Wanindu Hasaranga: ಹಸರಂಗರನ್ನು ಆರ್‌ಸಿಬಿ ಖರೀದಿಸಲು ನಿಜವಾದ ಕಾರಣ ಬಹಿರಂಗ
RCB: ಇದರ ನಡುವೆ ಹಸರಂಗರನ್ನು ಆರ್‌ಸಿಬಿ ಖರೀದಿಸಿದ ಬಗ್ಗೆ ಉತ್ತಮ ಮಾತುಗಳು ಕೇಳಿಬರುತ್ತಿವೆ. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಹಸರಂಗರನ್ನು ಆರ್‌ಸಿಬಿ ಖರೀದಿ ಮಾಡಲು ನಿಜವಾದ ಕಾರಣ ಏನು ಎಂಬುದನ್ನು ಬಹುರಂಗ ಪಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿಯ 14ನೇ ಆವೃತ್ತಿಯ ಎರಡನೇ ಚರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಒಂದು ದಿನಗಳ ಹಿಂದೆಯಷ್ಟೆ ಶ್ರೀಲಂಕಾ ಆಲ್‌ರೌಂಡರ್ ವಾನಿಂದು ಹಸರಂಗ (Wanindu Hasaranga) ಅವರನ್ನು ಆಯ್ಕೆ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದು ಕಡೆ, ಆರ್‌ಸಿಬಿ ಸೇರಿದ್ದು ಖುಷಿ ನೀಡಿದೆ ಐಪಿಎಲ್ ಆಡಲು ಉತ್ಸುಕನಾಗಿದ್ದೇನೆ ಎಂದು ಹಸರಂಗ ಹೇಳಿದರೆ ಇತ್ತ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಹಸರಂಗ ಐಪಿಎಲ್‌ಗೆ ಸೇರುವ ಬಗ್ಗೆ ನಮಗೇನು ತಿಳಿದಿಲ್ಲ ಮತ್ತು ಆಟಗಾರರು ಈ ಬಗ್ಗೆ ತನಗೆ ಮಾಹಿತಿ ನೀಡಿಲ್ಲ ಎಂದು ಹೇಳಿದೆ.
ಇದರ ನಡುವೆ ಹಸರಂಗರನ್ನು ಆರ್‌ಸಿಬಿ ಖರೀದಿಸಿದ ಬಗ್ಗೆ ಉತ್ತಮ ಮಾತುಗಳು ಕೇಳಿಬರುತ್ತಿವೆ. ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಅವರು ಹಸರಂಗರನ್ನು ಆರ್‌ಸಿಬಿ ಖರೀದಿ ಮಾಡಲು ನಿಜವಾದ ಕಾರಣ ಏನು ಎಂಬುದನ್ನು ಬಹುರಂಗ ಪಡಿಸಿದ್ದಾರೆ.
“ಆಸ್ಟ್ರೇಲಿಯಾದ ಆ್ಯಡಂ ಝಾಂಪ ಈ ಬಾರಿಯ ಯುಎಇ ಐಪಿಎಲ್‌ಗೆ ಲಭ್ಯರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಾನಿಂದು ಹಸರಂಗ ಅವರನ್ನು ಬೆಂಗಳೂರು ಫ್ರಾಂಚೈಸಿ ಸೇರ್ಪಡೆ ಮಾಡಿಕೊಂಡಿದೆ. ಟಿ20 ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ಕಾರಣ ಅವರನ್ನು ಆರ್‌ಸಿಬಿ ಆಯ್ಕೆ ಮಾಡಿದೆ. ತಂಡ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯುಜ್ವೇಂದ್ರ ಚಹಲ್ ಹಾಗೂ ವಾನಿಂದು ಹಸರಂಗ ಅವರನ್ನು ಜೊತೆಯಲ್ಲಿ ಆಡಿಸಬೇಕೆಂದು,” ಎಂದು ಚೋಪ್ರಾ ಹೇಳಿದ್ದಾರೆ.
ಇದುವರೆಗೂ 60 ಟಿ20 ಪಂದ್ಯಗಳಾಡಿರುವ ವಾನಿಂದು ಹಸರಂಗ 80 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 33 ವಿಕೆಟ್‌ಗಳು 22 ಪಂದ್ಯಗಳಿಂದ ಮೂಡಿ ಬಂದಿರುವುದು ವಿಶೇಷ. ಅಷ್ಟೇ ಅಲ್ಲದೆ, ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿಗೆ ಬ್ಯಾಟಿಂಗ್ ಡೆಪ್ತ್ ತಂದುಕೊಡಲಿದ್ದಾರೆ.
ಆರ್‌ಸಿಬಿ ಫ್ರಾಂಚೈಸಿ ತನ್ನನ್ನು ಆಯ್ಕೆ ಮಾಡಿರುವ ವಿಷಯ ತಿಳಿಯುತ್ತಿದ್ದಂತೆ ಲಂಕಾ ಆಲ್‌ರೌಂಡರ್ ವಾನಿಂದ ಹಸರಂಗ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಖುಷಿ ಹಂಚಿಕೊಂಡರು. “ಇಷ್ಟರ ವರೆಗೆ ಮನೆಯಲ್ಲಿ ಕುಳಿತು ಆರ್‌ಸಿಬಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದೆ. ಇದೀಗ ಅದೇ ತಂಡದ ಭಾಗವಾಗುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಆರ್‌ಸಿಬಿ ಪರ ಆಡಲು ತುಂಬಾ ಉತ್ಸುಕನಾಗಿದ್ದೇನೆ ಹಾಗೂ ರೋಮಾಂಚನಗೊಂಡಿದ್ದೇನೆ,” ಎಂದು ಹೇಳಿದ್ದಾರೆ.
ಇತ್ತ ಹಸರಂಗ ಅವರನ್ನು ತಂಡಕ್ಕೆ ಸೇರಿಸಿಕೊಂಡ ಬಗ್ಗೆ ಮಾತನಾಡಿರುವ ನೂತನ ಕೋಚ್ ಮೈಕ್ ಹೇಸನ್, “ಆಡಂ ಝಾಂಪ ಅವರ ಸ್ಥಾನಕ್ಕೆ ವಾನಿಂದು ಹಸರಂಗ ಅವರನ್ನು ಆಯ್ಕೆ ಮಾಡಿದ್ದೇವೆ. ಮುಷ್ಠಿ ಸ್ಪಿನ್ ಜೊತೆಗೆ ವಾನಿಂದು, ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ಉತ್ತಮ ಸಂಯೋಜನೆಯನ್ನು ತಂದುಕೊಡಬಲ್ಲರು. ಹಾಗಾಗಿ, ಅವರನ್ನು ಕರೆದುಕೊಂಡಿರುವುದಕ್ಕೆ ನಮಗೆ ಖುಷಿಯಾಗಿದೆ,” ಎಂದಿದ್ದಾರೆ.
IPL 2021: ಆರ್‌ಸಿಬಿ ಸೇರಿದ ಹಸರಂಗ, ಚಮೀರಾ; ಇದರ ಬಗ್ಗೆ ಮಾಹಿತಿ ಇಲ್ಲ ಎಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ
Tokyo Paralympics: ಪ್ಯಾರಾಲಿಂಪಿಕ್ಸ್ ಉದ್ಘಾಟನಾ ಸಮಾರಂಭ; ಭಾರತದ ಧ್ವಜಧಾರಿಯಾಗಿ ಮರಿಯಪ್ಪನ್, 11 ಸದಸ್ಯರಿಗೆ ಅವಕಾಶ
(IPL 2021 Aakash Chopra has backed RCB move to sign Sri Lanka all-rounder Wanindu Hasaranga)