AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021, MI vs SRH: ಐಪಿಎಲ್​ನಲ್ಲಿಂದು ಒಂದೇ ಸಮಯದಲ್ಲಿ ಎರಡು ಪಂದ್ಯ: ಮುಂಬೈ-ಎಸ್​ಆರ್​ಹೆಚ್ ಪಂದ್ಯದ ಮೇಲೆ ಎಲ್ಲರ ಕಣ್ಣು

Mumbai Indians vs Sunrisers Hyderabad: ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 17 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 9 ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021, MI vs SRH: ಐಪಿಎಲ್​ನಲ್ಲಿಂದು ಒಂದೇ ಸಮಯದಲ್ಲಿ ಎರಡು ಪಂದ್ಯ: ಮುಂಬೈ-ಎಸ್​ಆರ್​ಹೆಚ್ ಪಂದ್ಯದ ಮೇಲೆ ಎಲ್ಲರ ಕಣ್ಣು
SRH vs MI
TV9 Web
| Edited By: |

Updated on: Oct 08, 2021 | 7:16 AM

Share

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿ ಅಂತಿಮ ಹಂತಕ್ಕೆ ತಲುಪುತ್ತಿದೆ. ಇಂದು ಒಂದೇ ಸಮಯದಲ್ಲಿ ಎರಡು ಪಂದ್ಯಗಳು ನಡೆಯಲಿದ್ದು ಇದು ಕೊನೇಯ ಲೀಗ್ ಪಂದ್ಯವಾಗಿದೆ. ಒಂದು ಕಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB vs DC) ಮುಖಾಮುಖಿ ಆದರೆ ಮತ್ತೊಂದು ಕಡೆ ಸನ್​ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ (SRH vs MI) ತಂಡಗಳು ಸೆಣೆಸಾಟ ನಡೆಸಲಿವೆ. ಕೆಕೆಆರ್ ನಿನ್ನೆ ರಾಜಸ್ಥಾನ್ (KKR vs RR) ವಿರುದ್ಧ ಗೆಲ್ಲುವ ಮೂಲಕ ರೋಹಿತ್ (Rohit Sharma) ಪಡೆ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಎಲ್ಲಾದರೂ ಮುಂಬೈ ಇಂದಿನ ಪಂದ್ಯದಲ್ಲಿ 170 ರನ್‌ಗಳಿಗೂ ಹೆಚ್ಚಿನ ಅಂತರದಲ್ಲಿ ಜಯ ದಾಖಲಿಸಿದರೆ ಪ್ಲೇ ಆಫ್​ಗೆ ತಲುಪಬಹುದು. ಈ ಅಸಾಧ್ಯದ ಫಲಿತಾಂಶ ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.

ಮುಂಬೈ ಇಂಡಿಯನ್ಸ್ ತಂಡ ಒಟ್ಟು 13 ಪಂದ್ಯಗಳನ್ನು ಆಡಿದ್ದು ಆರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಏಳು ಪಂದ್ಯಗಳಲ್ಲಿ ಸೋತಿದೆ. ಒಟ್ಟು 12 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.048 ನೆಟ್​ರೇಟ್​ನೊಂದಿಗೆ ಆರನೇ ಸ್ಥಾನದಲ್ಲಿದೆ. ಇತ್ತ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ಸನ್​ರೈಸರ್ಸ್ ಹೈದರಾಬಾದ್ ತಂಡ ಒಟ್ಟು 13 ಪಂದ್ಯಗಳನ್ನು ಆಡಿದ್ದು ಮೂರು ಪಂದ್ಯಗಳಲ್ಲಷ್ಟೆ ಜಯ ಸಾಧಿಸಿದೆ. ಹತ್ತು ಪಂದ್ಯಗಳಲ್ಲಿ ಸೋತಿದೆ. ಒಟ್ಟು 6 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.422 ನೆಟ್​ರೇಟ್​ನೊಂದಿಗೆ ಕೊನೇಯ ಎಂಟನೆ ಸ್ಥಾನದಲ್ಲಿದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಈರೀತಿಯ ಕಳಪೆ ಪ್ರದರ್ಶನ ನೀಡಿ ಬಳಿಕ ಕಮ್​ಬ್ಯಾಕ್ ಮಾಡಿದ ಉದಾಹರಣೆ ಅನೇಕ ಇವೆ. ಆದರೆ, ಈ ಬಾರಿ ಮಾತ್ರ ಹಾಗಾಗಲಿಲ್ಲ. ಬ್ಯಾಟರ್​ಗಳ ಕಳಪೆ ಪ್ರದರ್ಶನವೇ ದೊಡ್ಡ ತಲೆನೋವಾಯಿತು. ಅದರಲ್ಲೂ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಮಿಂಚುತ್ತಿಲ್ಲ. ಕಳೆದ ಪಂದ್ಯದಲ್ಲಿ ಕಿಶನ್ ಒಫನರ್ ಆಗಿ ಬಂದು ಅರ್ಧಶತಕ ಸಿಡಿಸಿದರೂ ಅದಾಗಲೆ ಕಾಲ ಮಿಂಚಿ ಹೋಗಿದೆ. ರೋಹಿತ್ ಶರ್ಮಾ ಬ್ಯಾಟ್ ಕೂಟ ಈ ಬಾರಿ ಸದ್ದು ಮಾಡಲೇ ಇಲ್ಲ. ಕ್ವಿಂಟರ್ ಡಿಕಾಕ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್ ಕೂಡ ಫಾರ್ಮ್​ನಲ್ಲಿಲ್ಲ. ಆದ್ರೆ, ಮುಂಬೈ ಬೌಲಿಂಗ್​ನಲ್ಲಿ ಬಲ ಪಡೆದುಕೊಂಡಿದೆ. ಜಸ್​ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹಾರ್ ವಿಕೆಟ್ ಟೇಕಿಂಗ್ ಬೌಲರ್​ಗಳಾದರೆ, ಕ್ರುನಾಲ್ ಪಾಂಡ್ಯ ಹಾಗೂ ಟ್ರೆಂಟ್ ಬೌಲ್ಟ್ ಇವರಿಗೆ ಸಾಥ್ ನೀಡುತ್ತಿದ್ದಾರೆ.

ಇತ್ತ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕೊನೇಯ ಹಂತದಲ್ಲಿ ಗೆಲುವು ದಾಖಲಿಸಿತ್ತು. ಜಯದ ಮೂಲಕ ಟೂರ್ನಿಗೆ ಗುಡ್ ಬೈ ಹೇಳುತ್ತಾ ನೋಡಬೇಕಿದೆ. ಕೊನೇಯ ಪಂದ್ಯವಾದ ಕಾರಣ ಡೇವಿಡ್ ವಾರ್ನರ್, ಮನೀಶ್ ಪಾಂಡೆಗೆ ಅವಕಾಶ ಸಿಗುತ್ತಾ ಎಂಬುದು ಕುತೂಹಲ.

ಉಭಯ ತಂಡಗಳು ಈವರೆಗೆ ಐಪಿಎಲ್​ನಲ್ಲಿ ಒಟ್ಟು 17 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 9 ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡ 8 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

ಪಂದ್ಯದ ಬಳಿಕ ಕ್ರೀಡಾಂಗಣದಲ್ಲೇ ತನ್ನ ಗೆಳತಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಚೆನ್ನೈ ವೇಗಿ! ವಿಡಿಯೋ ನೋಡಿ

(IPL 2021 MI vs SRH Rohit Sharma Mumbai Indians takes on Kane Williamson Sunrisers Hyderabad in Abu Dhabi on Friday)

ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು