AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ವಿರಾಟ್ ಕೊಹ್ಲಿ ಪಾಲಿನ ಮಹತ್ವದ ಪಂದ್ಯ ಮತ್ತು RCBಯ ಎರಡು ಹೀನಾಯ ಸೋಲುಗಳು

Virat Kohli: ಇದೀಗ ಕೆಕೆಆರ್ ವಿರುದ್ದ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ​ 200 ಪಂದ್ಯಗಳನ್ನು ಪೂರೈಸಿದ್ದಾರೆ. ತಮ್ಮ ಮಹತ್ವದ ಪಂದ್ಯದಲ್ಲಿ ಕೇವಲ 5 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು 92 ರನ್​ಗಳಿಗೆ ಆರ್​ಸಿಬಿಯನ್ನು ಆಲೌಟ್ ಮಾಡಿ ಕೆಕೆಆರ್​ 10 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿದೆ.

Virat Kohli: ವಿರಾಟ್ ಕೊಹ್ಲಿ ಪಾಲಿನ ಮಹತ್ವದ ಪಂದ್ಯ ಮತ್ತು RCBಯ ಎರಡು ಹೀನಾಯ ಸೋಲುಗಳು
ವಿರಾಟ್ ಕೊಹ್ಲಿ: ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇದು ಕೊಹ್ಲಿ ಸಾರಥ್ಯದಲ್ಲಿ ನಡೆಯಲಿರುವ ಕೊನೆಯ ಟಿ20 ವಿಶ್ವಕಪ್ ಎಂಬುದು ವಿಶೇಷ. ಅಂದರೆ ಈ ಬಾರಿಯ ಟಿ20 ವಿಶ್ವಕಪ್​​ ಬಳಿಕ ಕೊಹ್ಲಿ ಟೀಮ್ ಇಂಡಿಯಾ ಟಿ20 ತಂಡಕ್ಕೆ ರಾಜೀನಾಮೆ ನೀಡಲಿದ್ದಾರೆ.
TV9 Web
| Edited By: |

Updated on: Sep 21, 2021 | 3:44 PM

Share

ವಿರಾಟ್ ಕೊಹ್ಲಿಯ (Virat Kohli) 200ನೇ ಐಪಿಎಲ್ (IPL 2021) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)  9 ವಿಕೆಟ್ ಗಳಿಂದ ಹೀನಾಯ ಸೋಲು ಅನುಭವಿಸಿದೆ. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ (KKR)​ ವಿರುದ್ದದ ಪಂದ್ಯದಲ್ಲಿ ಕೊಹ್ಲಿ ಪಡೆ ಕೇವಲ 92 ರನ್​ಗಳಿಗೆ ಆಲೌಟ್ ಆಯಿತು. ಇತ್ತ ಸುಲಭ ಗುರಿ ಪಡೆದ ಕೆಕೆಆರ್ ಕೇವಲ 10 ಓವರ್‌ಗಳಲ್ಲಿ ಗುರಿ ಮುಟ್ಟುವ ಮೂಲಕ ಭರ್ಜರಿ ಗೆಲುವು ದಾಖಲಿಸಿತು. ಕಾಕತಾಳೀಯ ಎಂಬಂತೆ ಆರ್​ಸಿಬಿ (RCB) ತಂಡದ ಈ ಸೋಲು 13 ವರ್ಷಗಳ ಹಳೆಯ ಹೀನಾಯ ಸೋಲನ್ನು ನೆನಪಿಸುವಂತಿದೆ. ಏಕೆಂದರೆ ಆರ್​ಸಿಬಿ ತಂಡದ ಎರಡು ಅತ್ಯಂತ ಹೀನಾಯ ಸೋಲು ಕಂಡು ಬಂದಿದ್ದು ಕೆಕೆಆರ್​ ವಿರುದ್ದ. ಆ ಎರಡು ಪಂದ್ಯಗಳು ಕೂಡ ಕೊಹ್ಲಿ ಪಾಲಿಗೆ ಮಹತ್ವದ್ದಾಗಿತ್ತು ಎಂಬುದು ಇಲ್ಲಿ ವಿಶೇಷ.

ಹೌದು, 2008 ರಲ್ಲಿ ಚೊಚ್ಚಲ ಐಪಿಎಲ್​ನ ಮೊದಲ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಕೆಕೆಆರ್ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ಪರ ಪದಾರ್ಪಣೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್ ಬ್ರೆಂಡನ್ ಮೆಕಲಂ ಅವರ ಅಜೇಯ 158 ರನ್​ಗಳ ಶತಕದೊಂದಿಗೆ 222 ರನ್​ ಬಾರಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್​ಸಿಬಿ ಕೇವಲ 82 ರನ್​ಗಳಿಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿತು. ಅಂದರೆ ಅಂದು ಆರ್​ಸಿಬಿ ಸೋತಿದ್ದು 140 ರನ್​ಗಳ ಬೃಹತ್ ಅಂತರದಿಂದ. ಇದು ರನ್​ಗಳ ಅಂತರದ ಆರ್​ಸಿಬಿ ತಂಡದ ಹೀನಾಯ ಸೋಲು ಎಂಬ ದಾಖಲೆ ಉಳಿಸಿಕೊಂಡಿದೆ. ಇನ್ನು ಐಪಿಎಲ್​ನ ಚೊಚ್ಚಲ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಗಳಿಸಿದ್ದು ಕೇವಲ 1 ರನ್​ ಮಾತ್ರ.

ಇದೀಗ ಕೆಕೆಆರ್ ವಿರುದ್ದ ಕಣಕ್ಕಿಳಿಯುವ ಮೂಲಕ ವಿರಾಟ್ ಕೊಹ್ಲಿ​ 200 ಪಂದ್ಯಗಳನ್ನು ಪೂರೈಸಿದ್ದಾರೆ. ತಮ್ಮ ಮಹತ್ವದ ಪಂದ್ಯದಲ್ಲಿ ಕೇವಲ 5 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು 92 ರನ್​ಗಳಿಗೆ ಆರ್​ಸಿಬಿಯನ್ನು ಆಲೌಟ್ ಮಾಡಿ ಕೆಕೆಆರ್​ 10 ಓವರ್​ನಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿಮುಟ್ಟಿದೆ. ಈ ಮೂಲಕ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಅಷ್ಟೇ ಅಲ್ಲದೆ 60 ಎಸೆತಗಳು ಬಾಕಿಯಿರುವಾಗಲೇ ಆರ್​ಸಿಬಿ ತಂಡವನ್ನು ಬಗ್ಗು ಬಡಿಯುವ ಮೂಲಕ ಕೆಕೆಆರ್​ ಗೆಲುವು ದಾಖಲಿಸಿರುವುದು ವಿಶೇಷ. ಏಕೆಂದರೆ ಬಾಲ್​ಗಳ ಅಂತರದಲ್ಲಿ ಇದು ಆರ್​ಸಿಬಿ ಪಾಲಿನ ಅತ್ಯಂತ ಹೀನಾಯ ಸೋಲು. ಅಂದರೆ ಕಾಕತಾಳೀಯ ಎಂಬಂತೆ ಕೊಹ್ಲಿಯ ಪಾಲಿನ ಮಹತ್ವದ ಎರಡು ಪಂದ್ಯಗಳಲ್ಲೇ ಆರ್​ಸಿಬಿ ಐಪಿಎಲ್​ನ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿರುವುದು ಇಲ್ಲಿ ವಿಶೇಷ.

ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!

ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: IPL 2021: ಪ್ಲೇ ಆಫ್​ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

(Virat Kohli IPL debut KKR biggest win and Kohli 200 match RCB biggest defeat)

Follow Us
TV9 Web
TV9 Web

TV9 Kannada

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್