jasprit Bumrah: ಕೊನೆಯ ಓವರ್ ಮುಗಿಸಲು 15 ನಿಮಿಷ ತೆಗೆದುಕೊಂಡ ಜಸ್ಪ್ರೀತ್ ಬುಮ್ರಾ
India vs England 2nd Test: ಈ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 10 ಎಸೆತಗಳನ್ನು ಎಸೆದರು. ಅಲ್ಲದೆ ಇಂಗ್ಲೆಂಡ್ ಖಾತೆಗೆ ಹೆಚ್ಚುವರಿಯಾಗಿ 4 ರನ್ ಬಿಟ್ಟುಕೊಟ್ಟರು.
ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗಿದೆ. ಮೊದಲ ಇನಿಂಗ್ಸ್ನಲ್ಲಿ ಭಾರತ ನೀಡಿದ 364 ರನ್ಗಳ ಗುರಿಗೆ ಪ್ರತ್ಯುತ್ತರವಾಗಿ ಇಂಗ್ಲೆಂಡ್ 391 ರನ್ ಬಾರಿಸಿದೆ. ನಾಯಕ ಜೋ ರೂಟ್ ಅವರ ಆಕರ್ಷಕ ಅಜೇಯ 180 ರನ್ಗಳ ನೆರವಿನಿಂದ ಇದೀಗ ಇಂಗ್ಲೆಂಡ್ ತಂಡವು 27 ರನ್ಗಳ ಮುನ್ನಡೆ ಸಾಧಿಸಿದೆ. ಇತ್ತ ಮೊಹಮ್ಮದ್ ಸಿರಾಜ್ 94 ರನ್ಗಳಿಗೆ 4 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು. ಆದರೆ ಮೊದಲ ಟೆಸ್ಟ್ನಲ್ಲಿ 9 ವಿಕೆಟ್ ಕಬಳಿಸಿದ್ದ ಜಸ್ಪ್ರೀತ್ ಬುಮ್ರಾ ಈ ಬಾರಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. 26 ಓವರ್ ಎಸೆದ ಬುಮ್ರಾ 79 ರನ್ ನೀಡಿದರೂ ಆಂಗ್ಲರನ್ನು ಔಟ್ ಮಾಡುವಲ್ಲಿ ಎಡವಿದರು. ಅದರಲ್ಲೂ ತಮ್ಮ ಕೊನೆಯ ಓವರ್ ಮುಗಿಸಲು 15 ನಿಮಿಷಗಳನ್ನು ತೆಗೆದುಕೊಂಡು ಅಚ್ಚರಿ ಮೂಡಿಸಿದರು.
ಆರಂಭದಲ್ಲಿ ಬಿಗಿ ದಾಳಿ ಮಾಡಿದ ಬುಮ್ರಾ 2ನೇ ಹಾಗೂ 3ನೇ ಸೆಷನ್ ವೇಳೆಗೆ ಮಂಕಾಗಿದ್ದರು. ಅದರಲ್ಲೂ ತಮ್ಮ ಕೊನೆಯ ಓವರ್‌ನಲ್ಲಿ ಸಂಪೂರ್ಣ ಲಯ ತಪ್ಪಿದರು. ಪರಿಣಾಮಕೊನೆಯ ಓವರ್ ಮುಗಿಸಲು 15 ನಿಮಿಷಗಳು ಬೇಕಾಯಿತು. ಇನ್ನು ಇದೇ ವೇಳೆ ಜೇಮ್ಸ್ ಅಂಡರ್ಸನ್ ಹೆಲ್ಮೆಟ್ ಬದಲಿಸಲು ತೆಗೆದುಕೊಂಡ ಸಮಯ ಕೂಡ ಬುಮ್ರಾ ಬೌಲಿಂಗ್ ಮೇಲೆ ಪರಿಣಾಮ ಬೀರಿತು. ಅದರಂತೆ ಈ ಓವರ್‌ನಲ್ಲಿ ಒಟ್ಟು 4 ನೋ ಬಾಲ್‌ಗಳನ್ನು ಎಸೆಯುವ ಮೂಲಕ ಅತಿರಿಕ್ತ ರನ್ ಕೂಡ ಬಿಟ್ಟು ಕೊಟ್ಟರು. ಬುಮ್ರಾ ಅವರ ಕೊನೆಯ ಓವರ್ ಹೀಗಿತ್ತು.
125.1 – ಮೊದಲ ಎಸೆತ ಬೌನ್ಸರ್, ಚೆಂಡು ಜೇಮ್ಸ್ ಆಂಡರ್ಸನ್ ಅವರ ಹೆಲ್ಮೆಟ್ಗೆ ಬಡಿಯಿತು. ಇದೇ ವೇಳೆ ಅಂಡರ್ಸನ್ ಹೆಲ್ಮೆಟ್ ಬದಲಿಸಿದರು. ಈ ವೇಳೆ ಒಂದಷ್ಟು ಸಮಯ ವ್ಯರ್ಥವಾಯ್ತು. 125.2- ಎರಡನೇ ಎಸೆತ ಶಾರ್ಟ್ ಬಾಲ್, ಯಾವುದೇ ರನ್ ಇಲ್ಲ. 125.3- ಮೂರನೇ ಎಸೆತವನ್ನು ಅಂಡರ್ಸನ್ಗೆ ಗುರುತಿಸಲು ಸಾಧ್ಯವಾಗಲಿಲ್ಲ. 125.4- ನಾಲ್ಕನೇ ಎಸೆತ ನೋ ಬಾಲ್. 125.4 – ನಾಲ್ಕನೇ ಎಸೆತದಲ್ಲಿ ಅಂಡರ್ಸನ್ ಯಾವುದೇ ರನ್ ತೆಗೆಯಲಿಲ್ಲ. 125.5- ಐದನೇ ಎಸೆತ ನೋಬಾಲ್. 125.5- ಐದನೇ ಎಸೆತವನ್ನು ಅಂಡರ್ಸನ್ ರಕ್ಷಣಾತ್ಮಕವಾಗಿ ಆಡಿದರು. 125.6- ಓವರ್‌ಗಳ ಕೊನೆಯ ಎಸೆತ ನೋ ಬಾಲ್ ಆಗಿತ್ತು. 125.6- ಮತ್ತೊಮ್ಮೆ ಎಸೆದ ಚೆಂಡು ಕೂಡ ನೋ ಬಾಲ್ ಆಯಿತು. 125.6- ಕೊನೆಯ ಎಸೆತದಲ್ಲಿ ಯಾವುದೇ ರನ್ ನೀಡದೆ ಓವರ್ ಅಂತ್ಯಗೊಳಿಸಿದರು.
ಈ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 10 ಎಸೆತಗಳನ್ನು ಎಸೆದರು. ಅಲ್ಲದೆ ಇಂಗ್ಲೆಂಡ್ ಖಾತೆಗೆ ಹೆಚ್ಚುವರಿಯಾಗಿ 4 ರನ್ ಬಿಟ್ಟುಕೊಟ್ಟರು.
ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ
ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ
ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?
(jasprit Bumrah take 15 minutes to complete the last over, why?)
Published On - 3:17 pm, Sun, 15 August 21