AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohammed Siraj: ವಿಕೆಟ್ ಕಿತ್ತಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ: ಇದರ ಹಿಂದಿದೆ ಖಡಕ್ ಕಾರಣ

India vs England: ಮೂರನೇ ದಿನದಾಟ ಮುಗಿದ ಬಳಿಕ ಹೊಸ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ ಮೊಹಮ್ಮದ್ ಸಿರಾಜ್, ನನ್ನ ಈ ಶೈಲಿಯ ಸಂಭ್ರಮಾಚರಣೆ ಹೇಟರ್ಸ್​ಗಳಿಗಾಗಿ ಎಂದಿದ್ದಾರೆ.

Mohammed Siraj: ವಿಕೆಟ್ ಕಿತ್ತಾಗ ತುಟಿಗಳ ಮೇಲೆ ಬೆರಳಿಟ್ಟು ಸಂಭ್ರಮಾಚರಣೆ: ಇದರ ಹಿಂದಿದೆ ಖಡಕ್ ಕಾರಣ
Mohammed Siraj
TV9 Web
| Edited By: |

Updated on: Aug 15, 2021 | 11:11 AM

Share

ಆಂಗ್ಲರ ನಾಡಿನಲ್ಲಿ ಸಾಗುತ್ತಿರುವ ಇಂಗ್ಲೆಂಡ್ (England) ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ (Team India) ಯುವ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಭರವಸೆ ಮೂಡಿಸಿದ್ದಾರೆ. ತನ್ನ ಆಕ್ರಮಣಕಾರಿ ಬೌಲಿಂಗ್​ನಿಂದ ಎದುರಾಳಿಗೆ ಅಪಾಯಕಾರಿಯಾಗಿ ಗೋಚರಿಸಿರುವ ಸಿರಾಜ್ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ಪ್ರಮುಖ ವಿಕೆಟ್ ಕಿತ್ತು ಮಿಂಚಿದರು. ಈ ಸಂದರ್ಭ ಅವರ ಸಂಭ್ರಮಾಚರಣೆ ವಿಭಿನ್ನವಾಗಿತ್ತು. ತುಟಿಗಳ ಮೇಲೆ ಬೆರಳಿಟ್ಟಿ ಸಿರಾಜ್ ವಿಕೆಟ್ ಪಡೆದ ಸಂಭ್ರಮವನ್ನು ಆನಂದಿಸುತ್ತಿದ್ದರು. ಈರೀತಿಯ ಸಂಭ್ರಮಾಚರಣೆಗೆ ಕಾರಣವೇನು ಎಂಬುದನ್ನು ಅವರೀಗ ಬಹಿರಂಗ ಪಡಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ಗೆ ಕಾಲಿಟ್ಟು 7 ಪಂದ್ಯಗಳನ್ನು ಆಡಿರುವ ಸಿರಾಜ್ ಅದಾಗಲೇ 23 ವಿಕೆಟ್ ಕಿತ್ತು ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಆಂಗ್ಲರ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದ್ದಾರೆ. ಈ ಸಂದರ್ಭ ಅವರು ತುಟಿಗೆ ಬೆರಳಿಟ್ಟು ವಿಶೇಷವಾಗಿ ಸಂಭ್ರಮಿಸಿದರು. ಈ ಬಗ್ಗೆ ಮಾತನಾಡಿರುವ ಅವರು, ನನ್ನ ಈ ಶೈಲಿಯ ಸಂಭ್ರಮಾಚರಣೆ ಹೇಟರ್ಸ್​ಗಳಿಗಾಗಿ ಎಂದಿದ್ದಾರೆ.

ಮೂರನೇ ದಿನದಾಟ ಮುಗಿದ ಬಳಿಕ ಹೊಸ ಸಂಭ್ರಮಾಚರಣೆ ಬಗ್ಗೆ ಮಾತನಾಡಿದ ಸಿರಾಜ್, “ಈ ಹೊಸ ರೀತಿಯ ಸಂಭ್ರಮಾಚರಣೆ ಹೇಟರ್ಸ್​ಗಳಿಗಾಗಿ. ಯಾಕಂದ್ರೆ ಅವರು ನನ್ನ ಬಗ್ಗೆ ಹಿಂದಿನಿಂದ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಅವರು ನನಗೆ ಮಾಡಿದಂತೆ ನಾನು ಮಾಡುವುದಿಲ್ಲ, ಬದಲಾಗಿ ನನ್ನ ಆಟದ ಮೂಲಕ ಅಂತವರಿಗೆ ತಕ್ಕ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದಾರೆ.

ಕ್ರಿಕೆಟ್ ಕಾಶಿ ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಆಂಗ್ಲರು ಎರಡನೇ ಇನ್ನಿಂಗ್ಸ್​ನಲ್ಲಿ ಜೋ ರೂಟ್ (Joe Root) ಅವರ ಅಜೇಯ 180 ರನ್​ಗಳ ನೆರವಿನಿಂದ 391 ರನ್ ಗಳಿಸಿದ್ದು 27 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದೆ. ಇಂದು ನಾಲ್ಕನೇ ದಿನ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದು ಮಹತ್ವದ ದಿನವಾಗಿದೆ.

ಭಾರತ ಇಂದು ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಬೇಕಿದೆ. ಗೆಲುವಿಗಾಗಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಪ್ರಮುಖವಾಗಿ ಓಪನರ್​ಗಳಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ ತಂಡಕ್ಕೆ ಆಸರೆಯಾಗಬೇಕಿದೆ. ಯಾಕಂದ್ರೆ ಭಾರತದ ಮಧ್ಯಮ ಕ್ರಮಾಂಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ. ಹೀಗಾಗಿ ಓಪನರ್​ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.

ನಾಲ್ಕನೇ ದಿನ ಪಿಚ್ ಕೂಡ ಉತ್ತಮವಾಗಿ ವರ್ತಿಸುತ್ತದೆ. ಹವಾಮಾನ ಕೂಡ ಸ್ಥಿರವಾಗಿದ್ದು ವರುಣನ ಕಾಟ ಇಲ್ಲವೆಂದು ಹೇಳಲಾಗಿದೆ. ಹೀಗಾಗಿ ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಬೇಗನೇ ಆಲೌಟ್ ಆಗುವ ಸಾಧ್ಯತೆ ಕಡಿಮೆ. ಆದ್ದರಿಂದ ಉಳಿದಿರುವ ಎರಡು ದಿನ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದ್ದು, ಮಾಸ್ಟರ್ ಪ್ಲಾನ್​ನೊಂದಿಗೆ ಕಣಕ್ಕಿಳಿಯಬೇಕಿದೆ.

India vs England: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ತಿರುಗಿನಿಲ್ಲುತ್ತಾ ಕೊಹ್ಲಿ ಪಡೆ?

IPL 2021: ಐಪಿಎಲ್ ಆರಂಭಕ್ಕೆ ಒಂದು ತಿಂಗಳಿರುವಾಗ ಅಭಿಮಾನಿಗಳಿಗೆ ಸಿಕ್ಕಿತು ಸಖತ್ ಸುದ್ದಿ

(Mohammed Siraj opens up about his special finger on lips celebration India vs England second test)

ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ರೂರ್ಕೆಲಾ ವಾಯುನೆಲೆಯಲ್ಲಿ ವಿಮಾನ ಅಪಘಾತ; ಪೈಲಟ್ ಸೇರಿದಂತೆ 6 ಜನರಿಗೆ ಗಾಯ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಗಂಡನ ಮನೆಯಲ್ಲಿ ನೇಣುಬಿಗಿದ ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: ಗುಡುಗಿದ ಹೆಚ್​​ಡಿ ಕುಮಾರಸ್ವಾಮಿ
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ