Virat Kohli: ವಿರಾಟ್ ಕೊಹ್ಲಿ ಮುಂದಿನ ಸೀಸನ್ನಲ್ಲಿ ತಂಡ ಬದಲಿಸ್ತಾರಾ? ಸುಳಿವು ನೀಡಿದ RCB ಮಾಜಿ ಆಟಗಾರ
Virat Kohli’s next IPL team: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗಾಗಿ ವಿರಾಟ್ ಕೊಹ್ಲಿ 6000 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 2013 ರಿಂದ ನಾಯಕನಾಗಿ ಬಡ್ತಿ ಪಡೆದ ಕೊಹ್ಲಿ 2016ರಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಆರ್‌ಸಿಬಿ ಪರ 200 ಪಂದ್ಯಗಳನ್ನು ಪೂರೈಸಿದ್ದಾರೆ. ಇದಕ್ಕೂ ಮುನ್ನ ಮುಂದಿನ ಸೀಸನ್ನಲ್ಲಿ ಆರ್‌ಸಿಬಿ (Royal Challengers Banglaore) ತಂಡದ ನಾಯಕನಾಗಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅತ್ತ ಮುಂಬರುವ ಸೀಸನ್ನಲ್ಲಿ ಒಟ್ಟು 10 ತಂಡಗಳಿರಲಿದೆ. ಅಲ್ಲದೆ ಮೆಗಾ ಆಕ್ಷನ್ (IPL Meg Auction) ಕೂಡ ನಡೆಯಲಿದೆ. ಇದಾಗ್ಯೂ ಕೊಹ್ಲಿ ಆರ್‌ಸಿಬಿ ತಂಡದಲ್ಲೇ ಬ್ಯಾಟ್ಸ್ಮನ್ ಆಗಿ ಮುಂದುವರೆಯಲಿದ್ದಾರಾ ಎಂಬ ಪ್ರಶ್ನೆಗೆ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಡೇಲ್ ಸ್ಟೇನ್ (Dale Steyn) ಉತ್ತರ ನೀಡಿದ್ದಾರೆ.
ಡೇಲ್ ಸ್ಟೇನ್ ಪ್ರಕಾರ, ವಿರಾಟ್ ಕೊಹ್ಲಿ ಆರ್‌ಸಿಬಿ ತಂಡವನ್ನು ತೊರೆದರೆ ಅವರು ಆಡುವುದು ತವರಿನ ತಂಡದ ಪರ ಎಂದಿದ್ದಾರೆ. ಅಂದರೆ ಕೊಹ್ಲಿಯ ತವರೂರಿನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂದು ಸ್ಟೇನ್ ಭವಿಷ್ಯ ನುಡಿದಿದ್ದಾರೆ. ಇನ್ನು ಕೊಹ್ಲಿ ಆರ್‌ಸಿಬಿ ತಂಡದಲ್ಲೇ ಮುಂದುವರೆಯಲು ಬಯಸಿದ್ದಾರೆ. ಆದರೆ ಇಲ್ಲಿ ನೀವು ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ, ಎಷ್ಟು ದೊಡ್ಡ ಸ್ಟಾರ್ ಆಟಗಾರನಾಗಿದ್ದರೂ ನಾವು ಹಲವರು ಮುಂದೆ ಸಾಗಿರುವುದನ್ನು ನೋಡಿದ್ದೇವೆ. ಅದಕ್ಕೆ ಉತ್ತಮ ಉದಾಹರಣೆ ಕ್ರಿಸ್ ಗೇಲ್. ಅವರು ಈ ಹಿಂದೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ. ಅವರು ಕೂಡ ತಂಡವನ್ನು ತೊರೆದಿರುವುದನ್ನು ನಾವು ನೋಡಿದ್ದೇವೆ. ಹೀಗಾಗಿ ಕೊಹ್ಲಿ ಭವಿಷ್ಯದಲ್ಲೂ ಬದಲಾವಣೆಯಾಗಬಹುದು ಎಂದು ಸ್ಟೇನ್ ತಿಳಿಸಿದರು.
ಇನ್ನು ಅಂತಾರಾಷ್ಟ್ರೀಯ ಕ್ರೀಡೆಯನ್ನು ತೆಗೆದು ನೋಡಿ, ಫುಟ್ಬಾಲ್ನಲ್ಲಿ ‘ಡೇವಿಡ್ ಬೆಕ್‌ಹ್ಯಾಮ್ ಮ್ಯಾಂಚೆಸ್ಟರ್ ಕ್ಲಬ್ ಅನ್ನು ತೊರೆದಿದ್ದರು. ಈ ಎಲ್ಲಾ ದೊಡ್ಡ ಆಟಗಾರರು ತಮ್ಮ ಕ್ಲಬ್‌ಗಾಗಿ ದೀರ್ಘಕಾಲ ಆಡಿದ್ದಾರೆ. ಆ ಬಳಿಕ ಬೇರೊಂದು ತಂಡವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ದೆಹಲಿಯವರು. ಹೀಗಾಗಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುವ ಸಾಧ್ಯತೆಯಿದೆ ಸ್ಟೇನ್ ತಿಳಿಸಿದರು.
ಆರ್‌ಸಿಬಿ ತಂಡದ ಕಿಂಗ್ ಕೊಹ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗಾಗಿ ವಿರಾಟ್ ಕೊಹ್ಲಿ 6000 ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. 2013 ರಿಂದ ನಾಯಕನಾಗಿ ಬಡ್ತಿ ಪಡೆದ ಕೊಹ್ಲಿ 2016ರಲ್ಲಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಇದೀಗ ಈ ಸೀಸನ್ ಬಳಿಕ ಆರ್‌ಸಿಬಿ ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಈ ಬಾರಿ ಕಪ್ ಗೆಲ್ಲುವ ಮೂಲಕ ಆರ್‌ಸಿಬಿ ಕ್ಯಾಪ್ಟನ್ಸಿಗೆ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ ಕೊಹ್ಲಿ.
ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್ಗಳ ಪಟ್ಟಿ ಇಲ್ಲಿದೆ
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್
(Dale Steyn predicts Virat Kohli’s next IPL team after RCB)