Updated on: Sep 18, 2021 | 4:14 PM
ಐಪಿಎಲ್ ದ್ವಿತಿಯಾರ್ಧ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ಮುಖಾಮುಖಿಯಾಗಲಿದ್ದು, ಇದರೊಂದಿಗೆ ಉಳಿದ 31 ಪಂದ್ಯಗಳಿಗೆ ಚಾಲನೆ ದೊರೆಯಲಿದೆ.
ಒಟ್ಟಿನಲ್ಲಿ ಐಪಿಎಲ್ನಲ್ಲಿ 2011ರ ಬಳಿಕ ಮತ್ತೊಮ್ಮೆ 10 ತಂಡಗಳನ್ನು ಕಣಕ್ಕಿಳಿಯಲ್ಲಿದ್ದು, ಅದರಂತೆ ಯಾವ ಹೊಸ ತಂಡಗಳು ಸೇರ್ಪಡೆಯಾಗಲಿದೆ ಕಾದು ನೋಡಬೇಕಿದೆ.
ನಾಥನ್ ಎಲ್ಲಿಸ್ (ಪಂಜಾಬ್ ಕಿಂಗ್ಸ್): ಆಸ್ಟ್ರೇಲಿಯಾದ ವೇಗದ ಬೌಲರ್ ರಿಲೆ ಮೆರೆಡಿತ್ ಬದಲಿಗೆ ಆಸೀಸ್ ಬೌಲರ್ ನಾಥನ್ ಎಲ್ಲಿಸ್ ಪಂಜಾಬ್ ಕಿಂಗ್ಸ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಐಡೆನ್ ಮಾರ್ಕ್ರಮ್ (ಪಂಜಾಬ್ ಕಿಂಗ್ಸ್): ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಮ್ ಇಂಗ್ಲೆಂಡ್ನ ಡೇವಿಡ್ ಮಲಾನ್ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಆದಿಲ್ ರಶೀದ್ (ಪಂಜಾಬ್ ಕಿಂಗ್ಸ್): ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದ ಆಸೀಸ್ ವೇಗಿ ಜೇ ರಿಚರ್ಡ್ಸನ್ ಬದಲಿಯಾಗಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಪಂಜಾಬ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಗ್ಲೆನ್ ಫಿಲಿಪ್ಸ್ (ರಾಜಸ್ಥಾನ್ ರಾಯಲ್ಸ್): ನ್ಯೂಜಿಲ್ಯಾಂಡ್ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಗ್ಲೆನ್ ಫಿಲಿಪ್ಸ್, ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಬದಲಿಯಾಗಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದಾರೆ.
ಜಾರ್ಜ್ ಗಾರ್ಟನ್ (RCB): ಇಂಗ್ಲೆಂಡ್ ಯುವ ಎಡಗೈ ವೇಗಿ ಜಾರ್ಜ್ ಗಾರ್ಟನ್ ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್ ಬದಲಿ ಆಟಗಾರನಾಗಿ ಆರ್‌ಸಿಬಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಟಿಮ್ ಡೇವಿಡ್ (ಆರ್‌ಸಿಬಿ): ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಫಿನ್ ಅಲೆನ್ ಬದಲಿಯಾಗಿ ಸಿಂಗಾಪೂರ್ ಸ್ಟಾರ್ ಆಟಗಾರ ಟಿಮ್ ಡೇವಿಡ್ ಆರ್‌ಸಿಬಿ ತಂಡದ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಲಿದ್ದಾರೆ.
ವನಿಂದು ಹಸರಂಗ (ಆರ್‌ಸಿಬಿ): ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಬದಲಿಯಾಗಿ ಆರ್‌ಸಿಬಿ ತಂಡದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದಾರೆ.
ದುಷ್ಮಂತ ಚಮೀರಾ (ಆರ್‌ಸಿಬಿ): ಆರ್‌ಸಿಬಿ ತಂಡದಲ್ಲಿದ್ದ ಕೇನ್ ರಿಚರ್ಡ್ಸನ್ ಬದಲಿಯಾಗಿ ಇದೇ ಮೊದಲ ಬಾರಿಗೆ ಶ್ರೀಲಂಕಾ ವೇಗಿ ದುಷ್ಮಂತ ಚಮೀರಾ ಐಪಿಎಲ್ನಲ್ಲಿ ಚಾನ್ಸ್ ಪಡೆದಿದ್ದಾರೆ.
ಟಿಮ್ ಸೀಫರ್ಟ್ (ಕೆಕೆಆರ್): ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಬದಲಿಯಾಗಿ ಐಪಿಎಲ್ನಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದಾರೆ.
ಬೆನ್ ದ್ವಾರಶೂಯಿಸ್ (ಡೆಲ್ಲಿ ಕ್ಯಾಪಿಟಲ್ಸ್): ಆಸ್ಟ್ರೇಲಿಯಾದ ವೇಗದ ಬೌಲರ್ ಬೆನ್ ದ್ವಾರಶೂಯಿಸ್ ಇಂಗ್ಲೆಂಡ್ ಆಟಗಾರ ಕ್ರಿಸ್ ವೋಕ್ಸ್ ಬದಲಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಚೊಚ್ಚಲ ಅವಕಾಶ ಪಡೆದಿದ್ದಾರೆ.