ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ (Indian Premier League) ಎರಡನೇ ಚರಣದಲ್ಲಿ ಇಂದು ನಡೆಯಲಿರುವ 32ನೇ ಪಂದ್ಯದಲ್ಲಿ ಕೆ. ಎಲ್ ರಾಹುಲ್ (KL Rahul) ನಾಯಕತ್ವದ ಪಂಜಾಬ್ ಕಿಂಗ್ಸ್ (Punjab Kings) ಮತ್ತು ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳು ಮುಖಾಮುಖಿ ಆಗುತ್ತಿದೆ. ಪಂಜಾಬ್ ತಂಡ ಈವರೆಗೆ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದು ಕೇವಲ ಮೂರರಲ್ಲಷ್ಟೆ ಗೆಲುವು ಸಾಧಿಸಿದೆ, ಐದು ಪಂದ್ಯಗಳಲ್ಲಿ ಸೋತು 6 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಆರ್ಆರ್ ಸ್ಥಿತಿ ಕೂಡ ಇದೇರೀತಿ ಇದೆ. ಆಡಿದ 7 ಪಂದ್ಯಗಳಲ್ಲಿ ಮೂರರಲ್ಲಿ ಜಯ ಮತ್ತು ನಾಲ್ಕರಲ್ಲಿ ಸೋಲು. 6 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.
ಉಭಯ ತಂಡಗಳಿಗೂ ಪ್ಲೇ ಆಫ್ ಹಾದಿ ದೂರದ ದಾರಿಯಾಗಿದೆ. ಹೀಗಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಪಂಜಾಬ್ ಮತ್ತು ರಾಜಸ್ಥಾನ್ ತಂಡವಿರುವ ಕಾರಣ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ದುಬೈನ್ ಶೇಜ್ ಜಯೇದ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಪಂಜಾಬ್ನ ಪ್ರಮುಖ ಅಸ್ತ್ರವೇ ತನ್ನ ಬ್ಯಾಟಿಂಗ್ ಶಕ್ತಿ. ತಂಡದಲ್ಲಿರುವ ಟಾಪ್ ಆರ್ಡನ್ ಬ್ಯಾಟ್ಸ್ಮನ್ಗಳು ಅನುಭವಿಗಳಾಗಿದ್ದಾರೆ. ನಾಯಕ ಕೆ. ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡ ಪ್ರಮುಖ ಬ್ಯಾಟ್ಸ್ಮನ್ಗಳಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಒಂದುಕಡೆಯಾದರೆ, ಈ ಬಾರಿ ಆದಿಲ್ ರಶೀದ್ ಅವರನ್ನು ಕೊಂಡುಕೊಂಡು ರವಿ ಬಿಷ್ಟೋಯಿ ಜೊತೆ ಸ್ಪಿನ್ ವಿಭಾಗ ಬಲಿಷ್ಠ ಮಾಡಿಕೊಂಡಿದೆ.
ಇತ್ತ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಬಲಿಷ್ಠವಾಗಿದೆ. ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದ್ದು, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಶಿವಂ ದುವೆ, ಲ್ಯಾಮ್ ಲಿವಿಂಗ್ಸ್ಟನ್ ಬ್ಯಾಟಿಂಗ್ ಶಕ್ತಿಯಾದರೆ, ರಾಹುಲ್ ತೇವಾಟಿಯಾ ಮತ್ತು ಕ್ರಿಸ್ ಮೊರೀಸ್ ಆಲ್ರೌಂಡರ್ ಆಗಿದ್ದಾರೆ. ಬೌಲಿಂಗ್ನಲ್ಲೂ ಕಾರ್ತಿಕ್ ತ್ಯಾಗಿ ಮೋಡಿ ಮಾಡಿದ್ದರೆ, ಚೇತನ್ ಸಕರಿಯಾ ಕೂಡ ಉತ್ತಮ ಸ್ಪೆಲ್ ಹೊಂದಿದ್ದಾರೆ.
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ ಒಟ್ಟು 22 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಪಂಜಾಬ್ ಕಿಂಗ್ಸ್ 10 ಪಂದ್ಯಗಳಲ್ಲಿ ಮತ್ತು ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ. ಈ ತಂಡದ ಮೊದಲ ಮುಖಾಮುಖಿಯಲ್ಲಿ ಪಂಜಾಬ್‌ಗೆ 4 ರನ್ಗಳ ರೋಚಕ ಜಯ ಸಾಧಿಸಿತ್ತು. ಮೇಲ್ನೋಟಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ ಬಲಿಷ್ಠವಿರುವಂತೆ ಕಾಣುತ್ತಿದೆ. ಆದರೆ, ಅನುಭವಿ ಆಟಗಾರರಿರುವ ಪಂಜಾಬ್ ತಂಡವನ್ನೂ ಕಡೆಗಣಿಸುವಂತಿಲ್ಲ.
ಪಾಕ್ಗೆ ಮತ್ತೆ ಮುಖಭಂಗ: ನ್ಯೂಜಿಲೆಂಡ್ ಬಳಿಕ ಸರಣಿಯಿಂದ ಹಿಂದೆ ಸರಿದ ಇಂಗ್ಲೆಂಡ್
(IPL 2021 Punjab vs Rajasthan for Match No 32 of the 2021 edition of the Indian Premier League)