RCB Predicted XI: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದಿಂದ ಇಬ್ಬರು ಆಟಗಾರರು ಔಟ್: 2 ಬದಲಾವಣೆ ಖಚಿತ

| Updated By: Vinay Bhat

Updated on: Oct 08, 2021 | 10:21 AM

RCB vs DC IPL 2021 Today's Match: ಐಪಿಎಲ್ 2021ರ ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. ಇಲ್ಲಿದೆ ನೋಡಿ ವಿರಾಟ್ ಕೊಹ್ಲಿ ಪಡೆಯ ಆರ್​ಸಿಬಿ ತಂಡದ ಸಂಭಾವ್ಯ ಪ್ಲೇಯಿಂಗ್ XI.

RCB Predicted XI: ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ತಂಡದಿಂದ ಇಬ್ಬರು ಆಟಗಾರರು ಔಟ್: 2 ಬದಲಾವಣೆ ಖಚಿತ
RCB Playing XI vs KKR IPL 2021 Eliminator
Follow us on

ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ (Dubai International Cricket Stadium) ಇಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡಗಳ ನಡುವೆ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2021) ಕೊನೆಯ ಲೀಗ್‌ ಪಂದ್ಯ ನಡಯಲಿದೆ. ಈಗಾಗಲೇ ಪ್ಲೇ ಆಫ್ ಖಚಿತ ಪಡಿಸಿಕೊಂಡಿರುವ ಆರ್​ಸಿಬಿ (Royal Challengers Bangalore) ಎರಡನೇ ಸ್ಥಾನಕ್ಕೇರುವುದು ಕಷ್ಟವಾದರೂ ಕನಿಷ್ಠ ಪಂದ್ಯವನ್ನು ಗೆದ್ದು ಗೆಲುವಿನ ವಿಶ್ವಾಸ ಪಡೆದುಕೊಳ್ಳುವ ಇರಾದೆಯಲ್ಲಿದೆ. ಕಳೆದ ಪಂದ್ಯದಲ್ಲಿ ಕೊಹ್ಲಿ (Virat Kohli) ಪಡೆ ಸನ್​ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ ಕೊನೇಯ ಹಂತದಲ್ಲಿ ಸೋಲು ಕಂಡಿತು. ಒಂದಿಷ್ಟು ತಪ್ಪುಗಳನ್ನು ಎಸೆಗಿರುವ ಬೆಂಗಳೂರು ತಂಡ ಇಂದಿನ ಪಂದ್ಯದಲ್ಲಿ ಎರಡು ಪ್ರಮುಖ ಬದಲಾವಣೆ ಮಾಡುವ ಅಂದಾಜಿದೆ. ಹಾಗಾದ್ರೆ ಆರ್​ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ (RCB Probable XI) ಹೇಗಿರಲಿದೆ?.

ಆರ್​ಸಿಬಿ ಪರ ಓಪನರ್​ಗಳಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಕಣಕ್ಕಿಳಿಯುವುದು ಖಚಿತ. ಆದರೆ, ಪಡಿಕ್ಕಲ್ ಕಳೆದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟ್​ನಿಂದ ಟೀಕೆಗಳಿಗೆ ಗುರಿಯಾಗಿದ್ದರು. ಹೀಗಾಗಿ ಬಿರುಸಿನ ಆಟದ ಮೊರೆಹೋಗಬೇಕಿದೆ. ಮೂರನೇ ಕ್ರಮಾಂಕದಲ್ಲಿ ಶ್ರೀಕರ್ ಭರತ್ ಆಡಲಿದ್ದು, ಸ್ಪಿನ್ನರ್​ಗಳಿಗೆ ಚೆನ್ನಾಗಿ ಬ್ಯಾಟ್ ಬೀಸುತ್ತಾರೆ.

ನಂತರ ಭರ್ಜರಿ ಫಾರ್ಮ್​ನಲ್ಲಿರುವ ಗ್ಲೆನ್ ಮ್ಯಾಕ್ಸ್​ವೆಲ್ ಆಡಲಿದ್ದಾರೆ. ಡೆಲ್ಲಿ ವಿರುದ್ಧ ಮ್ಯಾಕ್ಸ್​ವೆಲ್ ಆಟ ಬೊಂಬಾಟ್ ಆಗಿದೆ. ಅದರಲ್ಲೂ ಅಶ್ವಿನ್ ವಿರುದ್ಧ ಕೇವಲ ಒಂದು ಬಾರಿ ಮಾತ್ರ ಔಟ್ ಆಗಿದ್ದಾರೆ. ಎಬಿ ಡಿವಿಲಿಯರ್ಸ್ ಫಾರ್ಮ್​ಗೆ ಬಂದಂತೆ ಕಾಣುತ್ತಿದ್ದು, ಮುಂದೆ ಕ್ವಾಲಿಫೈಯರ್ ಪಂದ್ಯವಿರುವ ಕಾರಣ ಎಬಿಡಿಗೆ ಇದು ಮಹತ್ವದ್ದಾಗಿದೆ. ಡ್ಯಾನಿ ಕ್ರಿಸ್ಟಿಯನ್ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೆರವಾಗುತ್ತಿಲ್ಲ. ಹೀಗಾಗಿ ಇವರ ಜಾಗಕ್ಕೆ ಟಿಮ್ ಡೇವಿಡ್ ಬರುವ ಸಂಭವವಿದೆ.

ಇನ್ನೂ ಬೌಲಿಂಗ್​ನಲ್ಲಿ ಒಂದು ಬದಲಾವಣೆ ನಿರೀಕ್ಷಿಸಲಾಗಿದೆ. ಜಾರ್ಜ್ ಗಾರ್ಟನ್ ಬದಲು ಕೈಲ್ ಜೇಮಿಸನ್ ತಂಡಕ್ಕೆ ಕಮ್​ಬ್ಯಾಕ್ ಮಾಡುವ ಸಾಧ್ಯತೆ ಇದೆ. ಶಹ್ಬಾಜ್ ಅಹ್ಮದ್ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದು ಆಲ್ರೌಂಡರ್ ಜವಾಬ್ದಾರಿ ವಹಿಸಲಿದ್ದಾರೆ. ಹರ್ಷಲ್ ಪಟೇಲ್ ಹಾಗೂ ಯುಜ್ವೇಂದ್ರ ಚಹಾಲ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಮೊಹಮ್ಮದ್ ಸಿರಾಜ್ ಇವರಿಗೆ ಸಾಥ್ ನೀಡಬೇಕಷ್ಟೆ.

ಕೊಹ್ಲಿ ಹಾಗೂ ಪಂತ್ ಪಡೆ ಈವರೆಗೆ ಐಪಿಎಲ್​ನಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದಾರೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 15 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ 10 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಆರ್​ಸಿಬಿ ಸದ್ಯ ಒಟ್ಟು 13 ಪಂದ್ಯಗಳನ್ನು ಆಡಿದ್ದು ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋತಿದೆ. ಒಟ್ಟು 16 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.159 ನೆಟ್​ರೇಟ್​ನೊಂದಿಗೆ ಮೂರನೇ ಸ್ಥಾನದಲ್ಲಿದೆ.

ಇನ್ನೂ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂ ಪಿಚ್ ಬಗ್ಗೆ ನೋಡುವುದಾದರೆ ಇದು ಬ್ಯಾಟಿಂಗ್‌ ಸ್ನೇಹಿಯಾಗಿದೆ. ಆದರೆ, ಬೌಲರ್‌ಗಳು ಇಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಂಡು ಬೌಲ್‌ ಮಾಡಿದರೆ, ಪ್ರಾಬಲ್ಯ ಸಾಧಿಸಬಹುದು. ಇಲ್ಲಿನ ವಿಕೆಟ್‌ನಲ್ಲಿ ಚೇಸಿಂಗ್‌ ಸುಲಭವಾಗಿರುವ ಹಿನ್ನೆಲೆಯಲ್ಲಿ ಎರಡೂ ತಂಡಗಳ ನಾಯಕರು ಟಾಸ್‌ ಗೆದ್ದು ಫೀಲ್ಡಂಗ್‌ ಮೊರೆ ಹೋಗುವ ಸಂಭವ ಹೆಚ್ಚಿದೆ. ಆದರೆ, ಎರಡನೇ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿ 200ಕ್ಕೂ ಹೆಚ್ಚಿನ ರನ್‌ ಗಳಿಸುವ ಕಡೆಗೆ ಗಮನಹರಿಸಬೇಕಾಗಿದೆ.

RCB vs DC: ಆರ್​​​ಸಿಬಿ ಎರಡನೇ ಸ್ಥಾನಕ್ಕೇರಲು ಇಂದಿನ ಪಂದ್ಯದಲ್ಲಿ ಏನೆಲ್ಲಾ ಮಾಡಬೇಕು: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

RCB vs DC, IPL 2021: ಕೊನೇಯ ಲೀಗ್ ಪಂದ್ಯ: ಆರ್​ಸಿಬಿ-ಡೆಲ್ಲಿ ನಡುವೆ ಹೈವೋಲ್ಟೇಜ್ ಕದನ ನಿರೀಕ್ಷೆ

(IPL 2021 Dream11 RCB vs DC Today Match Virat Kohli Team Royal Challengers Bangalore Predicted XI)