90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್ಗಳ ಪಟ್ಟಿ ಇಲ್ಲಿದೆ
best mileage bike in india: ಹೆಚ್ಚು ಮೈಲೇಜ್ ನೀಡುವ ಕೆಲ ಬೈಕ್ಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Updated on: Sep 20, 2021 | 7:39 PM

ದೇಶದಲ್ಲಿ ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ಇತ್ತ ಅನೇಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಆದರೂ ದ್ವಿಚಕ್ರದ ವಾಹನದ ವಿಷಯಕ್ಕೆ ಬಂದರೆ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ಗಳು ಜನ ಸಾಮಾನ್ಯರ ಕೈಗೆಟುವಂತಿಲ್ಲ. ಹೀಗಾಗಿಯೇ ಹೆಚ್ಚು ಮೈಲೇಜ್ ನೀಡುವ ಬೈಕ್ಗಳ ಮೊರೆ ಹೋಗಬೇಕಾಗುತ್ತದೆ. ಅಂತಹ ಕೆಲ ಬೈಕ್ಗಳ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

Bajaj PLATINA - ಬಜಾಜ್ ಪ್ಲಾಟಿನಾ 100 ಎಸ್ ಡ್ರಮ್ ಬೆಲೆ ರೂ 59.859 (ಎಕ್ಸ್ ಶೋರೂಂ-ದೆಹಲಿ). ಈ ಬೈಕಿನಲ್ಲಿ ಬಜಾಜ್ 4-ಸ್ಟ್ರೋಕ್, DTSi ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. ಇದು 7.9Ps ಮತ್ತು 8.3Nm ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್ 1 ಲೀಟರ್ ಪೆಟ್ರೋಲ್ ನಲ್ಲಿ 90 ಕಿಮೀ ಮೈಲೇಜ್ ನೀಡುತ್ತದೆ.

Bajaj CT100 - ಬಜಾಜ್ ಕಂಪೆನಿ CT100 ಮಾಡೆಲ್ ಬೈಕ್ಗಳನ್ನು ಪರಿಚಯಿಸಿದೆ. ಈ ಬೈಕ್‌ನ ದೆಹಲಿ ಎಕ್ಸ್ ಶೋರೂಂ ಬೆಲೆ 47ಸಾವಿರ ರೂ. CT100ರಲ್ಲಿ, ಕಂಪನಿಯು 102 ಸಿಸಿ 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್ ಎಂಜಿನ್ ನೀಡಿದೆ. ಈ ಎಂಜಿನ್ 7500 rpm ನಲ್ಲಿ 5.81 kW ಗರಿಷ್ಠ ಪವರ್ ಹೊಂದಿದೆ. ಈ ಬೈಕಿನಲ್ಲಿ 4-ಸ್ಪೀಡ್ ಗೇರ್ ಬಾಕ್ಸ್ ನೀಡಿದ್ದು, ಇದು ಸಹ 90 ಕಿ.ಮೀ ಮೈಲೇಜ್ ನೀಡುತ್ತೆ ಎಂದು ಕಂಪೆನಿ ತಿಳಿಸಿದೆ.

Hero HF DELUXE- ಹೀರೋ ಮೋಟೋಕಾರ್ಪ್‌ನ ಎಚ್‌ಎಫ್ ಡಿಲಕ್ಸ್ ಬೈಕ್ ಆಕರ್ಷಕ ವಿನ್ಯಾಸ ಹೊಂದಿದೆ. ಇದು ಎರಡು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅದರಂತೆ ಎಚ್‌ಎಫ್ ಡಿಲಕ್ಸ್ ಫಸ್ಟ್ ಮಾಡೆಲ್ ಎಕ್ಸ್ಶೋ ರೂಂ ಬೆಲೆ 51,200 ರೂ. ಹಾಗೆಯೇ ಟಾಪ್ ಎಡಿಷನ್ ಬೆಲೆ 60,025 ರೂ. ಕಂಪನಿಯು ಈ ಬೈಕಿನಲ್ಲಿ 97.2 ಸಿಸಿ ಎಂಜಿನ್ ಅನ್ನು ನೀಡಿದ್ದು, ಇದು 5.9 ಕಿಲೋವ್ಯಾಟ್ ಶಕ್ತಿ ಮತ್ತು 8.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಒಂದು ಲೀಟರ್ ಪೆಟ್ರೋಲ್ ನಲ್ಲಿ 60 ರಿಂದ 70 ಕಿಮೀ ಮೈಲೇಜ್ ನೀಡುತ್ತದೆ.

TVS Sport - ಟಿವಿಎಸ್‌ನ ಅತ್ಯುತ್ತಮ ಮಾರಾಟವಾದ ಬೈಕ್‌ನಲ್ಲಿ ಟಿವಿಎಸ್ ಸ್ಪೋರ್ಟ್ಸ್ ಬೈಕ್‌ನ ಹೆಸರು ಮುಂಚೂಣಿಯಲ್ಲಿದೆ. ಮೊದಲು ಈ ಬೈಕ್‌ನ ನಿರ್ವಹಣಾ ವೆಚ್ಚವೂ ತುಂಬಾ ಕಡಿಮೆ. ಇದೇ ಕಾರಣದಿಂದ ಅನೇಕರು ಈ ಬೈಕನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬೈಕ್‌ನ ದೆಹಲಿ ಎಕ್ಸ್ ಶೋರೂಂ ಬೆಲೆ 56,100 ರೂ. ಕಂಪನಿಯು ಈ ಬೈಕಿನಲ್ಲಿ 109 ಸಿಸಿ ಎಂಜಿನ್ ಅನ್ನು ನೀಡಿದ್ದು ಇದು 8.18 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಬೈಕ್ ಸಹ 75 ರಿಂದ 85 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

TV9 Kannada
Read More



