ಕೋವಿಡ್ ಕಾರಣದಿಂದ ಅರ್ಧದಲ್ಲಿ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಟೂರ್ನಿಯ ಮುಂದಿನ ಭಾಗ ಯುಎಇ ನಲ್ಲಿ ನಡೆಯಲಿದೆ. ಇದೇ ಸೆಪ್ಟೆಂಬರ್ 19ರಿಂದ ಐಪಿಎಲ್ 2021 ಪುನರಾರಂಭವಾಗಲಿದ್ದು, ಸಿದ್ದತೆಗಳು ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ತಂಡದ ಕೆಲವು ಆಟಗಾರರು ದುಬೈಗೆ ತಲುಪಿದ್ದಾರೆ. ಹೀಗಿರುವಾಗ ಐಪಿಎಲ್ ಅಭಿಮಾನಿಗಳಿಗೆ ಸಖತ್ ಸುದ್ದಿಯೊಂದು ಹೊರಬಿದ್ದಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಐಪಿಎಲ್ ವೀಕ್ಷಿಸಲು ಸ್ಟೇಡಿಯಂನಲ್ಲಿ ಶೇ. 60 ರಷ್ಟು ಜನರಿಗೆ ಅವಕಾಶ ನೀಡುತ್ತಿದೆ ಎಂದು ಘೋಷಿಸಿದೆ. ಈ ಬಗ್ಗೆ ನಾವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಮಾತುಕತೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದೆ.
ಕಳೆದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದಾಗಿ ಅರ್ಧದಲ್ಲಿಯೇ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 29 ಪಂದ್ಯಗಳು ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ಮುಗಿದ ನಂತರ ವಿವಿಧ ತಂಡಗಳ ಆಟಗಾರರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದಾಗಿ ಎಚ್ಚೆತ್ತ ಬಿಸಿಸಿಐ ತಾತ್ಕಾಲಿಕವಾಗಿ ಐಪಿಎಲ್ ಟೂರ್ನಿಯನ್ನು ಸ್ಥಗಿತಗೊಳಿಸಿತ್ತು.
ಸದ್ಯ ಅರ್ಧದಲ್ಲಿಯೇ ಸ್ಥಗಿತ ಮಾಡಲಾಗಿದ್ದ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿದೆ. ಬಯೋ ಸುರಕ್ಷತಾ ವಲಯದಲ್ಲಿ ಆಟಗಾರರ ಮೇಲೆ ನಿಗಾವಹಿಸುವ ಸಲುವಾಗಿ ಬಿಸಿಸಿಐ ಬಬಲ್ ಇನ್ಗ್ರಿಟಿ ಅಧಿಕಾರಿಗಳನ್ನು ನೇಮಿಸಿದೆ. ಅಲ್ಲದೆ, ಸುರಕ್ಷಿತವಾಗಿ ಲೀಗ್ ಆಯೋಜಿಸುವ ಸಲುವಾಗಿ 46 ಪುಟಗಳ ಮಾರ್ಗಸೂಚಿಯನ್ನು ಬಿಸಿಸಿಐ ಸಿದ್ಧಪಡಿಸಿದೆ. ಜೊತೆಗೆ ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ಖಡಕ್ ಆಗಿ ಸೂಚಿಸಿದೆ.
Destination ➡️ Abu Dhabi ??
Status ➡️ Arrived ✅#OneFamily #MumbaiIndians #IPL2021 @MarriottBonvoy @StRegisSaadiyat pic.twitter.com/JtlIZEPtVc— Mumbai Indians (@mipaltan) August 13, 2021
ಶುಕ್ರವಾರ ( ಆಗಸ್ಟ್ 13 ) ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ದುಬೈಗೆ ಪ್ರಯಾಣ ಬೆಳೆಸಿತ್ತು. ಇತ್ತ ಮುಂಬೈ ಇಂಡಿಯನ್ಸ್ ಕೂಡ ದುಬೈ ತಲುಪಿದೆ. ದುಬೈ ತಲುಪಿದ ನಂತರ ಆಟಗಾರರು 7 ದಿನಗಳ ಕಾಲ ವ್ಯವಸ್ಥಿತ ಕ್ವಾರಂಟೈನ್ ನಿಯಮವನ್ನು ಅನುಸರಿಸಬೇಕಾಗಿದೆ. ತದನಂತರ ತಂಡದ ಇತರೆ ಆಟಗಾರರ ಜೊತೆಗೂಡಿ ಈ ಆಟಗಾರರು ಅಭ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ.
MS Dhoni: ಸ್ವಾತಂತ್ರ್ಯ ದಿನದಂದೇ ಎಂ. ಎಸ್ ಧೋನಿ ನಿವೃತ್ತಿ ಘೋಷಿಸಲು ಕಾರಣವೇನು ಗೊತ್ತೇ?
MS Dhoni: ಅಂತರರಾಷ್ಟ್ರೀಯ ಕ್ರಿಕೆಟ್ಗೆ ಎಂ. ಎಸ್ ಧೋನಿ ವಿದಾಯ ಹೇಳಿ ಇಂದಿಗೆ ಒಂದು ವರ್ಷ!
(IPL 2021 UAE government decides to allow 60 percent attendance in stadiums)