ಐಪಿಎಲ್ 2021 ರಲ್ಲಿ ಅಕ್ಟೋಬರ್ 3 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪ್ಲೇಆಫ್ ಎಂಟ್ರಿ ಹೋರಾಟ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ, ವಿರಾಟ್ ಕೊಹ್ಲಿ ತಂಡಕ್ಕೆ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ದೊಡ್ಡ ವಿಲನ್ ಆಗಿದ್ದಾರೆ. ಈ ಬ್ಯಾಟ್ಸ್‌ಮನ್ ಆರ್‌ಸಿಬಿ ವಿರುದ್ಧ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2021 ರ ಪಂದ್ಯದಲ್ಲೂ, ಕೆಎಲ್ ರಾಹುಲ್ ಬೆಂಗಳೂರು ವಿರುದ್ಧ ದೊಡ್ಡ ಇನ್ನಿಂಗ್ಸ್‌ಗೆ ಸಿದ್ಧತೆ ನಡೆಸಲಿದ್ದಾರೆ. ಇದೀಗ, ಆರ್‌ಸಿಬಿ ಐಪಿಎಲ್ 2021 ಅಂಕಗಳ ಪಟ್ಟಿಯಲ್ಲಿ 11 ರಲ್ಲಿ 7 ಪಂದ್ಯಗಳನ್ನು ಗೆದ್ದ ನಂತರ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಪಂಜಾಬ್ 12 ಪಂದ್ಯಗಳಲ್ಲಿ 10 ಅಂಕಗಳನ್ನು ಹೊಂದಿದೆ. ಈ ರೀತಿಯಾಗಿ, ಉಭಯ ತಂಡಗಳಿಗೆ ಕೊನೆಯ -4ರ ಘಟ್ಟಕ್ಕೆ ಟಿಕೆಟ್ ಇನ್ನೂ ಖಚಿತವಾಗಿಲ್ಲ. ಇಂದು ಗೆದ್ದರೆ ಆರ್‌ಸಿಬಿಯ ಸ್ಥಾನ ಬಹುತೇಕ ಖಚಿತವಾಗುತ್ತದೆ. ಮತ್ತೊಂದೆಡೆ, ಪಂಜಾಬ್ ಗೆದ್ದರೆ, ಅದು ಪ್ಲೇಆಫ್‌ಗೆ ಹತ್ತಿರವಾಗುತ್ತದೆ.
ಬೆಂಗಳೂರು ವಿರುದ್ಧದ ಪಂದ್ಯದಲ್ಲಿ, ಪಂಜಾಬ್ ನಾಯಕ ಕೆಎಲ್ ರಾಹುಲ್ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಆರ್‌ಸಿಬಿ ವಿರುದ್ಧ ರಾಹುಲ್ ಇದುವರೆಗೆ 10 ಪಂದ್ಯಗಳನ್ನು ಆಡಿದ್ದಾರೆ ಮತ್ತು ಒಂದು ಶತಕ ಮತ್ತು ಎರಡು ಅರ್ಧ ಶತಕಗಳ ನೆರವಿನಿಂದ 462 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಅವರ ಬ್ಯಾಟಿಂಗ್ ಸರಾಸರಿ 92.4 ಮತ್ತು ಸ್ಟ್ರೈಕ್ ರೇಟ್ 156.08 ಆಗಿದೆ. 132 ನಾಟೌಟ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ, ಕೆಎಲ್ ರಾಹುಲ್ ಆರ್‌ಸಿಬಿಯ ಬೌಲರ್‌ಗಳನ್ನು ಎದುರಿಸಲು ಇಷ್ಟಪಡುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಅವರ ಬ್ಯಾಟ್ ಯಾವಾಗಲೂ ಈ ತಂಡದ ವಿರುದ್ಧ ಅಬ್ಬರಿಸುತ್ತದೆ. ಕುತೂಹಲಕಾರಿಯಾಗಿ, ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್‌ಗೆ ಸೇರುವ ಮೊದಲು ಆರ್‌ಸಿಬಿಯ ಭಾಗವಾಗಿದ್ದರು. ಅವರು 2013 ರಲ್ಲಿ ಈ ತಂಡದೊಂದಿಗೆ ಇದ್ದರು.
ಭುಜದ ಗಾಯದಿಂದಾಗಿ ಆಡಲಿಲ್ಲ
ಐಪಿಎಲ್ 2016 ರಲ್ಲಿ ಆರ್‌ಸಿಬಿ ಮತ್ತೊಮ್ಮೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಈ ಋತುವಿನಲ್ಲಿ, ಅವರು ಬೆಂಗಳೂರು ಪರ 14 ಪಂದ್ಯಗಳಲ್ಲಿ 397 ರನ್ ಗಳಿಸಿದರು. ಆದರೆ 2017 ರಲ್ಲಿ ಭುಜದ ಗಾಯದಿಂದಾಗಿ, ಅವರು ಆಡಲು ಸಾಧ್ಯವಾಗಲಿಲ್ಲ. ಹೀಗಾಘಿ 2018 ರಲ್ಲಿ ಆರ್‌ಸಿಬಿ ಅವರನ್ನು ತಂಡದಿಂದ ಬಿಡುಗಡೆಗೊಳಿಸಿತು. ಮುಂದಿನ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಕೆಎಲ್ ರಾಹುಲ್ ಅವರನ್ನು 11 ಕೋಟಿ ರೂ. ನೀಡಿ ಖರೀದಿಸಿತ್ತು. ನಂತರ ಅವರು ಪಂಜಾಬ್ ತಂಡದ ನಾಯಕರಾದರು. ಅವರು ಈ ತಂಡಕ್ಕೆ ಬಂದಾಗಿನಿಂದ, ನಿರಂತರವಾಗಿ ರನ್ ಗಳಿಸುತ್ತಿದ್ದಾರೆ ಮತ್ತು ಯಾವಾಗಲೂ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದಾರೆ. 2020 ರಲ್ಲಿ, ಅವರು ಆರೆಂಜ್ ಕ್ಯಾಪ್ ಗೆದ್ದಿದ್ದರು.
ಐಪಿಎಲ್ 2018 ರಲ್ಲಿ, ಅವರು 14 ಪಂದ್ಯಗಳಲ್ಲಿ 659 ರನ್ ಗಳಿಸಿದರು, 2019 ರಲ್ಲಿ 593 ಮತ್ತು 2020 ರಲ್ಲಿ 670 ರನ್ ಗಳಿಸಿದರು. ಐಪಿಎಲ್ 2021 ರಲ್ಲಿಯೂ, ಅವರು ಆರೆಂಜ್ ಕ್ಯಾಪ್ ರೇಸ್ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ 11 ಪಂದ್ಯಗಳಲ್ಲಿ 489 ರನ್ ಗಳಿಸಿದ್ದಾರೆ.