
ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಯೊಂದಿಗೆ ಈ ತಂಡದಲ್ಲಿ ದೆಹಲಿ ಮೂಲದ ಆಲ್ರೌಂಡರ್ ನಿಖಿಲ್ ಚೌಧರಿ (Nikhil Chaudhary) ಕಾಣಿಸಿಕೊಂಡಿದ್ದಾರೆ. ನಿಖಿಲ್ ಭಾರತೀಯ ಮೂಲದ ಆಸ್ಟ್ರೇಲಿಯನ್ ಕ್ರಿಕೆಟಿಗ. ಈ ಹಿಂದೆ ಪಂಜಾಬ್ ಪರ ದೇಶೀಯ ಅಂಗಳದಲ್ಲಿ ಕಣಕ್ಕಿಳಿದಿದ್ದರು. ಇದೀಗ ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಈ ಹಿಂದೆ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ನಿಖಿಲ್ ಚೌಧರಿ ಸ್ಥಾನ ಪಡೆದಿರಲಿಲ್ಲ. ಆದರೆ ವೈಯುಕ್ತಿಕ ಕಾರಣಗಳಿಮದಾಗಿ ಟ್ರಾವಿಸ್ ಹೆಡ್ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಇದೀಗ ನಿಖಿಲ್ ಚೌಧರಿಯನ್ನು ಆಸೀಸ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.
ನಿಖಿಲ್ ಚೌಧರಿ ಈ ಹಿಂದೆ ಬಿಗ್ ಬ್ಯಾಷ್ ಲೀಗ್ನಲ್ಲಿ ಹೋಬರ್ಟ್ ಹರಿಕೇನ್ಸ್ ಪರ ಕಣಕ್ಕಿಳಿದಿದ್ದರು. ಈ ವೇಳೆ ಆಲ್ರೌಂಡರ್ ಪ್ರದರ್ಶನ ನೀಡಿದ್ದ ಕಾರಣ ಅವರನ್ನು ಆಸ್ಟ್ರೇಲಿಯಾ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ.
Big moment for ‘Canes favourite Nikhil Chaudhary who is in line for a potential Australian debut in the upcoming Bangladesh T20 series!
Read more: https://t.co/59uvOaPteh pic.twitter.com/FIpLEJdgg5
— Hobart Hurricanes (@HurricanesBBL) June 11, 2026
ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಭಾರತೀಯ ಮೂಲದ ತನ್ವೀರ್ ಸಂಘ, ಗುರಿಂದರ್ ಸಂಧು ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಇವರು ಯಾರು ಕೂಡ ಭಾರತದಲ್ಲಿ ಜನಿಸಿದವರಲ್ಲ. ಬದಲಾಗಿ ಅವರ ಪೋಷಕರು ಭಾರತೀಯರಾಗಿದ್ದರಿಂದ ಭಾರತೀಯ ಮೂಲದವರಾಗಿ ಗುರುತಿಸಿಕೊಂಡಿದ್ದರು.
ಆದರೆ ನಿಖಿಲ್ ಚೌಧರಿ ಪಂಜಾಬ್ನಲ್ಲಿ ಜನಿಸಿ, ಪಂಜಾಬ್ನಲ್ಲೇ ಕ್ರಿಕೆಟ್ ಆಡಿ ಬೆಳೆದ ಆಟಗಾರ. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ನಿಖಿಲ್ ಆಯ್ಕೆಯು ಮಹತ್ವ ಪಡೆದುಕೊಂಡಿದೆ. ಅದರಲ್ಲೂ ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ 62 ವರ್ಷಗಳ ಬಳಿಕ ಭಾರತೀಯ ಆಟಗಾರನೊಬ್ಬ ಸ್ಥಾನ ಪಡೆದಿರುವುದು ವಿಶೇಷ.
ಇದಕ್ಕೂ ಮುನ್ನ, ಅಂದರೆ 1960 ರ ದಶಕದಲ್ಲಿ ಗುಜರಾತ್ ಮೂಲದ ರುಸಿ ಸುರ್ತಿ ಭಾರತ ತಂಡದ ಪರ ಆಡಿದ ನಂತರ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಿ ಅಲ್ಲಿನ ಕ್ವೀನ್ಸ್‌ಲ್ಯಾಂಡ್ ದೇಶಿ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ 6 ದಶಕಗಳ ಬಳಿಕ ಭಾರತೀಯ ಸಂಜಾತ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಇದನ್ನೂ ಒದಿ: 200ರ ಸ್ಟ್ರೈಕ್ ರೇಟ್ನಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ!
ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ: ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಜೋಶ್ ಫಿಲಿಪ್ಪೆ, ಟಿಮ್ ಡೇವಿಡ್, ಮ್ಯಾಟ್ ರೆನ್‌ಶಾ, ನಿಖಿಲ್ ಚೌಧರಿ, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಆ್ಯಡಂ ಝಂಪಾ, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್ ಮತ್ತು ರೈಲಿ ಮೆರೆಡಿತ್.
Published On - 12:36 pm, Thu, 11 June 26