ಪಾಕ್​ಗೆ ಮತ್ತೆ ಮುಖಭಂಗ: ನ್ಯೂಜಿಲೆಂಡ್ ಬಳಿಕ ಸರಣಿಯಿಂದ ಹಿಂದೆ ಸರಿದ ಇಂಗ್ಲೆಂಡ್

England vs Pakistan: ಅಕ್ಟೋಬರ್ 13 ಮತ್ತು 14 ರಂದು ಇಂಗ್ಲೆಂಡ್ ಪುರುಷರ ತಂಡವು ಪಾಕಿಸ್ತಾನದಲ್ಲಿ ಎರಡು ಟಿ 20 ಪಂದ್ಯಗಳನ್ನು ಆಡಬೇಕಿತ್ತು.

ಪಾಕ್​ಗೆ ಮತ್ತೆ ಮುಖಭಂಗ: ನ್ಯೂಜಿಲೆಂಡ್ ಬಳಿಕ ಸರಣಿಯಿಂದ ಹಿಂದೆ ಸರಿದ ಇಂಗ್ಲೆಂಡ್
England vs Pakistan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 20, 2021 | 10:01 PM

ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಪಾಕಿಸ್ತಾನ್ ವಿರುದ್ದದ ಸರಣಿಯಿಂದ ಇಂಗ್ಲೆಂಡ್ ತಂಡವು ಹಿಂದೆ ಸರಿದಿದೆ. ಕೆಲ ದಿನಗಳ ಹಿಂದೆಯಷ್ಟೇ ಭದ್ರತಾ ಕಾರಣವೊಡ್ಡಿ ನ್ಯೂಜಿಲೆಂಡ್ ತಂಡ ಕೂಡ ಪಾಕ್ ವಿರುದ್ದದ ಸರಣಿಯಿಂದ ಹಿಂದೆ ಸರಿದಿತ್ತು. ಇದೀಗ ಇಂಗ್ಲೆಂಡ್ ತಂಡ ಕೂಡ ಪಾಕಿಸ್ತಾನ್​ನಲ್ಲಿ ಸರಣಿ ಆಡುವ ಒಪ್ಪಂದದಿಂದ ಹಿಂದೆ ಸರಿದಿದ್ದು, ಇದರೊಂದಿಗೆ 6 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಆಯೋಜಿಸುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಕನಸು ಭಗ್ನಗೊಂಡಿದೆ.

ಟಿ20 ವಿಶ್ವಕಪ್​ಗೂ ಮುನ್ನ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಸರಣಿ ಆಯೋಜಿಸಿ ಭರ್ಜರಿ ತಯಾರಿ ನಡೆಸುವ ಇರಾದೆಯಲ್ಲಿತ್ತು ಪಾಕಿಸ್ತಾನ್. ಅದಕ್ಕಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್​ನಲ್ಲಿ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿತ್ತು. ಅದರಂತೆ ನ್ಯೂಜಿಲೆಂಡ್ ತಂಡ ಪಾಕ್​ಗೆ ತೆರಳಿದರೂ ಭದ್ರತಾ ವೈಫಲ್ಯದ ಕಾರಣದೊಂದಿಗೆ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳಿರುವಾಗ ಸರಣಿಯಿಂದ ಹಿಂದೆ ಸರಿದು ವಾಪಾಸಾಗಿತ್ತು. ಇದೀಗ ಇಂಗ್ಲೆಂಡ್ ಕೂಡ ಪುರುಷ ಹಾಗೂ ಮಹಿಳಾ ತಂಡಗಳ ಪಾಕ್ ಸರಣಿಯನ್ನು ರದ್ದುಗೊಳಿಸಿರುವುದಾಗಿ ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್ ತಿಳಿಸಿದೆ.

ಅಕ್ಟೋಬರ್ 13 ಮತ್ತು 14 ರಂದು ಇಂಗ್ಲೆಂಡ್ ಪುರುಷರ ತಂಡವು ಪಾಕಿಸ್ತಾನದಲ್ಲಿ ಎರಡು ಟಿ 20 ಪಂದ್ಯಗಳನ್ನು ಆಡಬೇಕಿತ್ತು. ಹಾಗೆಯೇ ಇಂಗ್ಲೆಂಡ್ ಮಹಿಳಾ ತಂಡವು ಸೀಮಿತ ಓವರ್‌ಗಳ ಸರಣಿಗಾಗಿ ಪಾಕ್ ಪ್ರವಾಸ ಕೈಗೊಳ್ಳಬೇಕಿತ್ತು. ಇದೀಗ ಸರಣಿಗಳನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಕೈಬಿಟ್ಟಿದೆ.

“ನಮ್ಮ ಆಟಗಾರರ ಮತ್ತು ಸಹಾಯಕ ಸಿಬ್ಬಂದಿಯ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವು ನಮ್ಮ ಅತ್ಯುನ್ನತ ಆದ್ಯತೆಯಾಗಿದೆ. ಪ್ರಸ್ತುತ ಕೋವಿಡ್​ ಪರಿಸ್ಥಿತಿಗಳನ್ನು ಗಮನಿಸಿದರೆ ಇದು ಹೆಚ್ಚು ನಿರ್ಣಾಯಕವಾಗಿದೆ. ಇಂತಹ ಸಮಯದಲ್ಲಿ ಪಾಕ್​ ಪ್ರವಾಸ ಕೈಗೊಂಡರೆ ಆಟಗಾರರಲ್ಲೂ ಮತ್ತಷ್ಟು ಒತ್ತಡ ಉಂಟಾಗಲಿದೆ. ಹೀಗಾಗಿ ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

“ನಮ್ಮ ಈ ನಿರ್ಧಾರದಿಂದ ಪಿಸಿಬಿಗೆ ನಿರಾಶೆಯಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ಆತಿಥ್ಯ ವಹಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಇದರಿಂದ ಪಾಕಿಸ್ತಾನ್ ಕ್ರಿಕೆಟ್ ಮೇಲೆ ಬೀರುವ ಪರಿಣಾಮಕ್ಕಾಗಿ ನಾವು ಪ್ರಾಮಾಣಿಕವಾಗಿ ವಿಷಾದಿಸುತ್ತೇವೆ. ಅಷ್ಟೇ ಅಲ್ಲದೆ 2022 ರಲ್ಲಿ ಪಾಕ್​ನಲ್ಲಿ ಸರಣಿ ಆಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ತಿಳಿಸಿದೆ.

ಇದನ್ನೂ ಓದಿ: Taliban bans IPL 2021: ಐಪಿಎಲ್ ಬ್ಯಾನ್ ಮಾಡಿದ ತಾಲಿಬಾನಿಗಳು: ಕಾರಣ ಕೇಳಿದ್ರೆ ದಂಗಾಗ್ತೀರಾ..!

ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು

ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್

ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್​ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್​ ಸ್ಪೀಕರ್

(England call off Pakistan tour after New Zealand security scare)