Taliban bans IPL 2021: ಐಪಿಎಲ್ ಬ್ಯಾನ್ ಮಾಡಿದ ತಾಲಿಬಾನಿಗಳು: ಕಾರಣ ಕೇಳಿದ್ರೆ ದಂಗಾಗ್ತೀರಾ..!

Taliban bans IPL 2021: ಈ ಹಿಂದೆ ಸಿನಿಮಾ ಹಾಗೂ ಇನ್ನಿತರ ಮನರಂಜನೆಗಳಿಗೆ ನಿಷೇಧ ಹೇರಿದ್ದ ತಾಲಿಬಾನಿಗಳು, ಇದೀಗ ಐಪಿಎಲ್​ಗೂ ನಿಷೇಧ ಹೇರುವ ಮೂಲಕ ಅಫ್ಘಾನ್ ಕ್ರಿಕೆಟ್​ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ.

Taliban bans IPL 2021: ಐಪಿಎಲ್ ಬ್ಯಾನ್ ಮಾಡಿದ ತಾಲಿಬಾನಿಗಳು: ಕಾರಣ ಕೇಳಿದ್ರೆ ದಂಗಾಗ್ತೀರಾ..!
ಸಾಂದರ್ಭಿಕ ಚಿತ್ರ

ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟ್​ ಟೂರ್ನಿ ಇಂಡಿಯನ್ ಪ್ರೀಮಿಯರ್ (IPL 2021)​ ಬಹುತೇಕ ದೇಶಗಳಲ್ಲಿ ನೇರ ಪ್ರಸಾರವಾಗುತ್ತಿದೆ. ಇತ್ತ ಅಫ್ಘಾನಿಸ್ತಾನದ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಅಲ್ಲೂ ಕೂಡ ಎಲ್ಲಾ ತಂಡಗಳಿಗೂ ಅಭಿಮಾನಿಗಳಿದ್ದಾರೆ. ಅದರಂತೆ ಮೊದಲಾರ್ಧದ ಟೂರ್ನಿಯನ್ನು ವೀಕ್ಷಿಸಿದ್ದ ಅಫ್ಘಾನ್ ಕ್ರಿಕೆಟ್ ಪ್ರೇಮಿಗಳಿಗೆ ದ್ವಿತಿಯಾರ್ಧದ ಪಂದ್ಯ ವೀಕ್ಷಿಸುವ ಭಾಗ್ಯವಿಲ್ಲ. ಹೌದು, ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನಿಗಳು ಇದೀಗ ಐಪಿಎಲ್​ ಅನ್ನು ನಿಷೇಧಿಸಿದೆ. ಈ ಹಿಂದೆ ಮಹಿಳಾ ಕ್ರಿಕೆಟ್​ ಅನ್ನು ನಿಷೇಧಿಸಿ ಸುದ್ದಿಯಲ್ಲಿದ್ದ ತಾಲಿಬಾನಿಗಳು ಈ ಬಾರಿ ಅಫ್ಘಾನಿಸ್ತಾನದಲ್ಲಿ ಐಪಿಎಲ್​ ಪ್ರಸಾರ ಮಾಡಕೂಡದು ಎಂದು ಆದೇಶ ಹೊರಡಿಸಿದೆ. ಇದಕ್ಕೆ ನೀಡಿರುವ ಕಾರಣ ಐಪಿಎಲ್​ ಇಸ್ಲಾಂ ವಿರೋಧಿ ಎಂಬುದು.

ಐಪಿಎಲ್​ ಟೂರ್ನಿ ವೇಳೆ ತುಂಡುಡುಗೆಯಲ್ಲಿ ಮಹಿಳೆಯರು ನೃತ್ಯ ಮಾಡುತ್ತಾರೆ. ಅಲ್ಲದೆ ಐಪಿಎಲ್​ ವೇಳೆ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ಇದು ಇಸ್ಲಾಂಗೆ ವಿರುದ್ದವಾಗಿದ್ದು, ಹಾಗಾಗಿ ಅಫ್ಘಾನಿಸ್ತಾನದಲ್ಲಿ ಐಪಿಎಲ್ ಟೂರ್ನಿಯ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ ಎಂದು ಮಾಜಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಧ್ಯಮ ವ್ಯವಸ್ಥಾಪಕ ಮತ್ತು ಪತ್ರಕರ್ತ, ಎಂ. ಇಬ್ರಾಹಿಂ ಮೊಮಾಂಡ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಹಿಂದೆ ಸಿನಿಮಾ ಹಾಗೂ ಇನ್ನಿತರ ಮನರಂಜನೆಗಳಿಗೆ ನಿಷೇಧ ಹೇರಿದ್ದ ತಾಲಿಬಾನಿಗಳು, ಇದೀಗ ಐಪಿಎಲ್​ಗೂ ನಿಷೇಧ ಹೇರುವ ಮೂಲಕ ಅಫ್ಘಾನ್ ಕ್ರಿಕೆಟ್​ ಪ್ರೇಮಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಅತ್ತ ಅಫ್ಘಾನ್​ ಮಹಿಳಾ ತಂಡಕ್ಕೆ ನಿಷೇಧ ಹೇರಿದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಅಫ್ಘಾನಿಸ್ತಾನ್​ ತಂಡದ ಜೊತೆ ಸರಣಿ ಆಡುವುದಿಲ್ಲ ಎಂದು ತಿಳಿಸಿದೆ. ಈ ಮೂಲಕ ಅಫ್ಘಾನ್ ಮಹಿಳಾ ಸ್ವಾತಂತ್ರ್ಯ ಹರಣದ ವಿರುದ್ದ ಪರೋಕ್ಷವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಸಮರ ಸಾರಿದೆ.

ಇದಾಗ್ಯೂ ತಾಲಿಬಾನಿಗಳು ಐಪಿಎಲ್​ಗೆ ನಿಷೇಧ ಹೇರುವ ಮೂಲಕ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇತ್ತ ಐಪಿಎಲ್​ನಲ್ಲಿ ಅಫ್ಘಾನಿಸ್ತಾನ್​ ಆಟಗಾರರಾದ ಮುಜೀಬ್​ ಉರ್ ರೆಹಮಾನ್, ರಶೀದ್ ಖಾನ್ ಹಾಗೂ ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದು, ಇವರ ಆಟವನ್ನು ವೀಕ್ಷಿಸಲು ಈಗ ಅಫ್ಘಾನಿಸ್ತಾನ್​ ಕ್ರಿಕೆಟ್ ಪ್ರೇಮಿಗಳಿಗೆ ಭಾಗ್ಯವಿಲ್ಲದಂತಾಗಿದೆ.

ಇದನ್ನೂ ಓದಿ: IPL 2021: 5 ತಂಡಗಳಲ್ಲಿ 10 ಹೊಸ ವಿದೇಶಿ ಆಟಗಾರರು

ಇದನ್ನೂ ಓದಿ: IPL 2021: RCB ತಂಡದ ಗೇಮ್ ಚೇಂಜರ್ ಆಗಲಿದ್ದಾರೆ ಟಿಮ್ ಡೇವಿಡ್

ಇದನ್ನೂ ಓದಿ: ಗೂಗಲ್ ಬಿಗ್ ಆಫರ್: ಸ್ಮಾರ್ಟ್​ಫೋನ್ ಜೊತೆ ಕೇವಲ 1 ರೂ.ಗೆ ಸ್ಮಾರ್ಟ್​ ಸ್ಪೀಕರ್

(Taliban bans IPL 2021, no place for ‘anti-Islamic’ content)

Read Full Article

Click on your DTH Provider to Add TV9 Kannada