RCB vs DC: ಆರ್​​​ಸಿಬಿ ಎರಡನೇ ಸ್ಥಾನಕ್ಕೇರಲು ಇಂದಿನ ಪಂದ್ಯದಲ್ಲಿ ಏನೆಲ್ಲಾ ಮಾಡಬೇಕು: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

RCB top two scenarios: ಆರ್​ಸಿಬಿ ತಂಡ ಸಿಎಸ್​ಕೆ ಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲು ಇಂದಿನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತದ ಅಂತರದ ಗೆಲುವು ಸಾಧಿಸಬೇಕಿದೆ. ಇಷ್ಟು ಮಾತ್ರವಲ್ಲ ಮತ್ತೊಂದು ಸವಾಲು ಕೂಡ ಇದೆ.

RCB vs DC: ಆರ್​​​ಸಿಬಿ ಎರಡನೇ ಸ್ಥಾನಕ್ಕೇರಲು ಇಂದಿನ ಪಂದ್ಯದಲ್ಲಿ ಏನೆಲ್ಲಾ ಮಾಡಬೇಕು: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
Virat Kohli RCB vs DC
Follow us
TV9 Web
| Updated By: Vinay Bhat

Updated on:Oct 08, 2021 | 8:56 AM

ಐಪಿಎಲ್ 2021ರ ಲೀಗ್ (IPL 2021) ಪಂದ್ಯಗಳಿಗೆ ಇಂದು ತೆರೆಬೀಳಲಿದೆ. ಮುಂದೆ ಕ್ವಾಲಿಫೈಯರ್ ಪಂದ್ಯಗಳ ರೋಚಕ ಕಾದಾಟ ಶುರುವಾಗಲಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ಸಮಯದಲ್ಲಿ ಎರಡು ಪಂದ್ಯಗಳು ನಡೆಯುತ್ತಿವೆ. ಅಬುಧಾಬಿಯಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ (SRH vs MI) ನಡುವೆ ಕಾದಾಟ ಶುರುವಾಗುವ ಹೊತ್ತಗೆನೇ ಇತ್ತ ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ಕೂಡ ಸೆಣೆಸಾಟ ನಡೆಸಲಿವೆ. ವಿರಾಟ್ ಕೊಹ್ಲಿ (Virat Kohli) ಪಡೆಗೆ ಈ ಪಂದ್ಯ ಎರಡು ಕಾರಣಗಳಿಗೆ ತುಂಬಾನೇ ಮುಖ್ಯವಾಗಿದೆ. ಒಂದು ಹಿಂದಿನ ಪಂದ್ಯದಲ್ಲಿ ಅನುಭವಿಸಿದ ಸೋಲನ್ನು ತಿದ್ದಿಕೊಳ್ಳಲು ಮತ್ತು ಪಾಯಿಂಟ್ ಪಟ್ಟಿಯಲ್ಲಿ (IPL 2021 Point Table) ಎರಡನೇ ಸ್ಥಾನಕ್ಕೇರುವ ಅವಕಾಶವನ್ನು ಪಡೆದುಕೊಳ್ಳಲು. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿಯುವ ಉತ್ತಮ ಅವಕಾಶ ಆರ್​ಸಿಬಿ (Royal Challengers Bangalore) ತಂಡಕ್ಕಿದೆ. ಆದರೆ, ಅದು ಅಷ್ಟೊಂದು ಸಲಭವಾಗಿಲ್ಲ.

ಹೌದು, ಆರ್​ಸಿಬಿ ಸದ್ಯ 13 ಪಂದ್ಯಗಳನ್ನು ಆಡಿದ್ದು ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋತಿದೆ. ಒಟ್ಟು 16 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.159 ನೆಟ್​ರೇಟ್​ನೊಂದಿಗೆ ಮೂರನೇ ಸ್ಥಾನದಲ್ಲಿದೆ. ಇತ್ತ ಸಿಎಸ್​ಕೆ ತಂಡ 14 ಪಂದ್ಯಗಳನ್ನು ಆಡಿದ್ದು ಒಂಬತ್ತು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಐದು ಪಂದ್ಯಗಳಲ್ಲಿ ಸೋತಿದೆ. ಒಟ್ಟು 18 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ +0.455 ನೆಟ್​ರೇಟ್​ನೊಂದಿಗೆ ಎರಡನೇ ಅಗ್ರಸ್ಥಾನದಲ್ಲಿದೆ.

ಕೊಹ್ಲಿ ಪಡೆ ಎರಡನೇ ಸ್ಥಾನಕ್ಕೇರಲು ಇಂದಿನ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ದೊಡ್ಡ ಮೊತ್ತದ ಅಂತರದ ಗೆಲುವು ಸಾಧಿಸಬೇಕಿದೆ. ಅಂದರೆ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕು. 200ರ ಆಸುಪಾಸಿನಷ್ಟು ರನ್ ಕಲೆಹಾಕಬೇಕು. ಇಷ್ಟು ಮಾತ್ರ ಸಾಲದು, ಡೆಲ್ಲಿ ವಿರುದ್ಧ ಸುಮಾರು 163 ರನ್​ಗಳ ಅಂತರದಿಂದ ಗೆಲುವು ಸಾಧಿಸಿದರೆ ಚೆನ್ನೈಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ. ಎಲ್ಲಾದರು ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೆ, ಆರ್​ಸಿಬಿ 3.2 ಓವರ್​ನಲ್ಲಿ ಗುರಿ ಮುಟ್ಟಬೇಕು. ಈ ಅಸಾಧ್ಯದ ಫಲಿತಾಂಶ ಸಾಧ್ಯವಾಗುತ್ತಾ ಎಂಬುದು ಕುತೂಹಲ.

ವಿರಾಟ್ ಪಡೆಯಲ್ಲಿ ಕಳೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೌಲರ್‌ಗಳು ಉತ್ತಮ ನಿರ್ವಹಣೆ ತೋರಿದ್ದರೂ ಬ್ಯಾಟರ್​ಗಳ ವೈಫಲ್ಯದಿಂದಾಗಿ ಸೋಲಿಗೆ ಶರಣಾಗಿತ್ತು. ಕಳೆದ ಆವೃತ್ತಿಯಲ್ಲಿ ಒಂದೂ ಸಿಕ್ಸರ್ ಸಿಡಿಸಲು ವಿಫಲರಾಗಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದಲ್ಲಿ ಆರ್‌ಸಿಬಿ ತಂಡಕ್ಕೆ ಆಸರೆಯಾಗಿದ್ದಾರೆ. ಪಡಿಕ್ಕಲ್ ನಿಧಾನಗತಿಯ ಆಟದಿಂದ ಪಾಠಕಲಿಯಬೇಕಿದೆ. ಡ್ಯಾನ್ ಕ್ರಿಸ್ಟಿಯನ್ ಮತ್ತು ಜಾರ್ಜ್ ಗಾರ್ಟನ್ ಅವರಿಂದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ಬರದ ಕಾರಣ ತಂಡದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ.

ಇನ್ನೂ ಇಂದು ನಡೆಯಲಿರುವ ಮತ್ತೊಂದು ಹೈದರಾಬಾದ್ ಮತ್ತು ಮುಂಬೈ ನಡುವಣ ಪಂದ್ಯ ಕೂಡ ಕುತೂಹಲ ಕೆರಳಿಸಿದೆ. ಮುಂಬೈ ಪ್ಲೇ ಆಫ್ ರೇಸ್​ನಿಂದ ಇನ್ನೂ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಎಲ್ಲಾದರೂ ಮುಂಬೈ ಇಂದಿನ ಪಂದ್ಯದಲ್ಲಿ 170 ರನ್‌ಗಳಿಗೂ ಹೆಚ್ಚಿನ ಅಂತರದಲ್ಲಿ ಜಯ ದಾಖಲಿಸಿದರೆ ಪ್ಲೇ ಆಫ್​ಗೆ ತಲುಪಬಹುದು. ಮುಂಬೈ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 250 ರನ್ ಗಳಿಸಿದರೆ ಹೈದರಾಬಾದ್ ತಂಡವನ್ನು 80 ರನ್​ಗೂ ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಬೇಕಾಗುತ್ತದೆ. ಎಲ್ಲಾದರು 200 ರನ್ ಗಳಿಸಲು ಮಾತ್ರ ಶಕ್ಯವಾದರೆ ಹೈದರಾಬಾದ್ ತಂಡವನ್ನ 30ಕ್ಕಿಂತ ಕಡಿಮೆ ಮೊತ್ತಕ್ಕೆ ಔಟ್ ಮಾಡಬೇಕಾಗುತ್ತದೆ.

RCB vs DC, IPL 2021: ಕೊನೇಯ ಲೀಗ್ ಪಂದ್ಯ: ಆರ್​ಸಿಬಿ-ಡೆಲ್ಲಿ ನಡುವೆ ಹೈವೋಲ್ಟೇಜ್ ಕದನ ನಿರೀಕ್ಷೆ

IPL 2021, MI vs SRH: ಐಪಿಎಲ್​ನಲ್ಲಿಂದು ಒಂದೇ ಸಮಯದಲ್ಲಿ ಎರಡು ಪಂದ್ಯ: ಮುಂಬೈ-ಎಸ್​ಆರ್​ಹೆಚ್ ಪಂದ್ಯದ ಮೇಲೆ ಎಲ್ಲರ ಕಣ್ಣು

(Virat Kohli and RCB team will be eyeing win against DC and Overtake CSK on crucial second position)

Published On - 8:56 am, Fri, 8 October 21

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು