AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021, RCB vs KKR: ಆರ್​ಸಿಬಿ ಪಂದ್ಯಕ್ಕೆ ಇದೆಯೇ ವರುಣನ ಕಾಟ: ಇಲ್ಲಿದೆ ಹವಾಮಾನ ಮತ್ತು ಪಿಚ್ ವರದಿ

ಆರ್​ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯ ನಡೆಯಲಿರುವ ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನ ಪಿಚ್ ವೇಗಿ ಮತ್ತು ಸ್ಪಿನ್ನರ್‌ಗಳಿಗೆ ನೆರವು ನೀಡುವ ಗುಣವನ್ನು ಹೊಂದಿದೆ.

IPL 2021, RCB vs KKR: ಆರ್​ಸಿಬಿ ಪಂದ್ಯಕ್ಕೆ ಇದೆಯೇ ವರುಣನ ಕಾಟ: ಇಲ್ಲಿದೆ ಹವಾಮಾನ ಮತ್ತು ಪಿಚ್ ವರದಿ
KKR vs RCB
TV9 Web
| Updated By: Vinay Bhat|

Updated on: Sep 20, 2021 | 10:22 AM

Share

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2021) ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಇದೀಗ ಎರಡನೇ ಚರಣಕ್ಕೆ ಸಜ್ಜಾಗಿ ನಿಂತಿದೆ. ಇಂದು ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದು ಗೆಲುವಿನ ಲೆಕ್ಕಾಚಾರದಲ್ಲಿದೆ. ಆರ್​ಸಿಬಿ (RCB) ತಂಡ ಸದ್ಯ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು ಇದರಲ್ಲಿ ಐದರಲ್ಲಿ ಗೆಲುವು ಸಾಧಿಸಿ ಕೇವಲ ಎರಡರಲ್ಲಷ್ಟೆ ಸೋತಿದೆ. 10 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಆರ್​ಸಿಬಿಯ ನೆಟ್ ರನ್​ರೇಟ್ -0.171 ಇಂದು ಇದನ್ನು ಪ್ಲಸ್ ಆಗಿ ಕನ್ವರ್ಟ್ ಮಾಡಬೇಕಿದೆ. ಇದಕ್ಕಾಗಿ ಕೊಹ್ಲಿ (Virat Kohli) ಪಡೆ ದೊಡ್ಡ ಮೊತ್ತ ಎದುರು ನೋಡಬೇಕಿದೆ. ಐಪಿಎಲ್​ನ (IPL 2021) ಈ ಹೈವೋಲ್ಟೇಜ್ ಪಂದ್ಯಕ್ಕೆ ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂ (Sheikh Zayed Stadium) ಸಾಕ್ಷಿಯಾಗಲಿದೆ. ಇಲ್ಲಿನ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ. ಗರಿಷ್ಠ ಸ್ಕೋರ್ ಎಷ್ಟು, ಹವಾಮಾನ ವರದಿ ಕುರಿತ ಮಾಹಿತಿ ಇಲ್ಲಿದೆ. 

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದಿದೆ.

ಪಿಚ್ ಹೇಗಿದೆ?:

ಆರ್​ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯ ನಡೆಯಲಿರುವ ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನ ಪಿಚ್ ವೇಗಿ ಮತ್ತು ಸ್ಪಿನ್ನರ್‌ಗಳಿಗೆ ನೆರವು ನೀಡುವ ಗುಣವನ್ನು ಹೊಂದಿದೆ. ಈ ಮೈದಾನದ ಐಪಿಎಲ್ ಪಂದ್ಯಗಳಲ್ಲಿ 170 ರನ್ ಸರಾಸರಿ ಮೊತ್ತವಾಗಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ ನಿರ್ಧಾರವಾಗಿದೆ.

ಮಳೆ ಸಾಧ್ಯತೆ?:

ಅಬುಧಾಬಿಯಲ್ಲಿ ಶೇ. 30 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನವಿದೆ. ಹೀಗಾಗಿ ಮಳೆ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ. ಆದರೆ, ಸೆಕೆಂಡ್ ಇನ್ನಿಂಗ್ಸ್ ವೇಳೆಗೆ ಡ್ಯೂ ಇರುವ ಕಾರಣ ಪಂದ್ಯಕ್ಕೆ ಕೊಂಚ್ ಹಿನ್ನಡೆಯಾಗಬಹುದು ಎನ್ನಲಾಗಿದೆ.

ಟಿ-20 ದಾಖಲೆ:

ಅಬುಧಾಬಿಯ ಶೇಕ್ ಜಾಯೆದ್ ಸ್ಟೇಡಿಯಂನಲ್ಲಿ ಒಟ್ಟು 47 ಟಿ-20 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 22 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, 25 ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡ ಗೆದ್ದ ಇತಿಹಾಸವಿದೆ.

ಗರಿಷ್ಠ ಮೊದಲ ಇನ್ನಿಂಗ್ಸ್​ ಸ್ಕೋರ್: 225/7

ಕನಿಷ್ಠ ಮೊದಲ ಇನ್ನಿಂಗ್ಸ್​ ಸ್ಕೋರ್: 87ಕ್ಕೆ ಆಲೌಟ್

ಗರಿಷ್ಠ ರನ್ ಚೇಸ್: 166/6

ಸಂಭಾವ್ಯ ಪ್ಲೇಯಿಂಗ್ XI:

ಆರ್​ಸಿಬಿ: ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ (ನಾಯಕ), ರಜತ್ ಪಟಿದಾರ / ಮೊಹಮ್ಮದ್ ಅಜರುದ್ದಿನ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್ (ವಿಕೆಟ್ ಕೀಪರ್), ಶಹ್ಬಾಜ್ ಅಹ್ಮದ್, ವಾನಿಂದು ಹಸರಂಗ, ಕೈಲ್ ಜೇಮಿಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್.

ಕೆಕೆಆರ್: ಶುಭಮಾನ್ ಗಿಲ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಇವೊಯಿನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಸುನೀಲ್ ನಾರಾಯಣ್, ಪ್ರಸಿದ್ಧಕೃಷ್ಣ, ಶಿವಂ ಮಾವಿ, ಲಾಕಿ ರ್ಗ್ಯುಸನ್, ವರುಣ್ ಚಕ್ರವರ್ತಿ.

IPL 2021, KKR vs RCB: ಇಂದು ವಿಶೇಷ ಕಾರಣದೊಂದಿಗೆ ಕಣಕ್ಕಿಳಿಯುತ್ತಿದೆ ಆರ್​ಸಿಬಿ: ಮಾಹಿತಿ ಹಂಚಿಕೊಂಡ ವಿರಾಟ್ ಕೊಹ್ಲಿ

IPL 2021, KKR vs RCB: ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಕೊಹ್ಲಿಯ ಮಾಸ್ಟರ್ ಪ್ಲಾನ್: ಇಲ್ಲಿದೆ ನೋಡಿ ಸಂಭಾವ್ಯ ಪ್ಲೇಯಿಂಗ್ XI

(IPL 2021 RCB vs KKR Abu Dhabi Weather Update Pitch Report And Venue Records)