Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಯಾನ-3 ಸಕ್ಸಸ್; ವಿಕ್ರಮ ವಿಜಯಕ್ಕೆ ಶುಭಾಶಯ ಕೋರಿದ ಟೀಂ ಇಂಡಿಯಾ ಆಟಗಾರರು

Chandrayaan-3: ಭಾರತದ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿದೆ. ಇದರೊಂದಿಗೆ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹೀಗಾಗಿ ಇಸ್ರೋದ ಈ ಐತಿಹಾಸಿಕ ಯಶಸ್ಸನ್ನು ಇಡೀ ದೇಶವೇ ಹಬ್ಬದಂತೆ ಆಚರಿಸುತ್ತಿದೆ. ಇಂತಹ ಮಹಾನ್ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಎಲ್ಲರೂ ಅಭಿನಂದಿಸಿದ್ದು, ಟೀಂ ಇಂಡಿಯಾದ ಆಟಗಾರರು ಕೂಡ ಇಸ್ರೋ ವಿಜ್ಞಾನಿಗಳನ್ನು ಈ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಚಂದ್ರಯಾನ-3 ಸಕ್ಸಸ್; ವಿಕ್ರಮ ವಿಜಯಕ್ಕೆ ಶುಭಾಶಯ ಕೋರಿದ ಟೀಂ ಇಂಡಿಯಾ ಆಟಗಾರರು
ಟೀಂ ಇಂಡಿಯಾ
Follow us
ಪೃಥ್ವಿಶಂಕರ
|

Updated on:Aug 24, 2023 | 8:26 AM

23 ಆಗಸ್ಟ್ 2023.. ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಮರೆಯಲಾಗದ ದಿನ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಕಠಿಣ ಪರಿಶ್ರಮ, ಯೋಜನೆ ಮತ್ತು ಪ್ರಯತ್ನಗಳ ಆಧಾರದ ಮೇಲೆ ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ. ಭಾರತದ ಚಂದ್ರಯಾನ 3 (Chandrayaan-3) ಮಿಷನ್ ಯಶಸ್ವಿಯಾಗಿದೆ. ಇದರೊಂದಿಗೆ ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಹೀಗಾಗಿ ಇಸ್ರೋದ (ISRO) ಈ ಐತಿಹಾಸಿಕ ಯಶಸ್ಸನ್ನು ಇಡೀ ದೇಶವೇ ಹಬ್ಬದಂತೆ ಆಚರಿಸುತ್ತಿದೆ. ಇಂತಹ ಮಹಾನ್ ಯಶಸ್ಸಿಗೆ ಕಾರಣರಾದ ವಿಜ್ಞಾನಿಗಳನ್ನು ಎಲ್ಲರೂ ಅಭಿನಂದಿಸಿದ್ದು, ಟೀಂ ಇಂಡಿಯಾದ (Team India) ಆಟಗಾರರು ಕೂಡ ಇಸ್ರೋ ವಿಜ್ಞಾನಿಗಳನ್ನು ಈ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದ್ದಾರೆ.

ಡಬ್ಲಿನ್​ನಲ್ಲಿ ಬೂಮ್ರಾ ಪಡೆ ಸಂಭ್ರಮಾಚರಣೆ

3 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್​ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ, ಅಲ್ಲೇ ಚಂದ್ರಯಾನ್ 3ರ ಯಶಸ್ಸನ್ನು ಕಣ್ತುಂಬಿಕೊಂಡಿತು. ಸರಣಿಯ 3ನೇ ಮತ್ತು ಕೊನೇ ಪಂದ್ಯಕ್ಕೂ ಮುನ್ನ ಡಬ್ಲಿನ್​ ಮೈದಾನದಲ್ಲಿದ್ದ ಇಂಡಿಯಾ ಪ್ಲೇಯರ್ಸ್​, ಅಲ್ಲೇ ಟಿವಿಯಲ್ಲಿ ಭಾರತದ ಬಂಗಾರದ ಕ್ಷಣವನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಟೀಂ ಇಂಡಿಯಾ ಆಟಗಾರರು, ಬೆಂಬಲ ಸಿಬ್ಬಂದಿ, ಚಂದ್ರಯಾನ ಯಶಸ್ಸು ನೋಡಿ, ವಿಶ್ವಕಪ್​ ಗೆದ್ದಷ್ಟೇ ಜೋಶ್​ನಲ್ಲಿ ಸಂಭ್ರಮಿಸಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ಅಂದ್ಹಾಗೆ, ಮಳೆಯ ಕಾರಣ ಕೊನೇ ಪಂದ್ಯ ನಡೆಯಲೇ ಇಲ್ಲ. ಹೀಗಾಗಿ 2-0ಯಿಂದ ಬೂಮ್ರಾ ಪಡೆ, ಟಿ20 ಸರಣಿ ಗೆದ್ದುಕೊಂಡಿತು.

ಕ್ರಿಕೆಟರ್​ಗಳಿಂದ ಶುಭಾಶಯಗಳ ಮಹಾಪೂರ!

ದೇಶ ಹೆಮ್ಮೆಪಡುವ ಪ್ರತೀ ಸಾಧನೆಯಾದಾಗಲೂ ಕ್ರಿಕೆಟರ್ಸ್​ ಮುಂಚೂಣಿಯಲ್ಲಿದ್ದು ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಈ ಬಾರಿಯೂ ಚಂದ್ರಯಾನ್​ 3 ಯಶಸ್ಸಿಗೆ ಕ್ರಿಕೆಟರ್​ಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸ್ಟಾರ್ ಕ್ರಿಕೆಟರ್​ಗಳಾದ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಎಲ್ಲರೂ ವಿಕ್ರಮ ವಿಜಯವನ್ನು ಕೊಂಡಾಡಿದ್ದಾರೆ.

‘ವಿಜಯಿ ವಿಶ್ವ ತಿರಂಗಾ ಪ್ಯಾರಾ’ ಎಂದ ಕ್ರಿಕೆಟ್ ದೇವರು ಸಚಿನ್!

ಕ್ರಿಕೆಟರ್​ಗಳ ಟ್ವೀಟ್​ಗಳಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮಾಡಿರುವ ಟ್ವೀಟ್​ ಹೆಚ್ಚು ಗಮನ ಸೆಳೆಯುತ್ತಿದೆ. ಭಾರತೀಯ ವಾಯುಸೇನೆಯಲ್ಲಿ ಗೌರವ ಕ್ಯಾಪ್ಟನ್ ಕೂಡ ಆಗಿದ್ದ ಸಚಿನ್, ವಿಜಯೀ ವಿಶ್ವ ತಿರಂಗಾ ಪ್ಯಾರ, ಝಂಡಾ ಊಂಚಾ ರಹೇ ಹಮಾರ ಅಂತ ಸಾಲು ಬರೆದಿದ್ದಾರೆ.

ಇನ್ನು MSಧೋನಿ, ಚಂದ್ರಯಾನ್ ಯಶಸ್ಸಿನ ಸೆಲೆಬ್ರೇಷನ್ ವಿಡಿಯೋ ಹಂಚಿಕೊಂಡಿದ್ರೆ, ರೋಹಿತ್, ಕೊಹ್ಲಿ ಜೊತೆಗೆ ಸೆಹ್ವಾಗ್, ಗಂಭೀರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯಾ, ಯುಜ್ವೇಂದ್ರ ಚಾಹಲ್ ಮೊದಲಾದವರು ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:24 am, Thu, 24 August 23