Updated on: Sep 21, 2021 | 5:29 PM
ನೋಡಲು ಖ್ಯಾತ ತಾರೆಯರಂತೆಯೇ ಇರುವವರು ಸಖತ್ ಸುದ್ದಿಯಾಗುತ್ತಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ, ಜ್ಯೂ.ಎನ್ಟಿಆರ್ ಮೊದಲಾದ ತಾರೆಯರ ರೀತಿಯೇ ಕಾಣುವ ವ್ಯಕ್ತಿಗಳು ಜನರ ಗಮನ ಸೆಳೆದಿದ್ದರು. ಇದೀಗ ತಮಿಳು ನಟ ವಿಜಯ್ರಂತೆಯೇ ಕಾಣುವ ಯುವಕನ ಸರದಿ.
ಚೆನ್ನೈ ನಿವಾಸಿಯಾದ 27 ವರ್ಷದ ವಿಶ್ವಜಿತ್ ಯೂನಸ್ ನೋಡಲು ವಿಜಯ್ ತರಹವೇ ಕಾಣುತ್ತಾರೆ.
ವಿಜಯ್ ಅಭಿನಯದ ಸಿನಿಮಾಗಳ ತುಣುಕುಗಳನ್ನು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮುಖಾಂತರ ಹರಿಬಿಡುವ ಅವರು ಬಹಳಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ವಿಶ್ವಜಿತ್ ಅವರ ಹಾವಭಾವವೂ ವಿಜಯ್ರಂತೆಯೇ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ. ಇದನ್ನು ಅವರ ಇನ್ಸ್ಟಾ ವಿಡಿಯೊಗಳಲ್ಲಿ ಕಾಣಬಹುದು.
ಈಗಾಗಲೇ ಸಾಮಾಜಿಕ ಜಾಲತಾಣದ ಮುಖಾಂತರ ಎಲ್ಲರ ಮನಗೆದ್ದಿರುವ ವಿಶ್ವಜಿತ್ ಚಿತ್ರರಂಗ ಪ್ರವೇಶಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.