ಪಂದ್ಯದ ಬಳಿಕ ಕ್ರೀಡಾಂಗಣದಲ್ಲೇ ತನ್ನ ಗೆಳತಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಚೆನ್ನೈ ವೇಗಿ! ವಿಡಿಯೋ ನೋಡಿ

ದೀಪಕ್ ಆ ಯುವತಿಗೆ ರಿಂಗ್ ತೋಡಿಸಿ ರಾಜರೋಶವಾಗಿ ಎಲ್ಲರೆದರು ಪ್ರಪೋಸ್ ಮಾಡಿದರು. ದೀಪಕ್​ನ ಈ ಕೃತ್ಯದಿಂದ ಆತನ ಗೆಳತಿ ಕೂಡ ಆಶ್ಚರ್ಯಚಕಿತಳಾಗಿದ್ದರು, ಬಹುಶಃ ಅವರು ಸಹ ಅದನ್ನು ನಿರೀಕ್ಷಿಸಿರಲಿಲ್ಲ.

ಪಂದ್ಯದ ಬಳಿಕ ಕ್ರೀಡಾಂಗಣದಲ್ಲೇ ತನ್ನ ಗೆಳತಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಚೆನ್ನೈ ವೇಗಿ! ವಿಡಿಯೋ ನೋಡಿ
ಪ್ರೇಯಸಿಯೊಂದಿಗೆ ದೀಪಕ್ ಚಹರ್

ಐಪಿಎಲ್ -2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಗುರುವಾರ ಒಳ್ಳೆಯ ದಿನವಾಗಿರಲಿಲ್ಲ. ಪಂಜಾಬ್ ವಿರುದ್ಧದ ಈ ಪಂದ್ಯದಲ್ಲಿ ಧೋನಿ ಹುಡುಗರು ಹೀನಾಯವಾಗಿ ಸೋಲನುಭವಿಸಿದರು. ಆದರೆ ಚೆನ್ನೈ ತಂಡದ ಆಟಗಾರನೊಬ್ಬ ಮೈದಾನದ ಹೊರಗೆ ಮಾಡಿದ ಕೆಲಸದಿಂದ ಈಗ ಸಖತ್ ಸುದ್ದಿಯಾಗುತ್ತಿದ್ದಾರೆ. ಪಂದ್ಯದ ನಂತರ ಕ್ಯಾಮರ ಕಣ್ಣಲ್ಲಿ ಸಿಕ್ಕಿಬಿದ್ದ ಈ ದೃಶ್ಯ ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ. ಆ ಆಟಗಾರ ಮಾಡಿದ ಕೆಲಸವನ್ನು ನೋಡಿದವರು ಆಶ್ಚರ್ಯಚಕಿತರಾದರು. ನಾವು ಇಷ್ಟೇಲ್ಲಾ ಹೇಳುತ್ತಿರುವುದು ಚೆನ್ನೈ ವೇಗದ ಬೌಲರ್ ದೀಪಕ್ ಚಹರ್ ಬಗ್ಗೆ.

ವಾಸ್ತವವಾಗಿ ಪಂದ್ಯದ ನಂತರ ದೀಪಕ್ ಚಹರ್, ಕಪ್ಪು ಬಟ್ಟೆಗಳನ್ನು ಧರಿಸಿದ್ದ ಮತ್ತು ಕಪ್ಪು ಕನ್ನಡಕ ಧರಿಸಿದ್ದ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಹುಡುಗಿಯ ಬಳಿಗೆ ಹೋದರು. ನಂತರ ದೀಪಕ್ ಆ ಯುವತಿಗೆ ರಿಂಗ್ ತೋಡಿಸಿ ರಾಜರೋಶವಾಗಿ ಎಲ್ಲರೆದರು ಪ್ರಪೋಸ್ ಮಾಡಿದರು. ದೀಪಕ್​ನ ಈ ಕೃತ್ಯದಿಂದ ಆತನ ಗೆಳತಿ ಕೂಡ ಆಶ್ಚರ್ಯಚಕಿತಳಾಗಿದ್ದರು, ಬಹುಶಃ ಅವರು ಸಹ ಅದನ್ನು ನಿರೀಕ್ಷಿಸಿರಲಿಲ್ಲ. ನಂತರ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ತಮ್ಮ ಪ್ರೀತಿಯನ್ನು ಜಗಜ್ಜಾಹೀರು ಮಾಡಿದರು.

ಚೆನ್ನೈ ಬ್ಯಾಟಿಂಗ್‌ನ ನಿರಾಶಾದಾಯಕ ಆಟ
ಗುರುವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಆರು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ 76 ರ ಅರ್ಧಶತಕದ ಇನ್ನಿಂಗ್ಸ್ ಹೊರತಾಗಿಯೂ. ಸ್ಟಾರ್ ಓಪನರ್ ರಿತುರಾಜ್ ಗಾಯಕ್ವಾಡ್ 12, ನಾಯಕ ಮಹೇಂದ್ರ ಸಿಂಗ್ ಧೋನಿ 12 ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ 15 ರನ್ ಗಳಿಸಿದರು. ರಾಬಿನ್ ಉತ್ತಪ್ಪ (2), ಅಂಬಟಿ ರಾಯುಡು (4), ಡ್ವೇನ್ ಬ್ರಾವೋ ಕೇವಲ 4 ರನ್ ಗಳಿಸಲು ಸಾಧ್ಯವಾಯಿತು. ಪಂಜಾಬ್ ಕಿಂಗ್ಸ್ ಪರ ಅರ್ಷದೀಪ್ ಸಿಂಗ್ ಮತ್ತು ಕ್ರಿಸ್ ಜೋರ್ಡಾನ್ ಎರಡು ವಿಕೆಟ್ ಪಡೆದರು. ಅದೇ ಸಮಯದಲ್ಲಿ, ರವಿ ಬಿಶ್ನೋಯ್ ಮತ್ತು ಮೊಹಮ್ಮದ್ ಶಮಿ ತಲಾ ಒಂದು ವಿಕೆಟ್ ಪಡೆದರು.

ಕೆಎಲ್ ರಾಹುಲ್ ಅಬ್ಬರದ ಬ್ಯಾಟಿಂಗ್
134 ರನ್​ಗಳ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಉತ್ತಮ ಆರಂಭ ನೀಡಿತು. ನಾಯಕ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟ್​ಗೆ 46 ರನ್​ಗಳ ಜೊತೆಯಾಟ ನೀಡಿದರು. ಶಾರ್ದೂಲ್ ಠಾಕೂರ್ ಎಸೆತದಲ್ಲಿ ಮಯಾಂಕ್ 12 ರನ್ ಗಳಿಸಿ ಔಟಾದರು. ಇದಾದ ನಂತರ, ಅದೇ ಓವರ್​ನಲ್ಲಿ ಶಾರ್ದೂಲ್ ಠಾಕೂರ್ ಕೂಡ ಸರ್ಫರಾಜ್ ಖಾನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಶಾರುಖ್ ಖಾನ್ 8 ರನ್ ಗಳಿಸುವ ಮೂಲಕ ದೀಪಕ್ ಚಹರ್​ಗೆ ಬಲಿಯಾದ ಕಾರಣ ತಂಡಕ್ಕೆ ಮೂರನೇ ಹೊಡೆತವಾಯಿತು. ಈ ಸಮಯದಲ್ಲಿ, ನಾಯಕ ಕೆಎಲ್ ರಾಹುಲ್ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆಯುತ್ತಿದ್ದರು, ಈ ಕಾರಣದಿಂದಾಗಿ ಚೆನ್ನೈಗೆ ಪಂದ್ಯಕ್ಕೆ ಮರಳಲು ಅವಕಾಶ ಸಿಗಲಿಲ್ಲ. ರಾಹುಲ್ 8 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಾಯದಿಂದ 98 ರನ್ ಗಳಿಸಿದರು. ಈ ಸಮಯದಲ್ಲಿ ಅವರ ಸ್ಟ್ರೈಕ್ ರೇಟ್ 233.33 ಆಗಿತ್ತು.

Read Full Article

Click on your DTH Provider to Add TV9 Kannada