ಚಂದ್ರಯಾನ-3 ಸಕ್ಸಸ್; ಈ ಸಲ ವಿಶ್ವಕಪ್ ನಮ್ಮದೇ ಎಂದ ಫ್ಯಾನ್ಸ್! ನಿಜವಾಗುತ್ತಾ ಕಾಕತಾಳೀಯ?

|

Updated on: Aug 24, 2023 | 9:03 AM

World Cup 2023: ವಾಸ್ತವವಾಗಿ ಚಂದ್ರಯಾನ-3 ಯಶಸ್ವಿಯಾಗಿರುವುದಕ್ಕೂ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದಕ್ಕೂ ಏನು ಸಂಬಂಧ ಎಂದು ನೀವೆಲ್ಲರು ಅಂದುಕೊಳ್ಳಬಹುದು. ಆದರೆ ಇದೊಂದು ಕಾಕತಾಳೀಯವಾಗಿದ್ದು, ಈ ಕಾಕತಾಳೀಯ ನಿಜವಾಗಲಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.

ಚಂದ್ರಯಾನ-3 ಸಕ್ಸಸ್; ಈ ಸಲ ವಿಶ್ವಕಪ್ ನಮ್ಮದೇ ಎಂದ ಫ್ಯಾನ್ಸ್! ನಿಜವಾಗುತ್ತಾ ಕಾಕತಾಳೀಯ?
ಏಕದಿನ ವಿಶ್ವಕಪ್- ಚಂದ್ರಯಾನ-3 ಯಶಸ್ಸು
Follow us on

ಇದುವರೆಗೂ ವಿಶ್ವದ ಯಾವುದೇ ದೇಶವು ಮಾಡಲಾಗದ ಸಾಧನೆಯನ್ನು ಭಾರತ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಸ್ರೋ (ISRO) ವಿಜ್ಞಾನಿಗಳ ವರ್ಷಗಳ ಪರಿಶ್ರಮದ ಆಧಾರದ ಮೇಲೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ಧ್ವಜವನ್ನು ಹಾರಿಸಲಾಗಿದೆ. ಹೌದು, ಭಾರತವು ಮೊದಲ ಬಾರಿಗೆ ಚಂದ್ರನ ಮೇಲೆ ಕಾಲಿಟ್ಟಿದ್ದಲ್ಲದೆ, ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 (Chandrayaan-3) ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇಲ್ಲಿಯವರೆಗೆ ಯಾವುದೇ ದೇಶ ಅಲ್ಲಿಗೆ ತಲುಪುವ ಕೆಲಸ ಮಾಡಿಲ್ಲ. ಆದರೆ ಭಾರತ ಆ ಕೆಲಸವನ್ನು ಮಾಡಿ ಮುಗಿಸಿದೆ. ಈ ಐತಿಹಾಸಿಕ ಯಶಸ್ಸು ಇಡೀ ದೇಶಕ್ಕೆ ಸಂತಸ ತಂದಿದೆ. ಇದರೊಂದಿಗೆ, ಈ ಸಂತೋಷವು ಮತ್ತೊಂದು ಭರವಸೆಯನ್ನು ಹುಟ್ಟುಹಾಕಿದ್ದು, ಟೀಂ ಇಂಡಿಯಾ (Team India) ವಿಶ್ವಕಪ್ (ODI World Cup 2023) ಗೆಲ್ಲಲಿದೆ ಎಂಬ ಕೂಗು ಈಗಿನಿಂದಲೇ ಕೇಳಲಾರಂಭಿಸಿದೆ.

ವಾಸ್ತವವಾಗಿ ಚಂದ್ರಯಾನ-3 ಯಶಸ್ವಿಯಾಗಿರುವುದಕ್ಕೂ, ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವುದಕ್ಕೂ ಏನು ಸಂಬಂಧ ಎಂದು ನೀವೆಲ್ಲರು ಅಂದುಕೊಳ್ಳಬಹುದು. ಆದರೆ ಇದೊಂದು ಕಾಕತಾಳೀಯವಾಗಿದ್ದು, ಈ ಕಾಕತಾಳೀಯ ನಿಜವಾಗಲಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.

ಚಂದ್ರಯಾನ-3 ಸಕ್ಸಸ್; ವಿಕ್ರಮ ವಿಜಯಕ್ಕೆ ಶುಭಾಶಯ ಕೋರಿದ ಟೀಂ ಇಂಡಿಯಾ ಆಟಗಾರರು

4 ವರ್ಷಗಳ ಹಿಂದೆ ಹೀಗೊಂದು ಘಟನೆ

ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ಭಾರತದ ಚಂದ್ರಯಾನ-2 ಹಾಗೂ ಟೀಂ ಇಂಡಿಯಾದ ವಿಶ್ವಕಪ್ ಗೆಲ್ಲುವ ಕನಸು ಒಮ್ಮೆಲೆ ಭಗ್ನಗೊಂಡಿದ್ದವು. ಅಂದರೆ ಜುಲೈ 2019 ರಲ್ಲಿ, ಭಾರತ ತನ್ನ ಎರಡನೇ ಮಿಷನ್ ಚಂದ್ರಯಾನ-2 ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಿತ್ತು. ಆದರೆ ಈ ಮಿಷನ್ ತನ್ನ ಗುರಿಗೆ ಬಹಳ ಹತ್ತಿರದಲ್ಲಿದ್ದಾಗ ಸಾಫ್ಟ್ ಲ್ಯಾಂಡಿಂಗ್ ಸಮಯದಲ್ಲಿ ಯೋಜನೆ ಕೈಕೊಟ್ಟಿತ್ತು. ಹೀಗಾಗಿ ಭಾರತದ ಚಂದ್ರಯಾನ-2 ಮಿಷನ್ ವಿಫಲ ಕಂಡಿತ್ತು. ಕಾಕತಾಳೀಯವೆಂಬಂತೆ ಅದೇ ವರ್ಷ ಜೂನ್‌-ಜುಲೈ ತಿಂಗಳಲ್ಲಿ ಏಕದಿನ ವಿಶ್ವಕಪ್‌ ನಡೆದಿತ್ತು. ಅದರಲ್ಲಿ ಟೀಂ ಇಂಡಿಯಾ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು, ಚಂದ್ರಯಾನ- 2 ರಂತೆ ಕೊನೆಯ ಘಟ್ಟದಲ್ಲಿ ಎಡವಿತ್ತು.

ಇದೀಗ ಚಂದ್ರಯಾನ-3 ಯಶಸ್ವಿಯಾಗಿದ್ದು, ಇದೇ ವರ್ಷ ನಡೆಯಲ್ಲಿರುವ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಕೂಡ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂಬ ಆಶಾವಾದ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ. ನಿಸ್ಸಂಶಯವಾಗಿ ಇದು ಕೇವಲ ಕಾಕತಾಳೀಯವಾಗಿದ್ದರೂ, ಈ ಕಾಕತಾಳೀಯ ಒಮ್ಮೆಯಾದರೂ ನಿಜವಾಗಲಿ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Thu, 24 August 23