IPL 2021: ನಾಯಕನಿಲ್ಲದೆ ಯುಎಇಗೆ ಹಾರಿದ ಆರ್​ಸಿಬಿ ಬಳಗ; ಮೊದಲ ಪಂದ್ಯ ಯಾರ ವಿರುದ್ಧ ಗೊತ್ತಾ?

| Updated By: ಪೃಥ್ವಿಶಂಕರ

Updated on: Aug 29, 2021 | 2:38 PM

IPL 2021: ಸೆಪ್ಟೆಂಬರ್ 19 ರಿಂದ ಆರ್‌ಸಿಬಿ ತಮ್ಮ ಎರಡನೇ ಹಂತದ ಅಭಿಯಾನವನ್ನು ಆರಂಭಿಸಲಿದೆ. ಕೊಹ್ಲಿ ಬಳಗ ಅಬುಧಾಬಿಯಲ್ಲಿ ಕೆಕೆಆರ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದ್ದಾರೆ.

IPL 2021: ನಾಯಕನಿಲ್ಲದೆ ಯುಎಇಗೆ ಹಾರಿದ ಆರ್​ಸಿಬಿ ಬಳಗ; ಮೊದಲ ಪಂದ್ಯ ಯಾರ ವಿರುದ್ಧ ಗೊತ್ತಾ?
ನಾಯಕನಿಲ್ಲದೆ ಯುಎಇಗೆ ಹಾರಿದ ಆರ್ಸಿಬಿ ಬಳಗ
Follow us on

ಎರಡನೇ ಹಂತದ ಐಪಿಎಲ್ ಆರಂಭಕ್ಕೆ ಕೇವಲ 20 ದಿನಗಳು ಮಾತ್ರ ಉಳಿದಿವೆ. ಹೆಚ್ಚಿನ ತಂಡಗಳು ಭಾರತದಿಂದ ಯುಎಇಗೆ ಹೊರಟಿವೆ. ಭಾನುವಾರ, ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಯುಎಇಗೆ ತೆರಳಿತು. ಸೆಪ್ಟೆಂಬರ್ 19 ರಿಂದ ಆರ್‌ಸಿಬಿ ತಮ್ಮ ಎರಡನೇ ಹಂತದ ಅಭಿಯಾನವನ್ನು ಆರಂಭಿಸಲಿದೆ. ಕೊಹ್ಲಿ ಬಳಗ ಅಬುಧಾಬಿಯಲ್ಲಿ ಕೆಕೆಆರ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದ್ದಾರೆ.ಈ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ಯುಎಇ ತಲುಪಿದ್ದವು. ಎರಡನೇ ಹಂತದ ಮೊದಲ ಪಂದ್ಯವನ್ನು ಉಭಯ ತಂಡಗಳ ನಡುವೆ ಆಡಬೇಕಿದ್ದು, ಅದಕ್ಕಾಗಿ ಅವರು ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಅದೇ ಸಮಯದಲ್ಲಿ, ದೆಹಲಿ ಕ್ಯಾಪಿಟಲ್ಸ್ ತಂಡದ ಕ್ವಾರಂಟೈನ್ ಅವಧಿ ಮುಗಿದಿದೆ ಮತ್ತು ಅದು ಕೂಡ ಶೀಘ್ರದಲ್ಲೇ ತರಬೇತಿಯನ್ನು ಆರಂಭಿಸಲಿದೆ.

ಯುಎಇಗೆ ಹೊರಟ ಆರ್‌ಸಿಬಿ
ಆರ್‌ಸಿಬಿ ತನ್ನ ಚಿತ್ರವನ್ನು ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ, ಇದರಲ್ಲಿ ತಂಡದ ಆಟಗಾರರನ್ನು ಹೊರತುಪಡಿಸಿ, ಕೋಚಿಂಗ್ ಮತ್ತು ಸಹಾಯಕ ಸಿಬ್ಬಂದಿಯನ್ನೂ ಕಾಣಬಹುದು. ವಿಮಾನಕ್ಕೆ ಹೊರಡುವ ಮುನ್ನ ಎಲ್ಲರೂ ಒಟ್ಟಿಗೆ ನಿಂತು ಈ ಚಿತ್ರಕ್ಕೆ ಪೋಸ್ ನೀಡಿದರು. ಜೊತೆಗೆ ಆರ್‌ಸಿಬಿ ಕುಟುಂಬ ಯುಎಇಗೆ ಹೊರಟಿದ್ದಾರೆ ಎಂಬ ಶೀರ್ಷಿಕೆಯನ್ನು ನೀಡಿದೆ. ಆದಾಗ್ಯೂ, ಇಂಗ್ಲೆಂಡ್ ನಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ತಂಡದ ನಾಯಕ ಮತ್ತು ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಂಡಕ್ಕೆ ಸೇರಲು ಇನ್ನೂ ಸಮಯಬೇಕು.

ಆರ್‌ಸಿಬಿ ಅತ್ಯುತ್ತಮ ಪ್ರದರ್ಶನ
ಆರ್‌ಸಿಬಿ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿಸಿದೆ. ತಮ್ಮ ಮೊದಲ ನಾಲ್ಕು ಪಂದ್ಯಗಳನ್ನು ಸತತವಾಗಿ ಗೆದ್ದಿದ್ದಲ್ಲದೆ ಪಾಯಿಂಟ್ ಪಟ್ಟಿಯಲ್ಲಿ ಮೇಲಿನ ಸಾಲಿನಲ್ಲಿತ್ತು. ಆರ್‌ಸಿಬಿ ಲೀಗ್‌ನ ಎರಡನೇ ಹಂತದವರೆಗೆ ಏಳು ಪಂದ್ಯಗಳಿಂದ ಐದು ಗೆಲುವಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಬಾರಿ ಕೊಹ್ಲಿ ನಾಯಕತ್ವದ ಆರ್‌ಸಿಬಿ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತಿದೆ.

ಐಪಿಎಲ್ ಎರಡನೇ ಹಂತದ ಆರಂಭಕ್ಕೂ ಮುಂಚೆಯೇ ಆರ್‌ಸಿಬಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ರಾಜೀನಾಮೆ ನೀಡಿದ ನಂತರ, ತಂಡದ ‘ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ’ ಮೈಕ್ ಹೆಸ್ಸನ್ ಅವರನ್ನು ತಂಡದ ಮುಖ್ಯ ತರಬೇತುದಾರರನ್ನಾಗಿ ಮಾಡಲಾಗಿದೆ. ಇದಲ್ಲದೇ, ತಂಡವು ಶ್ರೀಲಂಕಾದ ಸ್ಟಾರ್ ಬೌಲರ್ ವಾನಿಂದು ಹಸರಂಗಾ ಅವರನ್ನು ಆಡಮ್ ಜಂಪಾ ಅವರನ್ನು ತಂಡದಿಂದ ಕೈಬಿಡುವ ಮೂಲಕ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಹಸರಂಗ ಹೊರತಾಗಿ, ಆರ್‌ಸಿಬಿ ಶ್ರೀಲಂಕಾದ ವೇಗದ ಬೌಲರ್ ದುಷ್ಮಂತ ಚಮಿರಾರನ್ನು ತಂಡಕ್ಕೆ ಕರೆತಂದಿದೆ. ಚಮೀರಾ ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್‌ ಬದಲಿಗೆ ಆಡಲಿದ್ದಾರೆ.

ಇದನ್ನೂ ಓದಿ:IPL 2021: ಕೆಕೆಆರ್​ಗೆ ಕೈಕೊಟ್ಟ 15 ಕೋಟಿ ರೂ. ಬೌಲರ್! ಶಾರುಖ್ ತಂಡ ಸೇರಿದ ಆರ್​ಸಿಬಿ ಮಾಜಿ ವೇಗಿ