡಲಾಗಿದೆ. ಹಿಂದಿನ ಜರ್ಸಿಯಲ್ಲಿ, ಭುಜದ ಮೇಲೆ ತ್ರಿವರ್ಣ ಇತ್ತು, ಆದರೆ ಈ ಜರ್ಸಿಗೆ ಭುಜದ ಮೇಲೆ ಯಾವುದೇ ವಿನ್ಯಾಸವಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಜರ್ಸಿ ಬಿಡುಗಡೆ
ಬಿಸಿಸಿಐ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ ಹಾಗೂ ಬಿಸಿಸಿಐ ಕಿಟ್ ಪ್ರಾಯೋಜಕ ಎಂಪಿಎಲ್ ಸ್ಪೋರ್ಟ್ಸ್ ಕೂಡ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಈ ಜರ್ಸಿಯನ್ನು ಬಿಡುಗಡೆ ಮಾಡಿದೆ. ಬಿಸಿಸಿಐ ಬಿಡುಗಡೆ ಮಾಡಿರುವ ಫೋಟೋದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್‌ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಈ ಹೊಸ ಜರ್ಸಿಯನ್ನು ಧರಿಸಿರುವುದು ಕಂಡುಬರುತ್ತದೆ.

ಟೀಮ್ ಇಂಡಿಯಾದ ವೇಳಾಪಟ್ಟಿ ಹೀಗಿದೆ
ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗ್ರೂಪ್-ಬಿ ಯಲ್ಲಿ ಸ್ಥಾನ ಪಡೆದಿದೆ. ತಂಡವು ತನ್ನ ಮೊದಲ ಪಂದ್ಯವನ್ನು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24 ರಂದು ಆಡಲಿದೆ. ಇದರ ನಂತರ ತಂಡವು ಅಕ್ಟೋಬರ್ 31 ರಂದು ನ್ಯೂಜಿಲೆಂಡ್ ವಿರುದ್ಧ ಆಡಬೇಕಿದೆ. ಈ ಎರಡೂ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಇದರ ನಂತರ, ನವೆಂಬರ್ 3 ರಂದು, ಅಬುಧಾಬಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ನವೆಂಬರ್ 5 ರಂದು, ತಂಡವು ತನ್ನ ಮುಂದಿನ ಪಂದ್ಯವನ್ನು ಆಡಬೇಕು. ನಂತರ ನವೆಂಬರ್ 8 ರಂದು ತಂಡವು ತನ್ನ ಕೊನೆಯ ಪಂದ್ಯವನ್ನು ಗುಂಪು ಪಂದ್ಯದಲ್ಲಿ ಆಡುತ್ತದೆ. ಈ ಎರಡೂ ತಂಡಗಳು ಅರ್ಹತಾ ಸುತ್ತಿನಿಂದ ಬರುತ್ತವೆ. ಈ ಎರಡೂ ಪಂದ್ಯಗಳು ಕೂಡ ದುಬೈನಲ್ಲಿ ನಡೆಯಲಿದೆ.

Published On - 2:30 pm, Wed, 13 October 21