IPL 2021, PBKS vs RR: ಕಾರ್ತಿಕ್ ತ್ಯಾಗಿ ಮ್ಯಾಜಿಕ್: ರಾಜಸ್ಥಾನ್ ರಾಯಲ್ಸ್​ಗೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Sep 22, 2021 | 12:06 AM

PBKS vs RR: ಐಪಿಎಲ್​ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 23 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ ಜಯ ದಾಖಲಿಸಿದರೆ ಮತ್ತು ರಾಜಸ್ಥಾನ್ ರಾಯಲ್ಸ್ 13 ಪಂದ್ಯಗಳನ್ನು ಗೆದ್ದುಕೊಂಡಿದೆ.

IPL 2021, PBKS vs RR: ಕಾರ್ತಿಕ್ ತ್ಯಾಗಿ ಮ್ಯಾಜಿಕ್: ರಾಜಸ್ಥಾನ್ ರಾಯಲ್ಸ್​ಗೆ ರೋಚಕ ಜಯ
RR

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಸೀಸನ್​ನ​ (Indian Premier League) 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ರಾಜಸ್ಥಾನ್ ರಾಯಲ್ಸ್​ 2 ರನ್​ಗಳ ರೋಚಕ ಜಯ ದಾಖಲಿಸಿದೆ. ಆರ್​ಆರ್​ ನೀಡಿದ 186 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್​ಗೆ ಅಂತಿಮ ಓವರ್​ನಲ್ಲಿ 4 ರನ್​ಗಳ ಅವಶ್ಯಕತೆಯಿತ್ತು. ಅದ್ಭುತವಾಗಿ ಅಂತಿಮ ಓವರ್​ ಎಸೆದ ಕಾರ್ತಿಕ್ ತ್ಯಾಗಿ 2 ವಿಕೆಟ್ ಪಡೆಯುವುದರೊಂದಿಗೆ ರಾಜಸ್ಥಾನ್​ ರಾಯಲ್ಸ್​ಗೆ 2 ರನ್​ಗಳ ರೋಚಕ ಜಯ ತಂದುಕೊಟ್ಟರು. ಇತ್ತ ಗೆಲುವಿನ ಹೊಸ್ತಿಲಲ್ಲಿ ಎಡವಿದ ಪಂಜಾಬ್ ಕಿಂಗ್ಸ್​ ಟೂರ್ನಿಯ 7ನೇ ಸೋಲನ್ನು ತನ್ನದಾಗಿಸಿಕೊಂಡಿತು.

ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ್ ತಂಡಕ್ಕೆ ಎವಿನ್ ಲೂಯಿಸ್( 36) ಹಾಗೂ ಯಶಸ್ವಿ ಜೈಸ್ವಾಲ್ (49) ಭರ್ಜರಿ ಆರಂಭ ಒದಗಿಸಿದರು. ಆ ಬಳಿಕ ಬಂದ ಮಹಿಪಾಲ್ ಲೊಮರರ್ 17 ಎಸತೆಗಳಲ್ಲಿ ಬಿರುಸಿನ 43 ರನ್​ ಬಾರಿಸಿದರು. ಇದಾಗ್ಯೂ ಅಂತಿಮ ಓವರ್​ಗಳಲ್ಲಿ ಕಂಬ್ಯಾಕ್ ಮಾಡಿದ ಪಂಜಾಬ್ ಬೌಲರುಗಳು ರಾಜಸ್ಥಾನ್ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಅದರಂತೆ ರಾಜಸ್ತಾನ್ ತಂಡವು ನಿಗದಿತ 20 ಓವರ್​ನಲ್ಲಿ 185 ರನ್​ಗಳಿಗೆ ಸರ್ವಪತನ ಕಂಡಿತು. ಪಂಜಾಬ್ ಕಿಂಗ್ಸ್​ ಪರ ಅರ್ಷದೀಪ್ ಸಿಂಗ್ 4 ಓವರ್​ನಲ್ಲಿ 32 ರನ್​ ನೀಡಿ 5 ವಿಕೆಟ್ ಪಡೆದರು. ಹಾಗೆಯೇ ಮೊಹಮ್ಮದ್ ಶಮಿ 4 ಓವರ್​ನಲ್ಲಿ 21 ರನ್​ ನೀಡಿ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

ಈ ಬೃಹತ್ ಗುರಿ ಬೆನ್ನತ್ತಿದ ಪಂಜಾಬ್​ಗೆ ಕೆಎಲ್ ರಾಹುಲ್ (49) ಹಾಗೂ ಮಾಯಾಂಕ್ ಅಗರ್ವಾಲ್ (67) ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 120 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಅದರಂತೆ 19ನೇ ಓವರ್​ನಲ್ಲಿ ಪಂಜಾಬ್ ತಂಡವು 2 ವಿಕೆಟ್​ ನಷ್ಟಕ್ಕೆ 182 ರನ್​ಗಳಿಸಿತ್ತು. ಇದಾಗ್ಯೂ ಅಂತಿಮ ಓವರ್​ನಲ್ಲಿ ಕಾರ್ತಿಕ್ ತ್ಯಾಗಿ ಕೇವಲ 2 ರನ್​ ನೀಡಿ  ರಾಜಸ್ಥಾನ್ ರಾಯಲ್ಸ್​ಗೆ 2 ರನ್​ಗಳ ರೋಚಕ  ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್ ವಿವರ:

ರಾಜಸ್ಥಾನ್ ರಾಯಲ್ಸ್- 185 (20)

ಪಂಜಾಬ್ ಕಿಂಗ್ಸ್​- 183/4 (20)

ಐಪಿಎಲ್​ನಲ್ಲಿ ಉಭಯ ತಂಡಗಳು ಇದುವರೆಗೆ ಒಟ್ಟು 23 ಬಾರಿ ಮುಖಾಮುಖಿಯಾಗಿದೆ. ಅದರಲ್ಲಿ ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ ಜಯ ದಾಖಲಿಸಿದರೆ ಮತ್ತು ರಾಜಸ್ಥಾನ್ ರಾಯಲ್ಸ್ 13 ಪಂದ್ಯಗಳನ್ನು ಗೆದ್ದುಕೊಂಡಿದೆ. ಇನ್ನು ಮೊದಲಾರ್ಧದ ಮುಖಾಮುಖಿಯಲ್ಲಿ ಪಂಜಾಬ್‌ ಕಿಂಗ್ಸ್​ 4 ರನ್​ಗಳ ರೋಚಕ ಜಯ ಸಾಧಿಸಿತ್ತು. ಇದೀಗ ದ್ವಿತಿಯಾರ್ಧದಲ್ಲಿ ರಾಜಸ್ಥಾನ್ ರಾಯಲ್ಸ್​ 2 ರನ್​ಗಳ ರೋಚಕ ಗೆಲುವು ದಾಖಲಿಸಿದೆ.

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್​ ಇಲೆವೆನ್: ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ

ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಇಶಾನ್ ಪೊರೆಲ್, ಆದಿಲ್ ರಶೀದ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

LIVE NEWS & UPDATES

The liveblog has ended.
  • 21 Sep 2021 11:39 PM (IST)

    ರಾಜಸ್ಥಾನ್ ರಾಯಲ್ಸ್​ಗೆ ರೋಚಕ ಜಯ

    ಬೌಲಿಂಗ್- ಕಾರ್ತಿಕ್ ತ್ಯಾಗಿ

    ಮೊದಲ ಎಸೆತ- ಯಾವುದೇ ರನ್ ಇಲ್ಲ

    2ನೇ ಎಸೆತ- 1 ರನ್​

    3ನೇ ಎಸೆತ- ನಿಕೋಲಸ್ ಪೂರನ್ ಔಟ್- ಕೀಪರ್​ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಪೂರನ್ (32)

    4ನೇ ಎಸೆತ- ಯಾವುದೇ ರನ್ ಇಲ್ಲ

    5ನೇ ಎಸೆತ- ದೀಪಕ್ ಹೂಡಾ ಔಟ್- ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಹೊರ ನಡೆದ ಹೂಡಾ

    ಅಂತಿಮ ಎಸೆತದಲ್ಲಿ ಪಂಜಾಬ್​ಗೆ ಗೆಲ್ಲುಲು 1 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ.

    6ನೇ ಎಸೆತದಲ್ಲಿ ಫ್ಯಾಬಿಯನ್​ ಅಲೆನ್ ಯಾವುದೇ ರನ್​ಗಳಿಸಿಲ್ಲ.

    ರಾಜಸ್ಥಾನ್ ರಾಯಲ್ಸ್​ಗೆ 2 ರನ್​ಗಳ ರೋಚಕ ಜಯ.

  • 21 Sep 2021 11:37 PM (IST)

    20ನೇ ಓವರ್​

    ಬೌಲಿಂಗ್- ಕಾರ್ತಿಕ್ ತ್ಯಾಗಿ

    ಮೊದಲ ಎಸೆತ- ಯಾವುದೇ ರನ್ ಇಲ್ಲ

    2ನೇ ಎಸೆತ- 1 ರನ್​

    3ನೇ ಎಸೆತ- ನಿಕೋಲಸ್ ಪೂರನ್ ಔಟ್- ಕೀಪರ್​ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಪೂರನ್ (32)

    4ನೇ ಎಸೆತ- ಯಾವುದೇ ರನ್ ಇಲ್ಲ

    5ನೇ ಎಸೆತ- ದೀಪಕ್ ಹೂಡಾ ಔಟ್

    ಪಂಜಾಬ್​ಗೆ ಗೆಲ್ಲುಲು 1 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ


  • 21 Sep 2021 11:36 PM (IST)

    20ನೇ ಓವರ್​

    ಬೌಲಿಂಗ್- ಕಾರ್ತಿಕ್ ತ್ಯಾಗಿ

    ಮೊದಲ ಎಸೆತ- ಯಾವುದೇ ರನ್ ಇಲ್ಲ

    2ನೇ ಎಸೆತ- 1 ರನ್​

    3ನೇ ಎಸೆತ- ನಿಕೋಲಸ್ ಪೂರನ್ ಔಟ್- ಕೀಪರ್​ಗೆ ಸುಲಭ ಕ್ಯಾಚ್ ನೀಡಿ ಹೊರ ನಡೆದ ಪೂರನ್ (32)

    4ನೇ ಎಸೆತ- ಯಾವುದೇ ರನ್ ಇಲ್ಲ

    ಪಂಜಾಬ್​ಗೆ ಗೆಲ್ಲುಲು 2 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ

  • 21 Sep 2021 11:34 PM (IST)

    20ನೇ ಓವರ್

    ಬೌಲಿಂಗ್- ಕಾರ್ತಿಕ್ ತ್ಯಾಗಿ

    ಮೊದಲ ಎಸೆತ- ಯಾವುದೇ ರನ್ ಇಲ್ಲ

    2ನೇ ಎಸೆತ- 1 ರನ್​

    3ನೇ ಎಸೆತ- ನಿಕೋಲಸ್ ಪೂರನ್ ಔಟ್

    ಪಂಜಾಬ್​ಗೆ ಗೆಲ್ಲುಲು 3 ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ

  • 21 Sep 2021 11:33 PM (IST)

    ಕೊನೆಯ ಓವರ್

    ಬೌಲಿಂಗ್- ಕಾರ್ತಿಕ್ ತ್ಯಾಗಿ

    ಮೊದಲ ಎಸೆತ- ಯಾವುದೇ ರನ್ ಇಲ್ಲ

    5 ಎಸೆತಗಳಲ್ಲಿ 4 ರನ್​ಗಳ ಅವಶ್ಯಕತೆ

  • 21 Sep 2021 11:31 PM (IST)

    ಕೊನೆಯ ಓವರ್​ನಲ್ಲಿ 4 ರನ್​ಗಳ ಅವಶ್ಯಕತೆ

    ಪಂಜಾಬ್ ಕಿಂಗ್ಸ್​ಗೆ ಗೆಲ್ಲಲು ಕೊನೆಯ ಓವರ್​ನಲ್ಲಿ 4 ರನ್​ಗಳ ಅವಶ್ಯಕತೆ.

    PBKS 182/2 (19)

  • 21 Sep 2021 11:27 PM (IST)

    ಗೆಲುವಿನತ್ತ ಪಂಜಾಬ್ ಕಿಂಗ್ಸ್​

  • 21 Sep 2021 11:24 PM (IST)

    ಅರ್ಧಶತಕದ ಜೊತೆಯಾಟ

    ಕೇವಲ 28 ಎಸೆತಗಳಲ್ಲಿ ಅರ್ಧಶತಕದ ಜೊತೆಯಾಟವಾಡಿದ ಮಾರ್ಕ್ರಂ-ಪೂರನ್

  • 21 Sep 2021 11:23 PM (IST)

    ಮಾರ್ಕ್ರಂ ಬಿಗ್ ಸಿಕ್ಸ್

    ಕ್ರಿಸ್ ಮೊರೀಸ್​ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ಐಡೆನ್ ಮಾರ್ಕ್ರಂ…ಇಬ್ಬರೂ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಎಂಬುದು ವಿಶೇಷ.

  • 21 Sep 2021 11:21 PM (IST)

    17 ಓವರ್ ಮುಕ್ತಾಯ

    17 ಓವರ್​ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್​ 168 ರನ್​.

    ಕ್ರೀಸ್​ನಲ್ಲಿ ಪೂರನ್-ಐಡೆನ್, ಗೆಲ್ಲಲು ಬೇಕಿದೆ ಕೇವಲ 18 ರನ್​.

    PBKS 168/2 (17)

  • 21 Sep 2021 11:19 PM (IST)

    ಬ್ಯಾಂಗ್​ ಬ್ಯಾಂಗ್​…ಪೂರನ್ ಪವರ್

    ಮುಸ್ತಫಿಜುರ್ ರೆಹಮಾನ್ ಎಸೆತದಲ್ಲಿ ಭರ್ಜರಿ ಸಿಕ್ಸರ್​. ಲಾಂಗ್​ ಆನ್​ನತ್ತ ಪವರ್​ಫುಲ್ ಸಿಕ್ಸ್ ಸಿಡಿಸಿದ ವಿಂಡೀಸ್ ದಾಂಡಿಗ .

  • 21 Sep 2021 11:18 PM (IST)

    ಪೂರನ್ ಫೋರ್

    ಮುಸ್ತಫಿಜುರ್ ಎಸೆತದಲ್ಲಿ ಫಸ್ಟ್​ ಸ್ಲಿಪ್​ ಮೂಲಕ ಆಕರ್ಷಕ ಬೌಂಡರಿ ಬಾರಿಸಿದ ನಿಕೋಲಸ್ ಪೂರನ್

  • 21 Sep 2021 11:13 PM (IST)

    4 ಓವರ್​ನಲ್ಲಿ 32 ರನ್​ಗಳ ಅವಶ್ಯಕತೆ

    ಪಂಜಾಬ್​ಗೆ ಗೆಲ್ಲಲು 4 ಓವರ್​ನಲ್ಲಿ 32 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಂ

    PBKS 154/2 (16)

  • 21 Sep 2021 11:07 PM (IST)

    30 ಎಸೆತಗಳಲ್ಲಿ 38 ರನ್​ಗಳ ಅವಶ್ಯಕತೆ

    ತ್ಯಾಗಿ ಎಸೆತದಲ್ಲಿ ಐಡೆನ್ ಮಾರ್ಕ್ರಂ ಸ್ಟ್ರೈಟ್ ಫೋರ್.

    ಪಂಜಾಬ್ ಕಿಂಗ್ಸ್​ಗೆ ಗೆಲ್ಲಲು 30 ಎಸೆತಗಳಲ್ಲಿ 38 ರನ್​ಗಳ ಅವಶ್ಯಕತೆ. ವಿಕೆಟ್​ಗಾಗಿ ರಾಜಸ್ಥಾನ್​ ರಾಯಲ್ಸ್​ ಪರದಾಟ.

    PBKS 148/2 (15)

     

  • 21 Sep 2021 11:03 PM (IST)

    ಪೂರನ್ ಪವರ್

    ಪರಾಗ್ ಎಸೆತದಲ್ಲಿ ಲಾಂಗ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ನಿಕೋಲಸ್ ಪೂರನ್.

    PBKS 142/2 (14)

     

  • 21 Sep 2021 11:02 PM (IST)

    ಬೌಂಡರಿ ಖಾತೆ ತೆರೆದ ಮಾರ್ಕ್ರಂ

    ಐಪಿಎಲ್​ನಲ್ಲಿ ಬೌಂಡರಿ ಖಾತೆ ತೆರೆದ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಂ.

  • 21 Sep 2021 11:00 PM (IST)

    ಪಂಜಾಬ್ ತಂಡದ 2 ವಿಕೆಟ್ ಪತನ

    ಕ್ರೀಸ್​ನಲ್ಲಿ ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಂ

    PBKS 130/2 (13.2)

     

  • 21 Sep 2021 10:57 PM (IST)

    ಮಯಾಂಕ್ ಅಗರ್ವಾಲ್ ಔಟ್

    ರಾಹುಲ್ ತಿವಾಠಿಯಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ಮಯಾಂಕ್ ಅಗರ್ವಾಲ್ (67).

    PBKS 126/2 (13)

  • 21 Sep 2021 10:54 PM (IST)

    ಕ್ರೀಸ್​ನಲ್ಲಿ ಐಡೆನ್ ಮಾರ್ಕ್ರಂ

    ಚೊಚ್ಚಲ ಬಾರಿ ಐಪಿಎಲ್ ಪಂದ್ಯವಾಡುತ್ತಿರುವ ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಾರೆ.

  • 21 Sep 2021 10:50 PM (IST)

    ಕೆಎಲ್ ರಾಹುಲ್ ಔಟ್

    34 ಎಸೆತಗಳಲ್ಲಿ 49 ರನ್ ಬಾರಿಸಿದ ಚೇತನ್ ಸಕರಿಯಾಗೆ ವಿಕೆಟ್ ಒಪ್ಪಿಸಿದ ರಾಹುಲ್. ರಾಜಸ್ಥಾನ್ ರಾಯಲ್ಸ್​ಗೆ ಮೊದಲ ಯಶಸ್ಸು

     

  • 21 Sep 2021 10:47 PM (IST)

    ರಾಹುಲ್ ಕ್ಲಾಸಿಕ್ ಶಾಟ್

  • 21 Sep 2021 10:44 PM (IST)

    11 ಓವರ್ ಮುಕ್ತಾಯ

    ಪಂಜಾಬ್​ಗೆ ಗೆಲ್ಲಲು 54 ಎಸೆತಗಳಲ್ಲಿ 73 ರನ್​ಗಳ ಅವಶ್ಯಕತೆ

    PBKS 113/0 (11)

  • 21 Sep 2021 10:41 PM (IST)

    10 ಓವರ್ ಮುಕ್ತಾಯ: ಪಂಜಾಬ್ ಹುಡುಗ್ರ ಭರ್ಜರಿ ಬ್ಯಾಟಿಂಗ್

    ಕ್ರಿಸ್ ಮೋರಿಸ್ ಎಸೆದ 10ನೇ ಓವರ್​ನಲ್ಲಿ 25 ರನ್ ಬಾರಿಸಿದ ಮಯಾಂಕ್ ಅಗರ್ವಾಲ್.

    ಶತಕದ ಜೊತೆಯಾಟದೊಂದಿಗೆ ಕೆಎಲ್ ರಾಹುಲ್-ಮಯಾಂಕ್ ಭರ್ಜರಿ ಬ್ಯಾಟಿಂಗ್

    10 ಓವರ್ ಮುಕ್ತಾಯದ ವೇಳೆಗೆ ಪಂಜಾಬ್ ಕಿಂಗ್ಸ್​ ಮೊತ್ತ 106

    ಕೆಎಲ್ ರಾಹುಲ್-42

    ಮಯಾಂಕ್-58

    PBKS 106/0 (10)

  • 21 Sep 2021 10:39 PM (IST)

    ಶತಕದ ಜೊತೆಯಾಟ

    ಸೂಪರ್ ಶಾಟ್ ಬೌಂಡರಿಯೊಂದಿಗೆ ಶತಕದ ಜೊತೆಯಾಟ ಪೂರೈಸಿದ ಮಯಾಂಕ್ ಅಗರ್ವಾಲ್-ಕೆಎಲ್ ರಾಹುಲ್

  • 21 Sep 2021 10:36 PM (IST)

    ಮಾಯಾಂಕ್ ಅರ್ಧಶತಕ

    ಭರ್ಜರಿ ಸಿಕ್ಸ್​ನೊಂದಿಗೆ 34 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮಯಾಂಕ್ ಅರ್ಗವಾಲ್

  • 21 Sep 2021 10:33 PM (IST)

    ಮಾಯಂಕ್ ಮ್ಯಾಜಿಕ್ ಶಾಟ್

    ವಾಟ್​ ಎ ಶಾಟ್… ಮೊರೀಸ್ ಎಸೆದ ಲೆಗ್​ ಎಸೆತವನ್ನು ಅದ್ಭುತವಾಗಿ ಲೆಗ್​ ಸೈಡ್​ನತ್ತ ಸಿಕ್ಸ್​ ಸಿಡಿಸಿದ ಮಯಾಂಕ್ ಅಗರ್ವಾಲ್

  • 21 Sep 2021 10:31 PM (IST)

    9 ಓವರ್​ ಮುಕ್ತಾಯ

    PBKS 81/0 (9)

     

  • 21 Sep 2021 10:30 PM (IST)

    ಮಯಾಂಕ್ ಅಬ್ಬರ ಶುರು

    ರಾಹುಲ್ ತಿವಾಠಿಯಾ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಬ್ಯೂಟಿಫುಲ್ ಸ್ಟ್ರೈಟ್ ಬೌಂಡರಿ.

  • 21 Sep 2021 10:29 PM (IST)

    ಪಂಜಾಬ್ ಆರಂಭಿಕರ ಭರ್ಜರಿ ಬ್ಯಾಟಿಂಗ್

    PBKS 74/0 (8.2)

     

  • 21 Sep 2021 10:25 PM (IST)

    ಹ್ಯಾಟ್ರಿಕ್ ಬೌಂಡರಿ

    8ನೇ ಓವರ್​ನ ಮೊದಲ ಮೂರು ಎಸೆತಗಳಲ್ಲಿ ಬೌಂಡರಿ ಬಾರಿಸಿದ ಮಯಾಂಕ್ ಅಗರ್ವಾಲ್.

  • 21 Sep 2021 10:24 PM (IST)

    ಎಕ್ಸ್​ಟ್ರಾ ಫೋರ್

    ಕಾರ್ತಿಕ್ ತ್ಯಾಗಿ ಎಸೆತದಲ್ಲಿ ಎಕ್ಸ್​ಟ್ರಾ ಕವರ್​ನತ್ತ ಬ್ಯೂಟಿಫುಲ್ ಬೌಂಡರಿ ಬಾರಿಸಿದ ಮಯಾಂಕ್ ಅಗರ್ವಾಲ್

  • 21 Sep 2021 10:24 PM (IST)

    ಮಯಾಂಕ್ ಲಕ್

    8ನೇ ಓವರ್​ನ ಮೊದಲ ಎಸೆತದಲ್ಲಿ ಬ್ಯಾಟ್ ಎಡ್ಜ್. ಸ್ಲಿಪ್​ನಲ್ಲಿ ಯಾವುದೇ ಫೀಲ್ಡರ್ ಇಲ್ಲ. ಬೌಂಡರಿ.

  • 21 Sep 2021 10:21 PM (IST)

    ಲವ್ಲಿ ಶಾಟ್- ಮಯಾಂಕ್ ಅರ್ಗವಾಲ್

    ರಾಹುಲ್ ತೆವಾಠಿಯಾ ಎಸೆತದಲ್ಲಿ ಲವ್ಲಿ ಶಾಟ್…ಬೌಲರ್ ಮೇಲಿಂದ ನೇರವಾಗಿ ಬೌಂಡರಿ ತಲುಪಿದ ಚೆಂಡು

  • 21 Sep 2021 10:19 PM (IST)

    ರಾಜಸ್ಥಾನ್​ ಫೀಲ್ಡರ್​ಗಳನ್ನು ಪಂಜಾಬ್ ಟ್ರೋಲ್

  • 21 Sep 2021 10:15 PM (IST)

    ಪವರ್​ಪ್ಲೇ ಮುಕ್ತಾಯ: ಪಂಜಾಬ್ ಪವರ್​ಫುಲ್ ಆರಂಭ

    ಪವರ್​ಪ್ಲೇ ಮುಕ್ತಾಯ: ಪಂಜಾಬ್ ಪವರ್​ಫುಲ್ ಆರಂಭ

    ಕೆಎಲ್ ರಾಹುಲ್- 32

    ಮಯಾಂಕ್ ಅರ್ಗವಾಲ್- 15

    3 ಜೀವದಾನ ಪಡೆದ ಕೆಎಲ್ ರಾಹುಲ್. ಪಂಜಾಬ್ ನಾಯಕನ ಕ್ಯಾಚ್ ಕೈಚೆಲ್ಲಿದ ರಿಯಾನ್ ಪರಾಗ್ ಹಾಗೂ ಚೇತನ್ ಸಕರಿಯಾ.

    PBKS 49/0 (6)

  • 21 Sep 2021 10:10 PM (IST)

    ಕ್ಯಾಚ್ ಡ್ರಾಪ್

    ಕೆಎಲ್ ರಾಹುಲ್ ಕ್ಯಾಚ್ ಕೈಚೆಲ್ಲಿದ ರಿಯಾನ್ ಪರಾಗ್. ಲಾಂಗ್​ನತ್ತ ಬಾರಿಸಿದ ಚೆಂಡನ್ನು ಹಿಡಿಯುವಲ್ಲಿ ವಿಫಲರಾದ ಪರಾಗ್.

    PBKS 41/0 (5)

  • 21 Sep 2021 10:05 PM (IST)

    ರಾಜಸ್ಥಾನ್ ರಾಯಲ್ಸ್ ಇನಿಂಗ್ಸ್​ ಸಿಕ್ಸ್​

    ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್​ಮನ್​ಗಳು ಒಟ್ಟು 8 ಸಿಕ್ಸ್​ ಸಿಡಿಸಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಕೆಎಲ್ ರಾಹುಲ್ ಸಿಕ್ಸ್ ಖಾತೆ ತೆರೆದಿದ್ದು, ಎಷ್ಟು ಸಿಕ್ಸರ್​ಗಳು ಮೂಡಿ ಬರಲಿದೆ ಕಾದು ನೋಡಬೇಕು.

  • 21 Sep 2021 10:02 PM (IST)

    3 ಸಾವಿರ ಐಪಿಎಲ್ ರನ್​ ಪೂರೈಸಿದ ರಾಹುಲ್

    ಬ್ಯಾಕ್ ಟು ಬ್ಯಾಕ್ ಸಿಕ್ಸರ್- ಚೇತನ್ ಸಕರಿಯಾ ಓವರ್​ನಲ್ಲಿ ಸತತ ಎರಡು ಸಿಕ್ಸರ್ ಸಿಡಿಸಿದ ರಾಹುಲ್. ಐಪಿಎಲ್​ನಲ್ಲಿ 3 ಸಾವಿರ ರನ್​ ಪೂರೈಸಿದ ಕನ್ನಡಿಗ.

  • 21 Sep 2021 10:01 PM (IST)

    ಕ್ಲಾಸಿಕ್ ಕೆಎಲ್

    ಚೇತನ್ ಸಕರಿಯಾ ಎಸೆದ 4ನೇ ಓವರ್​ನ 2 ಎಸೆತದಲ್ಲಿ ಸ್ಟ್ರೈಟ್ ಸಿಕ್ಸ್​. ಮತ್ತೊಮ್ಮೆ ಕೆಎಲ್ ರಾಹುಲ್ ಕ್ಲಾಸಿಕ್​ ಶಾಟ್.

  • 21 Sep 2021 10:00 PM (IST)

    ಸೂಪರ್ ಕಟ್ಟರ್ ಶಾಟ್

    ಆಕರ್ಷಕವಾಗಿ ಥರ್ಡ್ ಮ್ಯಾನ್ ಶಾಟ್​ನತ್ತ ಬೌಂಡರಿ ಬಾರಿಸಿದ ಕೆಎಲ್ ರಾಹುಲ್

  • 21 Sep 2021 09:59 PM (IST)

    ಪವರ್​ ಪ್ಲೇ- ಮೂರು ಓವರ್ ಮುಕ್ತಾಯ

    ಪವರ್​ ಪ್ಲೇಯ ಮೂರು ಓವರ್ ಮುಕ್ತಾಯ: ನಿಧಾನಗತಿಯಲ್ಲಿ ಇನಿಂಗ್ಸ್​ ಆರಂಭಿಸಿರುವ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್​. ಮೊದಲ ಮೂರು ಓವರ್​ನಲ್ಲಿ ಕೇವಲ 16 ರನ್​ ಮಾತ್ರ.

    PBKS 16/0 (3)

  • 21 Sep 2021 09:58 PM (IST)

    ಫ್ರೀ ಹಿಟ್

    3ನೇ ಓವರ್​ನ 4ನೇ ಎಸೆತ ನೋ ಬಾಲ್​. ಕಾರ್ತಿಕ್ ತ್ಯಾಗಿ  ಫ್ರೀ ಹಿಟ್​ ಎಸೆತದಲ್ಲಿ  ಬೌಂಡರಿ ಬಾರಿಸಿದ ಕೆಎಲ್ ರಾಹುಲ್

  • 21 Sep 2021 09:55 PM (IST)

    ಪಂಜಾಬ್ ಕಿಂಗ್ಸ್​ ಇನಿಂಗ್ಸ್​ ಶುರು

    ಪಂಜಾಬ್ ಕಿಂಗ್ಸ್​ ಇನಿಂಗ್ಸ್​ ಶುರು- ನಿಧಾನಗತಿಯ ಬ್ಯಾಟಿಂಗ್

    ಕ್ರೀಸ್​ನಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್

    PBKS 9/0 (2.3)

  • 21 Sep 2021 09:34 PM (IST)

    ಪಂಜಾಬ್ ಕಿಂಗ್ಸ್​- ಟಾರ್ಗೆಟ್ 186

  • 21 Sep 2021 09:33 PM (IST)

    5 ವಿಕೆಟ್ ಕಬಳಿಸಿದ ಅರ್ಷದೀಪ್ ಸಿಂಗ್ ಹರ್ಷ

  • 21 Sep 2021 09:30 PM (IST)

    5 ವಿಕೆಟ್ ಕಬಳಿಸಿದ ಅರ್ಷದೀಪ್ ಸಿಂಗ್

  • 21 Sep 2021 09:24 PM (IST)

    ರಾಜಸ್ಥಾನ್ ರಾಯಲ್ಸ್​ ಇನಿಂಗ್ಸ್​ ಅಂತ್ಯ

    ಸಂಕ್ಷಿಪ್ತ ಸ್ಕೋರ್ ವಿವರ:-

    ರಾಜಸ್ಥಾನ್ ರಾಯಲ್ಸ್​- ನಿಗದಿತ 20 ಓವರ್​ನಲ್ಲಿ 185 ರನ್​ ಪೇರಿಸಿದೆ.

    ಯಶಸ್ವಿ ಜೈಸ್ವಾಲ್- 49

    ಮಹಿಪಾಲ್ ಲೊಮರರ್-43

    ಪಂಜಾಬ್ ಕಿಂಗ್ಸ್​ ಪರ ಅರ್ಷದೀಪ್ ಸಿಂಗ್ 4 ಓವರ್​ನಲ್ಲಿ 32 ರನ್​ ನೀಡಿ 5 ವಿಕೆಟ್ ಪಡೆದರು. ಹಾಗೆಯೇ ಮೊಹಮ್ಮದ್ ಶಮಿ 4 ಓವರ್​ನಲ್ಲಿ 21 ರನ್​ ನೀಡಿ 3 ವಿಕೆಟ್ ಕಬಳಿಸಿದರು.

  • 21 Sep 2021 09:17 PM (IST)

    ಶಮಿ ಬ್ಯಾಕ್ ಟು ಬ್ಯಾಕ್ ವಿಕೆಟ್

    ಕ್ರಿಸ್ ಮೊರೀಸ್ ಔಟ್ (5). 19ನೇ ಓವರ್​ನಲ್ಲಿ 2 ವಿಕೆಟ್ ಪಡೆದ ಮೊಹಮ್ಮದ್ ಶಮಿ.

    RR 178/8 (18.5)

     

  • 21 Sep 2021 09:13 PM (IST)

    ತಿವಾಠಿಯಾ ಔಟ್

    18ನೇ ಓವರ್​ನ ಮೊದಲ ಎಸೆತದಲ್ಲೇ ರಾಹುಲ್ ತಿವಾಠಿಯಾ ಕ್ಲೀನ್ ಬೌಲ್ಡ್. ಮೊಹಮ್ಮದ್ ಶಮಿ ಎಸೆತವನ್ನು ಗುರುತಿಸುವಲ್ಲಿ ಎಡವಿದ ತಿವಾಠಿಯಾ ಬೌಲ್ಡ್.

  • 21 Sep 2021 09:11 PM (IST)

    18 ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ರಾಯಲ್ಸ್​ 175 ರನ್​

    RR 175/6 (18 ಓವರ್)

    ಕರೆಂಟ್​ ರನ್​ ರೇಟ್: 9.7

    ಕ್ರೀಸ್​ನಲ್ಲಿ ರಾಹುಲ್ ತೆವಾಠಿಯಾ ಮತ್ತು ಕ್ರಿಸ್ ಮೊರೀಸ್

     

  • 21 Sep 2021 09:05 PM (IST)

    ಲೊಮರರ್ ಔಟ್

    ಮೂರನೇ ವಿಕೆಟ್ ಪಡೆದ ಅರ್ಷದೀಪ್ ಸಿಂಗ್.

    17 ಎಸೆತಗಳಲ್ಲಿ 43 ರನ್​ಗಳ ಸ್ಪೋಟಕ ಇನಿಂಗ್ಸ್ ಆಡಿದ ಲೊಮರರ್ ಔಟ್.

     

  • 21 Sep 2021 09:03 PM (IST)

    ವಿಕೆಟ್ ಪಡೆದ ಮೊಹಮ್ಮದ್ ಶಮಿ

  • 21 Sep 2021 09:01 PM (IST)

    ರಿಯಾನ್ ಪರಾಗ್ ಔಟ್

    ಮೊಹಮ್ಮದ್ ಶಮಿ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ರಿಯಾನ್ ಪರಾಗ್.

    RR 166/5 (16.4)

  • 21 Sep 2021 08:54 PM (IST)

    ಮಹಿಪಾಲ್ ಲೊಮರರ್ ಭರ್ಜರಿ ಬ್ಯಾಟಿಂಗ್

    ಮಹಿಪಾಲ್ ಲೊಮರರ್ ಭರ್ಜರಿ ಬ್ಯಾಟಿಂಗ್- ಕೇವಲ 15 ಎಸೆತಗಳಲ್ಲಿ 42 ರನ್​.

    RR 164/4 (16)

  • 21 Sep 2021 08:50 PM (IST)

    ಲೊಮರರ್ ಆರ್ಭಟ

    ದೀಪಕ್ ಹೂಡಾ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಭರ್ಜರಿ ಸಿಕ್ಸರ್. ಸ್ಟ್ರೈಟ್​ನತ್ತ ಬಿಗ್ ಸಿಕ್ಸ್​ ಸಿಡಿಸಿದ ಮಹಿಪಾಲ್ ಲೊಮರರ್​

     

  • 21 Sep 2021 08:48 PM (IST)

    ಕಂಬ್ಯಾಕ್ ಪ್ರಯತ್ನದಲ್ಲಿ ಪಂಜಾಬ್ ಬೌಲರ್ಸ್​

  • 21 Sep 2021 08:46 PM (IST)

    ಅರ್ಧಶತಕ ವಂಚಿತ ಯಶಸ್ವಿ ಜೈಸ್ವಾಲ್

    ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 1 ರನ್​ನಿಂದ ಚೊಚ್ಚಲ ಐಪಿಎಲ್ ಅರ್ಧಶತಕ ವಂಚಿತರಾಗಿದ್ದಾರೆ. ಕಳೆದ ಸೀಸನ್​ನಿಂದ ಐಪಿಎಲ್ ಆಡುತ್ತಿರುವ ಜೈಸ್ವಾಲ್ 35 ಎಸೆತಗಳಲ್ಲಿ 49 ರನ್​ ಬಾರಿಸಿದರು. ಇದೇ ವೇಳೆ ಬ್ರಾರ್ ಎಸೆತದಲ್ಲಿ ಮಯಾಂಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.

    ರಾಜಸ್ಥಾನ್ ರಾಯಲ್ಸ್​ ಸ್ಕೋರ್- RR 136/4 (14.2)

     

  • 21 Sep 2021 08:37 PM (IST)

    ರಾಜಸ್ಥಾನ್ ರಾಯಲ್ಸ್​ 3 ವಿಕೆಟ್ ಪತನ

    ರಾಜಸ್ಥಾನ್ ರಾಯಲ್ಸ್ 12 ಓವರ್ ಮುಕ್ತಾಯದ ವೇಳೆಗೆ​ 116/3

  • 21 Sep 2021 08:35 PM (IST)

    ವಾವ್ಹ್….ವಾಟ್ ಎ ಕ್ಯಾಚ್ ಫ್ಯಾಬ್ಲೆಸ್​ ಫ್ಯಾಬಿಯನ್ ಅಲೆನ್

    ಲಿವಿಂಗ್​ ಸ್ಟೋನ್ ಔಟ್….ಅರ್ಷದೀಪ್ ಎಸೆತದಲ್ಲಿ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಫ್ಯಾಬಿಯನ್ ಅಲೆನ್ ಸೂಪರ್ ಡೈವಿಂಗ್ ಕ್ಯಾಚ್.

  • 21 Sep 2021 08:33 PM (IST)

    ಬಿಗ್ ಬಿಗ್ ಬಿಗ್ ಸಿಕ್ಸ್​..!

    ಅರ್ಷದೀಪ್ ಸಿಂಗ್ ಟು ಲಿವಿಂಗ್‌ಸ್ಟೋನ್, ಭರ್ಜರಿ ಸಿಕ್ಸ್. ಚೆಂಡು ಸ್ಟೇಡಿಯಂನಲ್ಲಿ, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಇಂಗ್ಲೆಂಡ್ ಆಲ್​ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್

  • 21 Sep 2021 08:31 PM (IST)

    ವಾಟ್ ಎ ಶಾಟ್

    ಅರ್ಷದೀಪ್ ಎಸೆತದಲ್ಲಿ ಬ್ಯಾಕ್​ನತ್ತ ಲಿವಿಂಗ್ ಸ್ಟೋನ್ ಸ್ಕೂಪ್ ಶಾಟ್- ಬೌಂಡರಿ

  • 21 Sep 2021 08:29 PM (IST)

    ಜೈಸ್ವಾಲ್ ಯಶಸ್ವಿ ಬ್ಯಾಟಿಂಗ್

    ಹರ್ಪ್ರೀತ್ ಬ್ರಾರ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸ್ಟ್ರೈಟ್​ನತ್ತ ಭರ್ಜರಿ ಬೌಂಡರಿ

  • 21 Sep 2021 08:25 PM (IST)

    10 ಓವರ್ ಮುಕ್ತಾಯ: ರಾಜಸ್ಥಾನ್ ರಾಯಲ್ಸ್​ ಉತ್ತಮ ಬ್ಯಾಟಿಂಗ್

    ಮೊದಲ 10 ಓವರ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ಉತ್ತಮ ಬ್ಯಾಟಿಂಗ್, ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ 94 ರನ್​. ಕ್ರೀಸ್​ನಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (40) ಹಾಗೂ ಲಿವಿಂಗ್​ ಸ್ಟೋನ್ (9) ಬ್ಯಾಟಿಂಗ್.

  • 21 Sep 2021 08:20 PM (IST)

    ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್

    ಆದಿಲ್ ರಶೀದ್ ಎಸೆತದಲ್ಲಿ ಸೂಪರ್ ಸಿಕ್ಸ್ ಸಿಡಿಸಿದ ಜೈಸ್ವಾಲ್

    ರಾಜಸ್ಥಾನ್ ರಾಯಲ್ಸ್​ ಸ್ಕೋರ್- 86/2

    ಓವರ್- 9

  • 21 Sep 2021 08:17 PM (IST)

    ವಿಕೆಟ್ ಖಾತೆ ತೆರೆದ ಇಶಾನ್ ಪೊರೆಲ್

  • 21 Sep 2021 08:10 PM (IST)

    ವಾಟ್​ ಎ ಕ್ಯಾಚ್

    ಇಶಾನ್ ಪೊರೆಲ್ ಎಸೆತದಲ್ಲಿ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಕ್ಯಾಚ್. ಅಧ್ಭುತವಾಗಿ ಒಂದೇ ಕೈಯಲ್ಲಿ ಚೆಂಡನ್ನು ಬಂಧಿಸಿದ ಕೆಎಲ್ ರಾಹುಲ್. ರಾಜಸ್ಥಾನ್ ರಾಯಲ್ಸ್​- 68/2

  • 21 Sep 2021 08:07 PM (IST)

    ಕ್ರೀಸ್​ನಲ್ಲಿ ಸ್ಯಾಮ್ಸನ್-ಜೈಸ್ವಾಲ್

    ರಾಜಸ್ಥಾನ್ ರಾಯಲ್ಸ್​ ತಂಡದ ಇನ್ನಿಂಗ್ಸ್‌ ಪವರ್‌ಪ್ಲೇ ಮುಗಿದಿದೆ.  ಪವರ್ ಪ್ಲೇನಲ್ಲಿ 1 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತು. ಎವಿನ್ ಲೂಯಿಸ್ (36) ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್​ಗೆ 54 ರನ್ ಗಳ ಜೊತೆಯಾಟ ಆಡಿದರು. ಇದಾಗ್ಯೂ ಪವರ್​ಪ್ಲೇನ ಅಂತಿಮ ಓವರ್​ನಲ್ಲಿ ಲೂಯಿಸ್ ವಿಕೆಟ್ ಪಡೆಯುವಲ್ಲಿ ಅರ್ಷದೀಪ್ ಸಿಂಗ್ ಯಶಸ್ವಿಯಾದರು.

  • 21 Sep 2021 08:01 PM (IST)

    ಪವರ್ ಪ್ಲೇ ಮುಕ್ತಾಯ

    ರಾಜಸ್ಥಾನ್ ರಾಯಲ್ಸ್-​  56/1

    ಪಂಜಾಬ್​ ಕಿಂಗ್ಸ್​ಗೆ ಮೊದಲ ಯಶಸ್ಸು ತಂದುಕೊಟ್ಟ ಅರ್ಷದೀಪ್ ಸಿಂಗ್

  • 21 Sep 2021 07:59 PM (IST)

    ಲೂಯಿಸ್ ಔಟ್

    ಅರ್ಷದೀಪ್ ಸಿಂಗ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಲೂಯಿಸ್- ಮಯಾಂಕ್ ಅಗರ್ವಾಲ್ ಅದ್ಭುತ ಕ್ಯಾಚ್- ಎವಿನ್ ಲೂಯಿಸ್ (36) ಇನಿಂಗ್ಸ್​ ಅಂತ್ಯ

  • 21 Sep 2021 07:54 PM (IST)

    ಬೌಲಿಂಗ್​ನಲ್ಲಿ ಬದಲಾವಣೆ- ದಾಳಿಗಿಳಿದ ದೀಪಕ್ ಹೂಡಾ

    5ನೇ ಓವರ್

    ಮೊದಲ ಎಸೆತ- ಮೊದಲ ಎಸೆತದಲ್ಲೇ ಬೌಂಡರಿ ಉತ್ತರ ನೀಡಿದ ಲೂಯಿಸ್

    2ನೇ ಎಸೆತ- 1

    3ನೇ ಎಸೆತ- 0

    4ನೇ ಎಸೆತ- 0

    5ನೇ ಎಸೆತ- ಫುಲ್ ಟಾಸ್.. ಲೂಯಿಸ್​ ಬ್ಯಾಟ್​ನಿಂದ​ ಕವರ್​ನತ್ತ ಸೂಪರ್ ಶಾಟ್- ಬೌಂಡರಿ

    6ನೇ ಎಸೆತ- ಮತ್ತೊಂದು ಬೌಂಡರಿ ಬಾರಿಸಿದ ಲೂಯಿಸ್

    ರಾಜಸ್ಥಾನ್ ರಾಯಲ್ಸ್ ಸ್ಕೋರ್​- 53/0

    ಓವರ್- 5

  • 21 Sep 2021 07:50 PM (IST)

    ಲೂಯಿಸ್ ಸ್ಪೋಟಕ ಬ್ಯಾಟಿಂಗ್

    ಮೊದಲ ಎಸೆತ- 1 ರನ್​ (ಯಶಸ್ವಿ ಜೈಸ್ವಾಲ್)

    2ನೇ ಎಸೆತ- ಅತ್ಯುತ್ತಮ ಶಾಟ್- ಮಿಡಲ್ ಲೆಗ್ ಸ್ಟಂಪ್​ ಎಸೆತಕ್ಕೆ ಸ್ಕ್ವೇರ್ ಕಟ್​ ಮೂಲಕ ಬೌಂಡರಿ ಉತ್ತರ ನೀಡಿದ ಲೂಯಿಸ್

    3ನೇ ಎಸೆತ- ಬ್ಯಾಟ್​ ಎಡ್ಜ್​, ವಿಕೆಟ್ ಕೀಪರ್-ಸ್ಲಿಪ್​ ಫೀಲ್ಡರ್ ನಡುವೆ ಚೆಂಡು ಬೌಂಡರಿಗೆ

    4ನೇ ಎಸೆತ- 0

    5ನೇ ಎಸೆತ- ಉಡೀಸ್…ಆನ್​ಸೈಡ್​ನತ್ತ ಎಡಗೈ ದಾಂಡಿಗ ಎವಿನ್ ಲೂಯಿಸ್​ ಬ್ಯಾಟ್​ನಿಂದ ಸೂಪರ್ ಬೌಂಡರಿ

    6ನೇ ಎಸೆತ- ಕವರ್ಸ್​ನತ್ತ ಮತ್ತೊಂದು ಬೌಂಡರಿ- ಎವಿನ್ ಲೂಯಿಸ್ ಆರ್ಭಟ

    ರಾಜಸ್ಥಾನ್ ರಾಯಲ್ಸ್ ಸ್ಕೋರ್​- 40/0

    ಓವರ್- 4

  • 21 Sep 2021 07:44 PM (IST)

    ಲೂಯಿಸ್-ಜೈಸ್ವಾಲ್ ಭರ್ಜರಿ ಬ್ಯಾಟಿಂಗ್

    3ನೇ ಮೂವರ್- ಮೊಹಮ್ಮದ್ ಶಮಿ

    ಮೊದಲ ಎಸೆತ- 1 ರನ್

    2ನೇ ಎಸೆತ- 0

    3ನೇ ಎಸೆತ- 0

    4ನೇ ಎಸೆತ- 0

    5ನೇ ಎಸೆತ- ಸ್ಟ್ರೈಟ್ ಶಾಟ್, ಎವಿನ್ ಲೂಯಿಸ್ ಬ್ಯಾಟ್​ನಿಂದ ಬೌಂಡರಿ

    6ನೇ ಎಸೆತ- 0

    ರಾಜಸ್ಥಾನ್ ರಾಯಲ್ಸ್ ಸ್ಕೋರ್​- 23/0

    ಓವರ್- 3

  • 21 Sep 2021 07:41 PM (IST)

    ಇಶಾನ್ ಪೊರೆಲ್- 2ನೇ ಓವರ್ ಮುಕ್ತಾಯ

    ಮೊದಲ ಎಸೆತ- 0

    2ನೇ ಎಸೆತ- ವೈಡ್, 0

    3ನೇ ಎಸೆತ- 1

    4ನೇ ಎಸೆತ- 1

    5ನೇ ಎಸೆತ- 0

    6ನೇ ಎಸೆತ- ಸ್ಟ್ರೈಟ್​ನತ್ತ ಭರ್ಜರಿ ಸಿಕ್ಸರ್- ಸಿಕ್ಸ್ ಖಾತೆ ತೆರೆದ ಲೂಯಿಸ್

    ರಾಜಸ್ಥಾನ್ ರಾಯಲ್ಸ್ ಸ್ಕೋರ್​- 18/0

    ಓವರ್- 2

  • 21 Sep 2021 07:36 PM (IST)

    2ನೇ ಓವರ್​ ಎಸೆಯುತ್ತಿರುವ ಇಶಾನ್ ಪೊರೆಲ್

    ಚೊಚ್ಚಲ ಐಪಿಎಲ್​ ಪಂದ್ಯವಾಡುತ್ತಿರುವ ಇಶಾನ್ ಪೊರೆಲ್ 2ನೇ ಓವರ್​.

  • 21 Sep 2021 07:35 PM (IST)

    ರಾಜಸ್ಥಾನ್ ರಾಯಲ್ಸ್​ ಉತ್ತಮ ಆರಂಭ

    ರಾಜಸ್ಥಾನ್ ರಾಯಲ್ಸ್​ ಉತ್ತಮ ಆರಂಭ- ಮೊಹಮ್ಮದ್ ಶಮಿ ಎಸೆದ ಮೊದಲ ಓವರ್​ನಲ್ಲಿ 9 ರನ್ ಕಲೆಹಾಕಿದ ಆರ್​ಆರ್ ಆರಂಭಿಕರು.

  • 21 Sep 2021 07:34 PM (IST)

    ಮೊದಲ ಓವರ್ ಮೊಹಮ್ಮದ್ ಶಮಿ

    ಮೊದಲ ಎಸೆತ- 1 ರನ್​, ಐಪಿಎಲ್​ನಲ್ಲಿ ರನ್​ ಖಾತೆ ತೆರೆದ ಎವಿನ್ ಲೂಯಿಸ್

    2ನೇ ಎಸೆತ- 0,  ಸ್ಟ್ರೈಕ್​ನಲ್ಲಿ ಯಶಸ್ವಿ ಜೈಸ್ವಾಲ್

    3ನೇ ಎಸೆತ- 0

    4ನೇ ಎಸೆತ- 0

    5ನೇ ಎಸೆತ- ಸ್ಕ್ವೇರ್ ಕಟ್​ ಮೂಲಕ ಮೊದಲ ಬೌಂಡರಿ ಬಾರಿಸಿದ ಜೈಸ್ವಾಲ್

    6ನೇ ಎಸೆತ- ಪುಲ್ ಶಾಟ್ ಮೂಲಕ ಜೈಸ್ವಾಲ್​ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

    ರಾಜಸ್ಥಾನ್ ರಾಯಲ್ಸ್ ಸ್ಕೋರ್​- 9/0

    ಓವರ್- 1

  • 21 Sep 2021 07:28 PM (IST)

    ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ ಇಲೆವೆನ್

  • 21 Sep 2021 07:27 PM (IST)

    ಪಂಜಾಬ್ ಕಿಂಗ್ಸ್​ ಪ್ಲೇಯಿಂಗ್ ಇಲೆವೆನ್

  • 21 Sep 2021 07:25 PM (IST)

    ವಿಕೆಟ್ ಕೀಪರ್ ನಾಯಕರುಗಳ ಕದನ

  • 21 Sep 2021 07:18 PM (IST)

    ರಾಜಸ್ಥಾನ್ ರಾಯಲ್ಸ್​ ಪರ ಸಿಪಿಎಲ್​ ಸಿಕ್ಸರ್​ ಕಿಂಗ್ ಓಪನರ್

    ರಾಜಸ್ಥಾನ್ ರಾಯಲ್ಸ್​ ಪರ ಕೆರಿಬಿಯನ್ ಪ್ರೀಮಿಯರ್ ಲೀಗ್​ನ ಸಿಕ್ಸರ್ ಕಿಂಗ್ ಎವಿನ್ ಲೂಯಿಸ್ ಇನಿಂಗ್ಸ್​ ಆರಂಭಿಸಲಿದ್ದಾರೆ. ಲೂಯಿಸ್ ಜೊತೆ ದೇಶೀಯ ಪ್ರತಿಭೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಆಡಲಿದ್ದಾರೆ.

  • 21 Sep 2021 07:13 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿವೆ

    ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್​ ಇಲೆವೆನ್: ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ

    ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಇಶಾನ್ ಪೊರೆಲ್, ಆದಿಲ್ ರಶೀದ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

  • 21 Sep 2021 07:09 PM (IST)

    ರಾಜಸ್ಥಾನ್ ಪರ ಎವಿನ್ ಲೂಯಿಸ್ ಪದಾರ್ಪಣೆ

    ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್​ ಇಲೆವೆನ್: ಯಶಸ್ವಿ ಜೈಸ್ವಾಲ್, ಎವಿನ್ ಲೂಯಿಸ್, ಸಂಜು ಸ್ಯಾಮ್ಸನ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಮಹಿಪಾಲ್ ಲೊಮರ್, ರಿಯಾನ್ ಪರಾಗ್, ರಾಹುಲ್ ತೆವಾಟಿಯಾ, ಕ್ರಿಸ್ ಮೋರಿಸ್, ಮುಸ್ತಫಿಜುರ್ ರಹಮಾನ್, ಚೇತನ್ ಸಕಾರಿಯಾ, ಕಾರ್ತಿಕ್ ತ್ಯಾಗಿ

  • 21 Sep 2021 07:06 PM (IST)

    ಕ್ರಿಸ್ ಗೇಲ್ ಔಟ್- ಪಂಜಾಬ್ ತಂಡದಲ್ಲಿ ಮೂವರ ಪದಾರ್ಪಣೆ

    ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್: ಕೆಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಫ್ಯಾಬಿಯನ್ ಅಲೆನ್, ಇಶಾನ್ ಪೊರೆಲ್, ಆದಿಲ್ ರಶೀದ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

  • 21 Sep 2021 07:02 PM (IST)

    ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್

    ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದಾರೆ.

  • 21 Sep 2021 06:56 PM (IST)

    ಪಂಜಾಬ್ ಕಿಂಗ್ಸ್​ ಪರ ಮೂವರ ಪದಾರ್ಪಣೆ

  • 21 Sep 2021 06:52 PM (IST)

    ರಾಜಸ್ಥಾನ್ ರಾಯಲ್ಸ್​ ತಂಡದಲ್ಲಿ ವಿಂಡೀಸ್ ಆಟಗಾರನಿಗೆ ಅವಕಾಶ

    ಸಿಪಿಎಲ್​ನಲ್ಲಿ ಮಿಂಚಿದ್ದ ಎವಿನ್ ಲೂಯಿಸ್ ರಾಜಸ್ಥಾನ್ ರಾಯಲ್ಸ್​ ಪರ ಪದಾರ್ಪಣೆ

  • 21 Sep 2021 06:49 PM (IST)

    ಪಂಜಾಬ್ ಕಿಂಗ್ಸ್​ ಪರ ಮೂವರ ಪದಾರ್ಪಣೆ

    – ಇಶಾನ್ ಪೊರೆಲ್
    -ಆದಿಲ್ ರಶೀದ್
    -ಐಡೆನ್ ಮಾರ್ಕ್ರಮ್

  • 21 Sep 2021 06:44 PM (IST)

    ವಿಕೆಟ್ ಕೀಪರ್​ ನಾಯಕರುಗಳ ಕದನ: ಉಭಯ ತಂಡಗಳ ಅಂಕಿ ಅಂಶಗಳು ಹೀಗಿವೆ

  • 21 Sep 2021 06:43 PM (IST)

    ಕ್ರಿಸ್ ಗೇಲ್​ ಹುಟ್ಟುಹಬ್ಬಕ್ಕೆ ಪಂಜಾಬ್ ನೀಡಲಿದೆಯಾ ಗೆಲುವಿನ ಗಿಫ್ಟ್

  • 21 Sep 2021 06:28 PM (IST)

    IPL 2021 Live Score, PBKS vs RR: ಪಂಜಾಬ್ ಕಿಂಗ್ಸ್​ಗೆ ರಾಜಸ್ಥಾನ್ ರಾಯಲ್ಸ್​ ಸವಾಲು

    ದುಬೈ ಅಂತಾರಾಷ್ಟ್ರೀಯ​ ಕ್ರೀಡಾಂಗಣದಲ್ಲಿ ಇಂದು ಕೆ. ಎಲ್ ರಾಹುಲ್ (KL Rahul) ನಾಯಕತ್ವದ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿಯಾಗಲಿದೆ.

Published On - 6:26 pm, Tue, 21 September 21

Follow us on