India vs England: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ತಿರುಗಿನಿಲ್ಲುತ್ತಾ ಕೊಹ್ಲಿ ಪಡೆ?
ಇಂಗ್ಲೆಂಡ್ ತಂಡ 27 ರನ್ಗಳ ಮುನ್ನಡೆಯಲ್ಲಿದೆ. ಭಾರತ ಇಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಬೇಕಿದೆ. ಗೆಲುವಿಗಾಗಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಪ್ರಮುಖವಾಗಿ ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ ತಂಡಕ್ಕೆ ಆಸರೆಯಾಗಬೇಕಿದೆ.
ಕ್ರಿಕೆಟ್ ಕಾಶಿ ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟಕ್ಕೆ ತಲುಪಿದೆ. ಆಂಗ್ಲರು ಎರಡನೇ ಇನ್ನಿಂಗ್ಸ್ನಲ್ಲಿ ಜೋ ರೂಟ್ (Joe Root) ಅವರ ಅಜೇಯ 180 ರನ್ಗಳ ನೆರವಿನಿಂದ 391 ರನ್ ಗಳಿಸಿದ್ದು 27 ರನ್ಗಳ ಅಲ್ಪ ಮುನ್ನಡೆ ಸಾಧಿಸಿದೆ. ಇಂದು ನಾಲ್ಕನೇ ದಿನ ಭಾರತ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ. ಹೀಗಾಗಿ ಉಭಯ ತಂಡಗಳಿಗೆ ಇಂದು ಮಹತ್ವದ ದಿನವಾಗಿದೆ.
ಮೂರನೇ ದಿನ ಅಪಾಯಕಾರಿಯಾಗಿ ಗೋಚರಿಸಿದ್ದ ಇಂಗ್ಲೆಂಡ್ ಟೀಮ್ ಇಂಡಿಯಾಕ್ಕೆ ಸಾಕಷ್ಟು ಕಾಟ ನೀಡಿತು. ದಿನದ ಆರಂಭದಿಂದಲೂ ಜೋ ರೂಟ್ ಭಾರತೀಯ ಬೌಲರ್ಗಳನ್ನು ದಂಡಿಸುತ್ತಾ ಬಂದರು. ಇವರಿಗೆ ಇತರೆ ಆಟಗಾರರು ಸಾತ್ ನೀಡಿದ್ದರೆ ತಂಡದ ಮೊತ್ತ 500ರ ಆಸುಪಾಸಿಗೆ ಬರುತ್ತಿತ್ತು. ರೂಟ್ ದ್ವಿಶತಕ ಸಿಡಿಸುತ್ತಿದ್ದರು. ರೂಟ್ ಜೊತೆ ಜಾನು ಬೈರ್ಸ್ಟೋ 57 ರನ್ ಗಳಿಸಿದರು. ಆದರೆ, ನಂತರ ಬಂದ ಬ್ಯಾಟ್ಸ್ಮನ್ಗಳು ಯಾರೂ ಇವರ ಜೊತೆ ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ಬ್ಯಾಟ್ಸ್ಮನ್ಗನ್ನ ಪೆವಿಲಿಯನ್ಗೆ ಅಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಇಂಗ್ಲೆಂಡ್ ಪರ ರೂಟ್ 321 ಎಸೆತಗಳಲ್ಲಿ ಅಜೇಯ 180 ರನ್ ಬಾರಿಸಿದರೆ, ಬೈರ್ಸ್ಟೋ 57 ಹಾಗೂ ರಾರಿ ಬರ್ನ್ಸ್ 49 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇಂಗ್ಲೆಂಡ್ 128 ಓವರ್ಗಳಲ್ಲಿ 391 ರನ್ಗೆ ಸರ್ವಪತನ ಕಂಡಿತು. ಭಾರತ ಪರ ಸಿರಾಜ್ 4 ಹಾಗೂ ಇಶಾಂತ್ 3 ವಿಕೆಟ್ ಕಿತ್ತರು.
ಇಂಗ್ಲೆಂಡ್ ತಂಡ 27 ರನ್ಗಳ ಮುನ್ನಡೆಯಲ್ಲಿದೆ. ಭಾರತ ಇಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಬೇಕಿದೆ. ಗೆಲುವಿಗಾಗಿ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ. ಪ್ರಮುಖವಾಗಿ ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಕೆ. ಎಲ್ ರಾಹುಲ್ ತಂಡಕ್ಕೆ ಆಸರೆಯಾಗಬೇಕಿದೆ. ಯಾಕಂದ್ರೆ ಭಾರತದ ಮಧ್ಯಮ ಕ್ರಮಾಂಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಓಪನರ್ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ.
ನಾಲ್ಕನೇ ದಿನ ಪಿಚ್ ಕೂಡ ಉತ್ತಮವಾಗಿ ವರ್ತಿಸುತ್ತದೆ. ಹವಾಮಾನ ಕೂಡ ಸ್ಥಿರವಾಗಿದ್ದು ವರುಣನ ಕಾಟ ಇಲ್ಲವೆಂದು ಹೇಳಲಾಗಿದೆ. ಹೀಗಾಗಿ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಬೇಗನೇ ಆಲೌಟ್ ಆಗುವ ಸಾಧ್ಯತೆ ಕಡಿಮೆ. ಆದ್ದರಿಂದ ಉಳಿದಿರುವ ಎರಡು ದಿನ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿದ್ದು, ಮಾಸ್ಟರ್ ಪ್ಲಾನ್ನೊಂದಿಗೆ ಕಣಕ್ಕಿಳಿಯಬೇಕಿದೆ.
ಭಾರತ: 364/10 (ಮೊದಲ ಇನ್ನಿಂಗ್ಸ್, 126.1 ಓವರ್)
(ಕೆಎಲ್ ರಾಹುಲ್ 129, ರೋಹಿತ್ ಶರ್ಮಾ 86, ಜೇಮ್ಸ್ ಆಂಡರ್ಸನ್ 62/5)
ಇಂಗ್ಲೆಂಡ್: 391/10 (ಮೊದಲ ಇನ್ನಿಂಗ್ಸ್, 128 ಓವರ್)
(ಜೋ ರೂಟ್ ಅಜೇಯ 180, ಜಾನಿ ಬೇರ್ಸ್ಟೋ 57, ಮೊಹಮ್ಮದ್ ಸಿರಾಜ್ 94/4, ಇಶಾಂತ್ ಶರ್ಮಾ 69/3)
IPL 2021: ಐಪಿಎಲ್ ಆರಂಭಕ್ಕೆ ಒಂದು ತಿಂಗಳಿರುವಾಗ ಅಭಿಮಾನಿಗಳಿಗೆ ಸಿಕ್ಕಿತು ಸಖತ್ ಸುದ್ದಿ
MS Dhoni: ಸ್ವಾತಂತ್ರ್ಯ ದಿನದಂದೇ ಎಂ. ಎಸ್ ಧೋನಿ ನಿವೃತ್ತಿ ಘೋಷಿಸಲು ಕಾರಣವೇನು ಗೊತ್ತೇ?
(India vs England Joe Root 180 England 27 runs lead, big test coming for Virat Kohli team on Day 4 in second Test)